‘ಮಿರ್ಜಾಪುರ್ 3’ ಸೀರಿಸ್ ವಿಚಾರದಲ್ಲಿ ಅಭಿಮಾನಿಗಳಿಗೆ ಸಿಕ್ಕಿದೆ ಸಖತ್ ಬೇಸರದ ಸುದ್ದಿ

‘ಮಿರ್ಜಾಪುರ 2'ನ ಕ್ಲೈಮ್ಯಾಕ್ಸ್​ನಲ್ಲಿ ಮುನ್ನಾ ಭಯ್ಯಾಗೆ ಗುಂಡು ಬೀಳುತ್ತದೆ. ಈ ವೇಳೆ ಆತನ ತಂದೆ ಖಾಲೀಂ ಭಯ್ಯಾ ಉಳಿದುಕೊಳ್ಳುತ್ತಾನೆ. ಈ ರೀತಿ ಗಾಯಗೊಂಡವರು ಚೇತರಿಸಿಕೊಂಡು ಮುಂದಿನ ಸೀಸನ್​ನಲ್ಲಿ ಕಾಣಿಸಿಕೊಳ್ಳುವುದು ಹೊಸದೇನು ಅಲ್ಲ. ಆದರೆ ‘ಸೀಸನ್ 3’ನಲ್ಲಿ ದಿವ್ಯೇಂದು ಕಾಣಿಸಿಕೊಳ್ಳುವುದಿಲ್ಲ ಎಂದು ಅವರ ಆಪ್ತ ಮೂಲವೊಂದು ಖಚಿತಪಡಿಸಿದೆ.

‘ಮಿರ್ಜಾಪುರ್ 3’ ಸೀರಿಸ್ ವಿಚಾರದಲ್ಲಿ ಅಭಿಮಾನಿಗಳಿಗೆ ಸಿಕ್ಕಿದೆ ಸಖತ್ ಬೇಸರದ ಸುದ್ದಿ
ದಿವ್ಯೇಂದು
Edited By:

Updated on: Mar 21, 2024 | 1:10 PM

ಇತ್ತೀಚೆಗೆ ಅಮೇಜಾನ್ ಪ್ರೈಮ್ (Amazon Prime Video) ವಿಡಿಯೋ ದೊಡ್ಡ ಈವೆಂಟ್ ಮಾಡಿ ಮುಂಬರುವ ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ಪ್ರಕಟಿಸಿದೆ. ಇದರಲ್ಲಿ ‘ಮಿರ್ಜಾಪುರ್ 3’ ಸೀರಿಸ್ ಹೆಸರೂ ಇದೆ. ಈ ಘೋಷಣೆಯ ನಂತರ ಮುನ್ನಾ ಭಯ್ಯಾ (ದಿವ್ಯೇಂದು ಶರ್ಮಾ) ಅ ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ದಿವ್ಯೇಂದು ಶರ್ಮಾ ‘ಮಿರ್ಜಾಪುರ್ 3’ನ ಭಾಗವಾಗುವುದಿಲ್ಲ ಎಂದು ‘TV9 ಹಿಂದಿ’ ವರದಿ ಮಾಡಿದೆ. ಅಂದರೆ ಮುಂಬರುವ ‘ಮಿರ್ಜಾಪುರ್‘ ಸೀಸನ್‌ನಲ್ಲಿ ಪ್ರೇಕ್ಷಕರಿಗೆ ‘ಮುನ್ನಾ ಭಯ್ಯಾ’ ನೋಡಲು ಸಿಗುವುದಿಲ್ಲ. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.

‘ಮಿರ್ಜಾಪುರ್’ ಸಾಕಷ್ಟು ಸದ್ದು ಮಾಡಿದ ಸೀರಿಸ್. ಈ ಸೀರಿಸ್​ನಲ್ಲಿ ಪಂಕಜ್ ತ್ರಿಪಾಠಿ, ದಿವ್ಯೇಂದು ಶರ್ಮಾ, ಅಲಿ ಫಾಜಲ್, ವಿಕ್ರಾಂತ್ ಮಾಸ್ಸಿ, ರಸಿಕಾ ದುಗಾಲ್, ಶ್ವೇತಾ ತ್ರಿಪಾಠಿ ಮೊದಲಾದವರು ನಟಿಸಿದ್ದಾರೆ. ಗ್ಯಾಂಗ್​ಸ್ಟರ್ ಕಥೆಯನ್ನು ಈ ವೆಬ್ ಸೀರಿಸ್ ಹೊಂದಿದೆ. ಸಾಮಾನ್ಯ ಕುಟುಂಬದ ಇಬ್ಬರು ಮಕ್ಕಳು ಗ್ಯಾಂಗ್​ಸ್ಟರ್ ಕುಟುಂಬದ ಜೊತೆ ಸೇರಿ ತರಬೇತಿ ಪಡೆಯುತ್ತಾರೆ. ಅವರ ವಿರುದ್ಧವೇ ತಿರುಗಿ ಬೀಳುತ್ತಾರೆ. ಅವರು ಕೂಡ ಗ್ಯಾಂಗ್​ಸ್ಟರ್​ಗಳಾಗುತ್ತಾರೆ.

‘ಮಿರ್ಜಾಪುರ 2’ನ ಕ್ಲೈಮ್ಯಾಕ್ಸ್​ನಲ್ಲಿ ಮುನ್ನಾ ಭಯ್ಯಾಗೆ ಗುಂಡು ಬೀಳುತ್ತದೆ. ಈ ವೇಳೆ ಆತನ ತಂದೆ ಖಾಲೀಂ ಭಯ್ಯಾ ಉಳಿದುಕೊಳ್ಳುತ್ತಾನೆ. ಈ ರೀತಿ ಗಾಯಗೊಂಡವರು ಚೇತರಿಸಿಕೊಂಡು ಮುಂದಿನ ಸೀಸನ್​ನಲ್ಲಿ ಕಾಣಿಸಿಕೊಳ್ಳುವುದು ಹೊಸದೇನು ಅಲ್ಲ. ಆದರೆ ‘ಸೀಸನ್ 3’ನಲ್ಲಿ ದಿವ್ಯೇಂದು ಕಾಣಿಸಿಕೊಳ್ಳುವುದಿಲ್ಲ ಎಂದು ಅವರ ಆಪ್ತ ಮೂಲವೊಂದು ಖಚಿತಪಡಿಸಿದೆ. ವಿಕಿಪೀಡಿಯಾದಲ್ಲೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದಿವ್ಯೇಂದು ಶರ್ಮಾ ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದೆ. ದಿವ್ಯೇಂದು ಅವರು ‘ಮಡ್ಗಾಂವ್ ಎಕ್ಸ್‌ಪ್ರೆಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶುಕ್ರವಾರ (ಮಾರ್ಚ್ 22) ರಿಲೀಸ್ ಆಗಲಿದೆ.

ಇದನ್ನೂ ಓದಿ: ‘ತೆರೆಮೇಲೆ ನಿಂದನೀಯ ಶಬ್ದ ಬಳಕೆ ಮಾಡಲ್ಲ’ ಎಂದ ಪಂಕಜ್ ತ್ರಿಪಾಠಿ; ‘ಮಿರ್ಜಾಪುರ್ 3’ ಕಥೆ ಏನು?

‘ಮಿರ್ಜಾಪುರ 3′ ವೆಬ್ ಸೀರಿಸ್ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ದಿವ್ಯೇಂದು ಶರ್ಮಾ ಈ ಸೀಸನ್‌ಗಾಗಿ ಶೂಟ್ ಮಾಡಿಲ್ಲ ಎನ್ನುವ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅವರನ್ನು ಮತ್ತೆ ಕರೆತರಬೇಕು ಎನ್ನುವ ಆಗ್ರಹ ಜೋರಾಗಿದೆ. ಆದರೆ, ಈಗಾಗಲೇ ಶೂಟ್ ಪೂರ್ಣಗೊಂಡಿರುವುದರಿಂದ ಅವರನ್ನು ಮತ್ತೆ ಕರೆತರಲು ಸಾಧ್ಯವೇ ಇಲ್ಲ ಎನ್ನುವ ಮಾತು ವ್ಯಕ್ತವಾಗಿದೆ.

2007ರಲ್ಲಿ ದಿವ್ಯೇಂದು ಚಿತ್ರರಂಗಕ್ಕೆ ಕಾಲಿಟ್ಟರು. ‘ಆಜಾ ನಚ್ಲೆ’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ದಿವ್ಯೇಂದು ಅವರು ನಟಿಸಿದ್ದಾರೆ. ‘ದಿ ರೈಲ್ವೇ ಮೆನ್​’, ‘ಸಾಲ್ಟ್ ಸಿಟಿ’ ಮೊದಲಾದ ಸೀರಿಸ್​ಗಳಲ್ಲಿ ಅವರು ನಟಿಸಿದ್ದಾರೆ. ‘ಮಿರ್ಜಾಪುರ್’ನ ಪಾತ್ರಕ್ಕೆ ಅನೇಕರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:00 pm, Thu, 21 March 24