ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ‘ಶಾಕುಂತಲಂ’ ಸಿನಿಮಾ ಹೀನಾಯವಾಗಿ ಸೋತಿದೆ. ಹಾಗಿದ್ದರೂ ಅವರ ಹವಾ ಕಡಿಮೆ ಆಗಿಲ್ಲ. ‘ಶಾಕುಂತಲಂ’ ಚಿತ್ರದ ಸೋಲನ್ನು ಮರೆತು ಅವರು ಲಂಡನ್ಗೆ ತೆರಳಿದ್ದಾರೆ. ಅಲ್ಲಿ ಹಾಲಿವುಡ್ ಸೆಲೆಬ್ರಿಟಿಗಳ ಜೊತೆ ಬೆರೆತು ಬಿಂದಾಸ್ ಆಗಿ ಕಾಲ ಕಳೆದಿದ್ದಾರೆ. ಅವರಿಗೆ ಬಾಲಿವುಡ್ ನಟ ವರುಣ್ ಧವನ್ (Varun Dhawan) ಕೂಡ ಸಾಥ್ ನೀಡಿದ್ದಾರೆ. ಅಷ್ಟಕ್ಕೂ ಸಮಂತಾ ಅವರು ಏಕಾಏಕಿ ಲಂಡನ್ಗೆ ಹಾರಿದ್ದು ಯಾಕೆ? ‘ಸಿಟಾಡೆಲ್’ (Citadel) ವೆಬ್ ಸರಣಿಯ ಪ್ರೀಮಿಯರ್ ಶೋ ಸಲುವಾಗಿ. ಹೌದು, ಏಪ್ರಿಲ್ 18ರ ರಾತ್ರಿ ಪ್ರಿಮಿಯರ್ ಮಾಡಲಾಗಿದೆ. ಪ್ರಿಯಾಂಕಾ ಚೋಪ್ರಾ, ರಾಜ್ ನಿಧಿಮೋರು, ಕೃಷ್ಣ ಡಿ.ಕೆ. ಮುಂತಾದವರು ಕೂಡ ಇದರಲ್ಲಿ ಭಾಗಿ ಆಗಿದ್ದರು. ‘ಸಿಟಾಡೆಲ್’ ಪ್ರೀಮಿಯರ್ ಶೋ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
ಇಂಗ್ಲಿಷ್ನ ‘ಸಿಟಾಡೆಲ್’ ಸೀರಿಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡನ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇದರ ಇಂಡಿಯನ್ ವರ್ಷನ್ನಲ್ಲಿ ಸಮಂತಾ ರುತ್ ಪ್ರಭು ಹಾಗೂ ವರುಣ್ ಧವನ್ ನಟಿಸಿದ್ದಾರೆ. ಹಾಗಾಗಿ ಲಂಡನ್ನಲ್ಲಿ ನಡೆದ ‘ಸಿಟಾಡೆಲ್’ ಪ್ರೀಮಿಯರ್ ಶೋಗೆ ಅವರನ್ನು ಆಹ್ವಾನಿಸಲಾಗಿತ್ತು.
‘ಸಿಟಾಡೆಲ್’ ವೆಬ್ ಸೀರಿಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಹಾಗಾದರೆ ಭಾರತೀಯ ವರ್ಷನ್ನಲ್ಲಿ ಸಮಂತಾ ಕೂಡ ಇದೇ ರೀತಿ ನಟಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಗ್ಲಾಮರಸ್ ಪಾತ್ರಗಳನ್ನು ಮಾಡುವಲ್ಲಿ ಸಮಂತಾ ರುತ್ ಪ್ರಭು ಅವರು ಹಿಂದೇಟು ಹಾಕುವವರಲ್ಲ. ‘ಪುಷ್ಪ’ ಸಿನಿಮಾದ ‘ಉ ಅಂಟಾವಾ ಮಾವ..’ ಹಾಡಿನಲ್ಲಿ ಅವರು ಸಖತ್ ಹಾಟ್ ಆಗಿ ನಟಿಸಿದ್ದರು. ಅಲ್ಲದೇ, ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲೂ ಅವರ ಪಾತ್ರ ಬೋಲ್ಡ್ ಆಗಿತ್ತು. ‘ಸಿಟಾಡೆಲ್’ನಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ‘ಶಾಕುಂತಲಂ’ ಸಿನಿಮಾ ಸೋತ ಬಳಿಕ ಸಮಂತಾಗೆ ನೆನಪಾಯ್ತು ಭಗವದ್ಗೀತೆಯ ಶ್ಲೋಕ
ಅನಾರೋಗ್ಯದ ಕಾರಣದಿಂದ ಸಮಂತಾ ಅವರ ವೃತ್ತಿಜೀವನ ಕೊಂಚ ಕುಂಠಿತ ಆಗಿತ್ತು. ಆದರೆ ಈಗ ಅವರು ಸಂಪೂರ್ಣ ಚೇತರಿಸಿಕೊಂಡು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ‘ಸಿಟಾಡೆಲ್’ ಮೇಲೆ ಅವರ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Samantha: ‘ಶಾಕುಂತಲಂ’ ಚಿತ್ರಕ್ಕೆ ಹೀನಾಯ ಸೋಲು; ಎರಡಂಕಿ ಮುಟ್ಟಲು ವಿಫಲವಾಯ್ತು ಸಮಂತಾ ಸಿನಿಮಾ
‘ಸಿಟಾಡೆಲ್’ ವೆಬ್ ಸಿರೀಸ್ನಲ್ಲಿ ಸಮಂತಾ ಅವರು ಸಿಕ್ಕಾಪಟ್ಟೆ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಇದರ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯಗಳಾಗಿತ್ತು. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್ ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.