ನಟ ಸಲ್ಮಾನ್ ಖಾನ್ (Salman Khan) ಅವರು ವೃತ್ತಿ ಜೀವನದಲ್ಲಿ ತಮ್ಮದೇ ಆದ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅವರು ತೆರೆಮೇಲೆ ಲಿಪ್ ಲಾಕ್ ಮಾಡುವುದಿಲ್ಲ. ಅವರ ಸಿನಿಮಾಗಳಲ್ಲಿ ಅಸಭ್ಯ ದೃಶ್ಯಗಳಿಗೆ ಜಾಗ ಇರೋದಿಲ್ಲ. ಇದನ್ನು ಸಲ್ಲು ಈಗಲೂ ಫಾಲೋ ಮಾಡುತ್ತಿದ್ದಾರೆ. ಎಷ್ಟೇ ಕೋಟಿ ರೂಪಾಯಿ ಕೊಡುತ್ತೇನೆ ಎಂದರೂ ಸಲ್ಲು ಈ ನಿಯಮ ಮೀರೋದಿಲ್ಲ. ಈಗ ಸಲ್ಮಾನ್ ಖಾನ್ ಅವರು ಒಟಿಟಿ ಬಗ್ಗೆ ಮಾತನಾಡಿದ್ದಾರೆ. ಒಟಿಟಿಯಲ್ಲಿ ಪ್ರಸಾರ ಆಗುವ ಕಾಂಟೆಂಟ್ಗಳಿಗೆ ಯಾವುದೇ ಸೆನ್ಸಾರ್ ಇಲ್ಲದ ಕಾರಣ ಅಶ್ಲೀಲ ದೃಶ್ಯಗಳು ಹೇರಳವಾಗಿ ಸಿಗುತ್ತಿವೆ. ಇದನ್ನು ಸಲ್ಮಾನ್ ಖಾನ್ ಖಂಡಿಸಿದ್ದಾರೆ. ‘ಇದು ಭಾರತ. ನಗ್ನತೆಯ ಪ್ರಸಾರ ನಿಲ್ಲಬೇಕು’ ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ. ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಒಟಿಟಿಯ ಒಳಿತು ಹಾಗೂ ಕೆಡಕುಗಳ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ‘ಒಟಿಟಿಗೆ ಸೆನ್ಸಾರ್ಶಿಪ್ ಬೇಕು. ನಗ್ನತೆ, ಕೆಟ್ಟ ಪದಗಳ ಬಳಕೆ ನಿಲ್ಲಬೇಕು. ಸಣ್ಣ ಮಕ್ಕಳು ಕೂಡ ಮೊಬೈಲ್ನಲ್ಲಿ ಈ ರೀತಿಯ ಕಾಂಟೆಂಟ್ನ ನೋಡುವ ಸಾಧ್ಯತೆ ಇರುತ್ತದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದನ್ನು ನೋಡುತ್ತೇನೆ ಎಂದು ನಿಮ್ಮ ಮಗಳು ಮೊಬೈಲ್ ತೆಗೆದುಕೊಂಡು ಈ ರೀತಿಯದ್ದನ್ನು ನೋಡಿದರೆ ಅದನ್ನು ನೀವು ಇಷ್ಟಪಡುತ್ತೀರಾ? ಒಟಿಟಿಗೆ ಸೆನ್ಸಾರ್ಶಿಪ್ ತಂದರೆ ವೀಕ್ಷಕರ ಸಂಖ್ಯೆ ಹೆಚ್ಚಲಿದೆ’ ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ.
ಬಿಕಿನಿ, ಕಿಸ್ಸಿಂಗ್ ದೃಶ್ಯಗಳ ಬಗ್ಗೆಯೂ ಸಲ್ಲು ಅಸಮಾಧಾನ ಹೊರಹಾಕಿದ್ದಾರೆ. ‘ನೀವು ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುತ್ತೀರಿ. ದೇಹವನ್ನು ಎಕ್ಸ್ಪೋಸ್ ಮಾಡುತ್ತೀರಿ. ಮನೆಗೆ ಹೋದಾಗ ನಿಮ್ಮ ಮನೆಯ ವಾಚ್ಮನ್ ಕೂಡ ಅದನ್ನೇ ವೀಕ್ಷಿಸುತ್ತಿರುತ್ತಾನೆ. ಭದ್ರತೆ ದೃಷ್ಟಿಯಿಂದ ಇದು ಸರಿಯಲ್ಲ. ನೀವು ಯಾವಾಗಾಲೂ ನಿಮ್ಮ ಗಡಿ ದಾಟಬಾರದು. ನಾವು ಇರೋದು ಭಾರತದಲ್ಲಿ’ ಎಂದು ಸಲ್ಲು ನೆನಪಿಸಿದ್ದಾರೆ.
ಇದನ್ನೂ ಓದಿ: ಈ ವಯಸ್ಸಲ್ಲೂ ಸಲ್ಮಾನ್ ಖಾನ್ದು ಅದೆಂಥ ಫಿಟ್ನೆಸ್; ಸಿಕ್ಸ್ ಪ್ಯಾಕ್ ಫೋಟೋ ನೋಡಿ ಫ್ಯಾನ್ಸ್ ಫಿದಾ
ಈ ಮೊದಲು ಒಟಿಟಿ ಕಾಂಟೆಂಟ್ಗಳಿಗೆ ಸೆನ್ಸಾರ್ ಆಗಬೇಕು ಎನ್ನುವ ಆಗ್ರಹ ಕೇಳಿಬಂದಿತ್ತು. ಪ್ರಕರಣ ಕೋರ್ಟ್ಮೆಟ್ಟಿಲೇರಿತ್ತು ಕೂಡ. ಆದರೆ, ಅರ್ಜಿಯನ್ನು ರಿಜೆಕ್ಟ್ ಮಾಡಲಾಯಿತು. ‘ವೆಬ್ ಸಿರೀಸ್ಗಳಿಗೆ ಸೆನ್ಸಾರ್ ಕಮಿಟಿ ಇರಲು ಹೇಗೆ ಸಾಧ್ಯ? ಅದಕ್ಕಾಗಿ ಬೇರೆಯದೇ ಕಾನೂನು ಇದೆ. ಅದರ ಅಡಿಯಲ್ಲಿ ಒಟಿಟಿ ಬರುತ್ತದೆ ಎಂದಾದರೆ ಮಾತ್ರ ಈಗಿರುವ ಕಾನೂನು ಅನ್ವಯ ಆಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಕಂಟೆಂಟ್ ಪ್ರಸಾರ ಆಗುವುದರಿಂದ ಅನೇಕ ಪ್ರಶ್ನೆಗಳು ಉದ್ಭವ ಆಗುತ್ತವೆ’ ಎಂದು ಕೋರ್ಟ್ ಹೇಳಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 6 April 23