ನೆಟ್​ಫ್ಲಿಕ್ಸ್​ಗೆ ಬಂದ ಕಪಿಲ್ ಶರ್ಮಾ ಶೋ, ಭಾರಿ ಅದ್ಧೂರಿ, ದೊಡ್ಡ ಸೆಲೆಬ್ರಿಟಿಗಳು

|

Updated on: Mar 23, 2024 | 8:06 PM

Kapil Sharma: ಹಲವು ವರ್ಷಗಳಿಂದ ಸೂಪರ್ ಹಿಟ್ ಟಿವಿ ಶೋ ಎನಿಸಿಕೊಂಡಿದ್ದ ಕಪಿಲ್ ಶರ್ಮಾ ಶೋ, ಈಗ ನೆಟ್​ಫ್ಲಿಕ್ಸ್​ಗೆ ಬಂದಿದೆ. ಕಪಿಲ್​ರ ಹಳೆಯ ಗೆಳೆಯರೆಲ್ಲ ಮತ್ತೆ ಒಂದಾಗಿದ್ದಾರೆ. ಬಾಲಿವುಡ್​ನ ದೊಡ್ಡ ಸ್ಟಾರ್​ಗಳು ಶೋಗೆ ಅತಿಥಿಗಳಾಗಿ ಆಗಮಿಸಿದ್ದಾರೆ.

ನೆಟ್​ಫ್ಲಿಕ್ಸ್​ಗೆ ಬಂದ ಕಪಿಲ್ ಶರ್ಮಾ ಶೋ, ಭಾರಿ ಅದ್ಧೂರಿ, ದೊಡ್ಡ ಸೆಲೆಬ್ರಿಟಿಗಳು
Follow us on

ಕಪಿಲ್ ಶರ್ಮಾ (Kapil Sharma) ಶೋ, ಹಲವು ವರ್ಷಗಳಿಂದ ಭಾರತದ ಟಾಪ್ ಟಿವಿ ಕಾರ್ಯಕ್ರಮವಾಗಿ ಪ್ರಸಾರವಾಗುತ್ತಿದೆ. ಸೋನಿ, ಸ್ಟಾರ್, ಸಬ್ ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾದ ಕಪಿಲ್ ಶರ್ಮಾ ಶೋ ಈಗ ನೆಟ್​ಫ್ಲಿಕ್ಸ್​ಗೆ ಬಂದಿದೆ. ಅದೂ ಭಾರಿ ಅದ್ಧೂರಿಯಾಗಿ. ಹಲವಾರು ವಿಶೇಷತೆಗಳೊಟ್ಟಿಗೆ ಈ ಶೋ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟಿದ್ದು, ಶೋನ ಟೀಸರ್ ಇಂದು (ಮಾರ್ಚ್ 23) ಬಿಡುಗಡೆ ಆಗಿದೆ. ಬಾಲಿವುಡ್​, ಕ್ರಿಕೆಟ್​ ಲೋಕದ ಭಾರಿ ದೊಡ್ಡ ಸೆಲೆಬ್ರಿಟಿಗಳು ಕಪಿಲ್​ರ ಶೋಗೆ ಬಂದಿದ್ದಾರೆ. ಅದು ಮಾತ್ರವೇ ಅಲ್ಲ, ಕಪಿಲ್​ರ ಹಳೆಯ ಗೆಳೆಯರೆಲ್ಲ ಮುನಿಸುಗಳನ್ನು ಮರೆತು ಮತ್ತೆ ಶೋಗೆ ಬಂದಿದ್ದಾರೆ.

ಕಪಿಲ್ ಶರ್ಮಾರ ಜೊತೆ ಜಗಳ ಮಾಡಿಕೊಂಡು ಶೋ ಅರ್ಧಕ್ಕೆ ಬಿಟ್ಟು ಹೋಗಿದ್ದ ಗುತ್ತಿ ಪಾತ್ರಧಾರಿ ಸುನಿಲ್ ಗ್ರೋವರ್ ಇದೀಗ ಮತ್ತೆ ಮರಳಿ ಬಂದಿದ್ದಾರೆ. ಗ್ರೋವರ್ ಮಾತ್ರವೇ ಅಲ್ಲದೆ ಕೃಷ್ಣಾ ಸಹ ಮತ್ತೆ ಶೋಗೆ ಬಂದಿದ್ದಾರೆ. ಕಪಿಲ್​ರ ಹಳೆಯ ಇನ್ನೂ ಕೆಲವು ಗೆಳೆಯರು ಶೋಗೆ ಮರಳಿದ್ದು, ಅದರ ಜೊತೆಗೆ ಈಗಿರುವ ಕೆಲವು ಕಲಾವಿದರು ಸೇರಿಕೊಂಡು ಶೋ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಸುನಿಲ್ ಗ್ರೋವರ್​ಗೆ ಬೂಟ್​ನಲ್ಲಿ ಹೊಡೆದಿದ್ದ ಕಪಿಲ್ ಶರ್ಮಾ

ಇಂದು (ಮಾರ್ಚ್ 23) ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ನ ಟೀಸರ್ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಪ್ರತಿ ವಾರ ಈ ಶೋನ ಎಪಿಸೋಡ್​ಗಳು ಪ್ರಸಾರವಾಗಲಿದ್ದು, ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್​ ಲೋಕದ ದೊಡ್ಡ-ದೊಡ್ಡ ಸೆಲೆಬ್ರಿಟಿಗಳು ಈ ಬಾರಿ ಶೋಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಸ್ತುತ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್, ತಮ್ಮ ತಾಯಿ ಹಾಗೂ ಸಹೋದರಿ ಜೊತೆಗೆ ಶೋಗೆ ಆಗಮಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಶೋಗೆ ಹೋಗದ ಆಮಿರ್ ಖಾನ್ ಸಹ ಕಪಿಲ್ ಶರ್ಮಾ ಶೋಗೆ ಬಂದಿದ್ದಾರೆ. ಭಾರತೀಯ ಕ್ರಿಕೆಟ್ ಟೀಂನ ನಾಯಕ ಕಪಿಲ್ ಶರ್ಮಾ, ಶ್ರೆಯಸ್ ಐಯ್ಯರ್ ಇನ್ನೂ ಕೆಲವರು ಆಗಮಿಸಿದ್ದಾರೆ.

ಟಿವಿ ಎಪಿಸೋಡ್​ಗಳಿಗೆ ಹೋಲಿಸಿದರೆ ಭಾರಿ ಅದ್ಧೂರಿಯಾಗಿ ಎಪಿಸೋಡ್​ಗಳನ್ನು ಚಿತ್ರೀಕರಣ ಮಾಡಲಾಗಿದೆ. ಈ ಮುಂದೆ ಒಂದೇ ಸೆಟ್​ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಈಗ ಹಲವು ಸೆಟ್​ಗಳನ್ನು ಶೋಗಾಗಿ ಹಾಕಲಾಗಿದೆ. ಈ ಹಿಂದೆ ಕಪಿಲ್​ರ ಸ್ಟಾಂಡಪ್ ಕಾಮಿಡಿ ಶೋ ಒಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಿತ್ತು. ಈಗ ಪೂರ್ಣ ಶೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ. ಅದೂ ಹಿಂದೆಂದಿಗಿಂತಲೂ ಭಾರಿ ಅದ್ಧೂರಿಯಾಗಿ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ’ ನೆಟ್​ಫ್ಲಿಕ್ಸ್​ನಲ್ಲಿ ಮಾರ್ಚ್ 30 ರಿಂದ ಪ್ರಸಾರವಾಗಲಿದೆ. ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಹೊಸ ಎಪಿಸೋಡ್ ಸ್ಟ್ರೀಂ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ