AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ; ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಡೇಟ್ ರಿವೀಲ್

ಮನೋಜ್ ಬಾಜ್ಪಾಯಿ ನಟನೆಯ 'ಫ್ಯಾಮಿಲಿ ಮ್ಯಾನ್ 3' ವೆಬ್ ಸರಣಿಯ ಬಿಡುಗಡೆ ಬಗ್ಗೆ ಅಮೇಜಾನ್ ಪ್ರೈಮ್ ವಿಡಿಯೋ ಅಧಿಕೃತ ಅಪ್ಡೇಟ್ ನೀಡಿದೆ. ನವೆಂಬರ್ 21ರಂದು ಸರಣಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮನೋಜ್ ಮುಂದುವರಿಯಲಿದ್ದು, ಸರಣಿಯು ವೈರಸ್ ಕಥಾಹಂದರವನ್ನು ಹೊಂದಿದೆ ಎನ್ನಲಾಗಿದೆ.

ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ; ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಡೇಟ್ ರಿವೀಲ್
ಫ್ಯಾಮಿಲಿ ಮ್ಯಾನ್
ರಾಜೇಶ್ ದುಗ್ಗುಮನೆ
|

Updated on: Oct 28, 2025 | 2:48 PM

Share

ಮನೋಜ್ ಬಾಜ್​ಪಾಯಿ ನಟನೆಯ ‘ಫ್ಯಾಮಿಲಿ ಮ್ಯಾನ್’ (Family Man) ಹಾಗೂ ‘ಫ್ಯಾಮಿಲಿ ಮ್ಯಾನ್ 2’ ಸರಣಿ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿತ್ತು. ಈಗ ಈ ಚಿತ್ರಕ್ಕೆ ಮೂರನೇ ಪಾರ್ಟ್ ಬರುವುದರಲ್ಲಿದೆ. ಈ ಸರಣಿಯ ರಿಲೀಸ್ ಬಗ್ಗೆ ಇಷ್ಟು ದಿನ ಊಹಾಪೋಹಗಳು ಮಾತ್ರ ಹರಿದಾಡಿದ್ದವು. ಇದು ಬರೋದಿಲ್ಲ ಎಂಬ ಮಾತುಗಳು ಕೇಳಿ ಬಂದವು. ಈಗ ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ಫ್ಯಾಮಿಲಿ ಮ್ಯಾನ್ ಸರಣಿಯಲ್ಲಿ ಮನೋಜ್ ಅವರು ಶ್ರೀಕಾಂತ್ ತಿವಾರಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಪಾರ್ಟ್​ನಲ್ಲೂ ಅವರ ಪಾತ್ರ ಮುಂದುವರಿಯಲಿದೆ. ಈ ಸರಣಿಯಲ್ಲಿ ವೈರಸ್ ಬಗ್ಗೆ ಹೇಳಲಾಗುತ್ತದೆ ಎನ್ನಲಾಗುತ್ತಿದೆ. ನವೆಂಬರ್ 21ರಂದು ಈ ವೆಬ್ ಸರಣಿ ಪ್ರದರ್ಶನ ಆರಂಭಿಸಲಿದೆ. ಸರಣಿಯ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಸರಣಿಯ ಕಥೆ ಬಗ್ಗೆ ಮಾಹಿತಿ ಸಿಗೋ ಸಾಧ್ಯತೆ ಇದೆ.

ಇದನ್ನೂ ಓದಿ
Image
ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?
Image
ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
Image
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ

ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಿದ ಹೊಸ ಪೋಸ್ಟರ್

‘ಫ್ಯಾಮಿಲಿ ಮ್ಯಾನ್ 3’ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಬಿಡುಗಡೆ ಕಂಡಿರೋ ಎರಡು ಸರಣಿಗಳು ಸೃಷ್ಟಿ ಮಾಡಿರೋ ಹೈಪ್​ನಿಂದ ಮೂರನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಸರಣಿಯ ಟ್ರೇಲರ್ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಶ್ರೀಕಾಂತ್ ತಿವಾರಿ ಟಾಸ್ಕ್​ ಫೋರ್ಸ್​ನಲ್ಲಿ ಕೆಲಸ ಮಾಡೋ ವ್ಯಕ್ತಿ. ಅಂದರೆ ದೇಶದಲ್ಲಿ ಸಂಭವಿಸಬಹುದಾದ ಉಗ್ರರರ ದಾಳಿಯ ಬಗ್ಗೆ ಮೊದಲೇ ಮಾಹಿತಿ ಪಡೆದು, ದಾಳಿ ಆಗದಂತೆ ತಡೆಯೋದು ಶ್ರೀಕಾಂತ್ ಕೆಲಸ. ಶ್ರೀಕಾಂತ್ ತಿವಾರಿ ಜೊತೆ ಜೆಕೆ ತಲ್ಪಡೆ, ಸುಚಿತ್ರಾ ತಿವಾರಿ, ದೃತಿ ತಿವಾರಿ ಮೊದಲಾದ ಪಾತ್ರಗಳು ಪ್ರಮುಖವಾಗಿವೆ. ಕಳೆದ ಸೀಸನ್​ನಲ್ಲಿ ಸಮಂತಾ ಅವರು ಮುಖ್ಯಭೂಮಿಕೆಯಲ್ಲಿದ್ದರು. ಈ ಬಾರಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್