ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆದ ಶ್ರೀಕಾಂತ್ ತಿವಾರಿ; ಜೈದೀಪ್ ವಿಲನ್

ಟ್ರೇಲರ್​ನಲ್ಲಿ ಹಲವು ಟ್ವಿಸ್ಟ್​ಗಳನ್ನು ನೀಡಲಾಗಿದೆ. ಶ್ರೀಕಾಂತ್ ತಿವಾರಿ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಈ ರೀತಿಯ ಪರಿಸ್ಥಿತಿ ಬರಲು ಕಾರಣ ಏನು ಎಂಬುದಕ್ಕೆ ವೆಬ್ ಸೀರಿಸ್​ನಲ್ಲೇ ಉತ್ತರ ಕಂಡುಕೊಳ್ಳಬೇಕಿದೆ. ಇಡೀ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತದೆ. ಸಾಕಷ್ಟು ಆ್ಯಕ್ಷನ್​ಗಳು ಕೂಡ ಇವೆ.

ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆದ ಶ್ರೀಕಾಂತ್ ತಿವಾರಿ; ಜೈದೀಪ್ ವಿಲನ್
ಫ್ಯಾಮಿಲಿ ಮ್ಯಾನ್ 3

Updated on: Nov 07, 2025 | 2:50 PM

ಅತ್ಯಂತ ಯಶಸ್ವಿ ಸೀರಿಸ್​ಗಳಲ್ಲಿ ಮನೋಜ್​ ಬಾಜ್​ಪಾಯಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್’ ಕೂಡ ಒಂದು. ಈಗಾಗಲೇ ಎರಡು ಸರಣಿಗಳು ಇದರಲ್ಲಿ ಬಂದಿವೆ. ಈಗ ಮೂರನೇ ಸರಣಿ ಬರೋಕೆ ರೆಡಿ ಆಗಿದೆ. ನವೆಂಬರ್ 21ರಂದು ‘ಫ್ಯಾಮಿಲಿ ಮ್ಯಾನ್ 3’ ಬರಲಿದೆ. ಅದಕ್ಕೂ ಮೊದಲು ವೆಬ್ ಸೀರಿಸ್​ನ ಟ್ರೇಲರ್ ರಿಲೀಸ್ ಆಗಿದ್ದು, ಗಮನ ಸೆಳೆಯುವ ರೀತಿಯಲ್ಲಿ ಇದೆ. ಜೈದೀಪ್ ವಿಲನ್ ಪಾತ್ರ ಮಾಡುತ್ತಿದ್ದಾರೆ.

ಶ್ರೀಕಾಂತ್ ತಿವಾರಿ (ಮನೋಜ್​) ತಾನು ಮಾಡುತ್ತಿರುವ ಕೆಲಸ ಏನು ಎಂಬುದನ್ನು ಮನೆಯವರಿಂದ ಮುಚ್ಚಿಟ್ಟಿದ್ದ. ಈಗ ಅನಿವಾರ್ಯವಾಗಿ ಅದನ್ನು ಹೇಳಲೇಬೇಕಾಗಿದೆ. ‘ನಾನೋರ್ವ ಏಜೆಂಟ್’ ಎಂದು ಹೇಳಿದಾಗ ‘ಟ್ರಾವೆಲ್ ಏಜೆಂಟ್ ಅಲ್ವ’ ಎಂಬ ಪ್ರಶ್ನೆ ಮಗನಿಂದ ಬರುತ್ತದೆ. ಇದನ್ನು ಕೇಳಿ ನಗಬೇಕೋ ಅಥವಾ ಅಳಬೇಕೋ ಎಂಬುದು ಶ್ರೀಕಾಂತ್​ಗೆ ಗೊತ್ತಾಗೋದಿಲ್ಲ.

ಟ್ರೇಲರ್​ನಲ್ಲಿ ಹಲವು ಟ್ವಿಸ್ಟ್​ಗಳನ್ನು ನೀಡಲಾಗಿದೆ. ಶ್ರೀಕಾಂತ್ ತಿವಾರಿ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಈ ರೀತಿಯ ಪರಿಸ್ಥಿತಿ ಬರಲು ಕಾರಣ ಏನು ಎಂಬುದಕ್ಕೆ ವೆಬ್ ಸೀರಿಸ್​ನಲ್ಲೇ ಉತ್ತರ ಕಂಡುಕೊಳ್ಳಬೇಕಿದೆ. ಇಡೀ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತದೆ. ಸಾಕಷ್ಟು ಆ್ಯಕ್ಷನ್​ಗಳು ಕೂಡ ಇವೆ.

‘ಪಾತಾಳ್ ಲೋಕ್’ ರೀತಿಯ ವೆಬ್ ಸೀರಿಸ್​ಗಳಲ್ಲಿ ನಟಿಸಿದ್ದ ಜೈದೀಪ್ ಅಹ್ಲಾವತ್ ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಯಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಪ್ರಿಯಾಮಣಿ, ಶರೀಬ್ ಹಷ್ಮಿ ಸೇರಿದಂತೆ ಅನೇಕ ಕಲಾವಿದರು ಈ ಸರಣಿಯಲ್ಲೂ ಮುಂದುವರಿದಿದ್ದಾರೆ. ಈ ಸರಣಿಗೆ ರಾಜ್ ಹಾಗೂ ಡಿಕೆ ನಿರ್ದೇಶನ ಇದೆ.

ಇದನ್ನೂ ಓದಿ: ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ; ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಡೇಟ್ ರಿವೀಲ್

‘ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಪಡೋ ಕಷ್ಟಗಳು ಒಂದೆರಡಲ್ಲ. ಅದು ಈ ಸರಣಿಯಲ್ಲೂ ಮುಂದುವರಿದಿದೆ. ಶ್ರೀಕಾಂತ್ ಹಾಗೂ ಜೆಕೆ ನಡುವಿನ ಕೆಮಿಸ್ಟ್ರಿ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:45 pm, Fri, 7 November 25