
ಜಾನ್ವಿ ಕಪೂರ್ (Janhvi Kapoor) ಹಾಗೂ ಸಾರಾ ಅಲಿ ಖಾನ್ (Sara Ali Khan) ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಸ್ಟಾರ್ ಕುಡಿಗಳು. ಹೀಗಾಗಿ, ಸುಲಭದಲ್ಲಿ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ, ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಇವರಿಬ್ಬರೂ ಬೆಸ್ಟ್ ಫ್ರೆಂಡ್ಸ್. ಈಗ ಇವರು ವಿಜಯ್ ದೇವರಕೊಂಡ ಜತೆ ಡೇಟ್ ಮಾಡುವ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
‘ಕಾಫಿ ವಿತ್ ಕರಣ್’ ಶೋ ಮತ್ತೆ ಆರಂಭ ಆಗಿದೆ. ಜುಲೈ 7ರಿಂದ ಸೀಸನ್ 7 ಪ್ರಸಾರ ಕಾಣುತ್ತಿದೆ. ಮೊದಲ ಎಪಿಸೋಡ್ನಲ್ಲಿ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಆಗಮಿಸಿದ್ದರು. ಎರಡನೇ ಎಪಿಸೋಡ್ನಲ್ಲಿ ಜಾನ್ವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಆಗಮಿಸುತ್ತಿದ್ದಾರೆ. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಎನ್ನುವ ಕಾರಣಕ್ಕೆ ಇವರನ್ನು ಒಟ್ಟಿಗೆ ಶೋಗೆ ಕರೆತರಲಾಗಿದೆ. ಇದರ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಕರಣ್ ಜೋಹರ್.
‘ಸಾರಾ ನೀವು ಯಾರ ಜತೆ ಡೇಟ್ ಮಾಡಬೇಕು ಎಂದುಕೊಂಡಿದ್ದೀರಿ’ ಎನ್ನುವ ಪ್ರಶ್ನೆ ಮಾಡಿದ್ದಾರೆ ಕರಣ್ ಜೋಹರ್. ಇದಕ್ಕೆ ವಿಜಯ್ ದೇವರಕೊಂಡ ಹೆಸರನ್ನು ಹೇಳಿದ್ದಾರೆ ಸಾರಾ. ಅಚ್ಚರಿ ಎಂದರೆ ಜಾನ್ವಿ ಕಪೂರ್ಗೂ ವಿಜಯ್ ದೇವರಕೊಂಡ ಎಂದರೆ ಇಷ್ಟ. ಇದನ್ನು ಜಾನ್ವಿ ಹೇಳಿಕೊಂಡರು. ‘ಕರಣ್ ಏನಿದು’ ಎಂದು ಜಾನ್ವಿ ಪ್ರಶ್ನೆ ಮಾಡಿದ್ದಾರೆ. ಸದ್ಯ, ಈ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಪ್ರತಿ ದಿನ ಫೋಟೋಶೂಟ್ ಮಾಡಿಸಿ ಮಿಂಚುತ್ತಿರುವ ಜಾನ್ವಿ ಕಪೂರ್; ಇಲ್ಲಿವೆ ಹೊಸ ಫೋಟೋಗಳು
ಕರಣ್ ಜೋಹರ್ ಅವರು ಈಗಾಗಲೇ ಯಶಸ್ವಿಯಾಗಿ ‘ಕಾಫಿ ವಿತ್ ಕರಣ್’ ಶೋನ 6 ಸೀಸನ್ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಚಾಟ್ ಚೋನಲ್ಲಿ ಹಲವು ವಿವಾದಗಳು ಹುಟ್ಟಿಕೊಂಡಿದ್ದೂ ಇದೆ. ಈ ಬಾರಿ ಏಳನೇ ಸೀಸನ್ ಆರಂಭ ಆಗಿದೆ. ಈ ಮೊದಲು ‘ಕಾಫಿ ವಿತ್ ಕರಣ್’ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಈಗ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಈ ಶೋ ನೇರವಾಗಿ ಪ್ರಸಾರ ಕಾಣುತ್ತಿದೆ. ಮೊದಲ ಎಪಿಸೋಡ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಎರಡನೇ ಎಪಿಸೋಡ್ಗಾಗಿ ಫ್ಯಾನ್ಸ್ ಕಾದಿದ್ದಾರೆ.