ರಾಜಮೌಳಿ ಮುಂದಿನ ಪ್ರಾಜೆಕ್ಟ್​ ಯಾವುದು? ದೊಡ್ಡ ಪರದೆ ಬದಲಿಗೆ ಒಟಿಟಿ ಕಡೆಯಿಂದ ಆಫರ್​

Rajamouli Next Movie: ‘ಆರ್​ಆರ್​ಆರ್​’ ಯಶಸ್ಸಿನ ಬಳಿಕ ರಾಜಮೌಳಿ ಮಾಡಲಿರುವ ಸಿನಿಮಾ ಯಾವುದು ಎಂಬ ಬಗ್ಗೆ ಕುತೂಹಲ ಮೂಡಿದೆ. ನೆಟ್​ಫ್ಲಿಕ್ಸ್​ ಕಡೆಯಿಂದ ಅವರಿಗೆ ಆಫರ್​ ನೀಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ರಾಜಮೌಳಿ ಮುಂದಿನ ಪ್ರಾಜೆಕ್ಟ್​ ಯಾವುದು? ದೊಡ್ಡ ಪರದೆ ಬದಲಿಗೆ ಒಟಿಟಿ ಕಡೆಯಿಂದ ಆಫರ್​
ರಾಜಮೌಳಿ
Edited By:

Updated on: Jul 12, 2022 | 8:52 AM

ನಿರ್ದೇಶಕ ರಾಜಮೌಳಿ (SS Rajamouli) ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಅವರ ಸಿನಿಮಾಗೆ ಹಣ ಹೂಡಲು ದೊಡ್ಡ ದೊಡ್ಡ ನಿರ್ಮಾಪಕರು ಕಾದು ಕೂತಿದ್ದಾರೆ. ಈ ವರ್ಷ ತೆರೆಕಂಡ ‘ಆರ್​ಆರ್​ಆರ್​’ (RRR) ಸಿನಿಮಾ ಮೂಲಕ ರಾಜಮೌಳಿ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈವರೆಗೂ ಅವರು ಬಾಕ್ಸ್​ ಆಫೀಸ್​ನಲ್ಲಿ ಸೋತಿದ್ದೇ ಇಲ್ಲ. ಈಗ ಅವರ ಮುಂದಿನ ಪ್ರಾಜೆಕ್ಟ್​ ಬಗ್ಗೆ ಭಾರಿ ನಿರೀಕ್ಷೆ ಮನೆ ಮಾಡಿದೆ. ಈ ಸಂದರ್ಭದಲ್ಲಿ ಅವರಿಗೆ ಒಟಿಟಿ ಕ್ಷೇತ್ರದಿಂದ ಒಂದು ಆಫರ್​ ಬಂದಿದೆ ಎಂಬ ಸುದ್ದಿ ಕೇಳಿಬಂದಿದೆ. ಹೌದು, ನೆಟ್​ಫ್ಲಿಕ್ಸ್​ (Netflix) ಸಂಸ್ಥೆಯು ರಾಜಮೌಳಿ ಅವರಿಗೆ ಭರ್ಜರಿ ಆಫರ್​ ನೀಡಿದೆ ಎಂದು ಹೇಳಲಾಗುತ್ತಿದೆ. ಅದನ್ನು ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ.

ರಾಜಮೌಳಿ ಅವರು ದೊಡ್ಡ ಪರದೆಗಾಗಿಯೇ ಸಿನಿಮಾ ಮಾಡಿ ಸೈ ಎನಿಸಿಕೊಂಡವರು. ಅವರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿದರೆ ಸಿಗುವ ಮಜವೇ ಬೇರೆ. ಹಾಗಿದ್ದರೂ ಕೂಡ ಅವರ ಜೊತೆ ಸಿನಿಮಾ ಮಾಡಲು ನೆಟ್​ಫ್ಲಿಕ್ಸ್​ ಸಂಸ್ಥೆ ಮುಂದೆ ಬಂದಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹಾಗಿದ್ದರೂ ಕೂಡ ಗುಸುಗುಸು ಜೋರಾಗಿದೆ. ರಾಜಮೌಳಿ ಕಡೆಯಿಂದ ಸ್ಪಷ್ಟನೆ ಸಿಗಬಹುದು ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ನಟಿಸಿದರು. ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಬಳಿಕ ರಾಜಮೌಳಿಗೆ ‘ಆರ್​ಆರ್​ಆರ್​’ ಚಿತ್ರ ಕೂಡ ಯಶಸ್ಸು ತಂದುಕೊಟ್ಟಿತು. ಈಗ ಅವರು ಮಹೇಶ್​ ಬಾಬು ಜೊತೆ ಸಿನಿಮಾ ಮಾಡಬೇಕಿದೆ. ಆದರೆ ಆ ಪ್ರಾಜೆಕ್ಟ್​ ಯಾಕೋ ವಿಳಂಬವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಮಹೇಶ್​ ಬಾಬು ಅವರು ರಾಜಮೌಳಿಗೆ ಅನೇಕ ಕಂಡೀಷನ್​ಗಳನ್ನು ಹಾಕಿದ್ದಾರೆ ಎಂಬ ಬಗ್ಗೆ ಇತ್ತೀಚೆಗೆ ಸುದ್ದಿ ಹರಡಿತ್ತು. ರಾಜಮೌಳಿಗೆ ವರ್ಷಗಟ್ಟಲೆ ಕಾಲ್​ಶೀಟ್​ ಕೊಡಲು ಮಹೇಶ್​ ಬಾಬು ಮೀನಾಮೇಷ ಎಣಿಸುತ್ತಿ​ದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಹಾಗಾಗಿ ಮಹೇಶ್​ ಬಾಬು ಜೊತೆಗಿನ ಸಿನಿಮಾ​ ಸೆಟ್ಟೇರುವುದಕ್ಕೂ ಮುನ್ನ ರಾಜಮೌಳಿ ಅವರು ನೆಟ್​ಫ್ಲಿಕ್ಸ್​ಗಾಗಿ ಯಾವುದಾದರೂ ಪ್ರಾಜೆಕ್ಟ್ ಶುರು ಮಾಡುವ ಸಾಧ್ಯತೆ ಹೆಚ್ಚಿದೆ.

 

Published On - 8:51 am, Tue, 12 July 22