AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಮತ್ತಿನಲ್ಲಿ ಸುನಿಲ್ ಗ್ರೋವರ್​ಗೆ ಬೂಟ್​ನಲ್ಲಿ ಹೊಡೆದಿದ್ದ ಕಪಿಲ್ ಶರ್ಮಾ

ಕಪಿಲ್ ಶರ್ಮಾ ಶೋನಲ್ಲಿ ಪ್ರಮುಖ ಎನಿಸಿಕೊಂಡಿದ್ದ ಸುನಿಲ್ ಹೊರ ನಡೆದಿದ್ದರು. ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ. ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ಮಾರ್ಚ್ 30ರಿಂದ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಪ್ರಸಾರ ಕಾಣಲಿದೆ. ಇದರಲ್ಲಿ ಕಪಿಲ್ ಶರ್ಮಾ ಹಾಗೂ ಸನಿಲ್ ಗ್ರೋವರ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ವಿಶೇಷ.

ಕುಡಿದ ಮತ್ತಿನಲ್ಲಿ ಸುನಿಲ್ ಗ್ರೋವರ್​ಗೆ ಬೂಟ್​ನಲ್ಲಿ ಹೊಡೆದಿದ್ದ ಕಪಿಲ್ ಶರ್ಮಾ
ಕಪಿಲ್ ಶರ್ಮಾ- ಸುನಿಲ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 01, 2024 | 8:04 AM

Share

ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ (Sunil Grover) ಮಧ್ಯೆ ಮುನಿಸು ಏರ್ಪಟ್ಟಿತ್ತು. ಪರಸ್ಪರ ಆಡಿಕೊಂಡ ಮಾತಿನಿಂದ ಇಬ್ಬರೂ ಬೇರೆ ಆಗಿದ್ದರು. ಆ ಬಳಿಕ ಇಬ್ಬರೂ ಮತ್ತೆ ಒಂದಾಗಿರಲೇ ಇಲ್ಲ. ಕಪಿಲ್ ಶರ್ಮಾ ಶೋನಲ್ಲಿ ಪ್ರಮುಖ ಎನಿಸಿಕೊಂಡಿದ್ದ ಸುನಿಲ್ ಹೊರ ನಡೆದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ. ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ಮಾರ್ಚ್ 30ರಿಂದ ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಪ್ರಸಾರ ಕಾಣಲಿದೆ. ಇದರಲ್ಲಿ ಕಪಿಲ್ ಶರ್ಮಾ ಹಾಗೂ ಸನಿಲ್ ಗ್ರೋವರ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಇವರ ಮಧ್ಯೆ ಆದ ಕಿರಿಕ್ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ನಡೆದಿದ್ದು ಏನು?

ಕಪಿಲ್ ಶರ್ಮಾ ಅವರು ಶೋ ನೀಡಲು ತಂಡದ ಜೊತೆ ಆಸ್ಟ್ರೇಲಿಯಾಗೆ ತೆರಳಿದ್ದರು. ಅಲ್ಲಿ ಶೋನ ಯಶಸ್ವಿಯಾಗಿ ತಂಡ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಆ ಬಳಿಕ ಮೆಲ್ಬೋರ್ನ್​ನಿಂದ ದೆಹಲಿಗೆ ತಂಡ ಮರಳುವುದರಲ್ಲಿತ್ತು. ಅದು 12 ಗಂಟೆ ವಿಮಾನ ಜರ್ನಿ ಆಗಿತ್ತು. ಈ ವೇಳೆ ಕಪಿಲ್ ಶರ್ಮಾ ಸಂಪೂರ್ಣ ವಿಸ್ಕಿ ಬಾಟಲಿಯನ್ನು ಕುಡಿದಿದ್ದರು ಮತ್ತು ಮನ ಬಂದಂತೆ ಮಾತನಾಡುತ್ತಿದ್ದರು. ಇದರಿಂದ ತಂಡಕ್ಕೆ ಹಾಗೂ ಸಹ ಪ್ರಯಾಣಿಕರಿಗೆ ಕಿರಿಕಿರಿ ಆಗಿತ್ತು.

ಊಟದ ಕಿರಿಕ್

ವಿಮಾನ ಸಿಬ್ಬಂದಿ ಕಪಿಲ್ ಶರ್ಮಾ ತಂಡಕ್ಕೆ ಊಟವನ್ನು ನೀಡಿತ್ತು. ಕಪಿಲ್​ನ ಬಿಟ್ಟು ಅವರು ಊಟ ಮಾಡಿದರು. ಆಗಲೇ ಕುಡಿದ ಮತ್ತಿನಲ್ಲಿ ಇದ್ದ ಕಪಿಲ್ ಕಿರಿಕ್ ಶುರು ಮಾಡಿದರು. ‘ನಾನು ಇನ್ನೂ ಊಟ ಆರಂಭಿಸಿಲ್ಲ, ನೀವು ಹೇಗೆ ಊಟ ಮಾಡಿದಿರಿ’ ಎಂದು ಪ್ರಶ್ನೆ ಮಾಡಿದರು.

ಬೂಟಿನ ಏಟು

ಈ ಘಟನೆ ನಡೆವಾಗ ಕಪಿಲ್ ಶರ್ಮಾ ಅವರನ್ನು ಸಮಾಧಾನ ಮಾಡಲು ಹೋದರು ಸುನಿಲ್. ಈ ವೇಳೆ ಸಿಟ್ಟಾದ ಕಪಿಲ್ ಶರ್ಮಾ ಅವರು ಬೂಟಿನಿಂದ ಸುನಿಲ್​ಗೆ ಹೊಡೆದರು. ಕಾಲರ್​ನ ಹಿಡಿದು ಎಳೆದು ಕೆನ್ನೆಗೆ ಬಾರಿಸಿದರು ಎಂದು ವರದಿ ಆಗಿತ್ತು. ಈ ಘಟನೆಯಿಂದ ಸುನಿಲ್ ಗ್ರೋವರ್ ಸಾಕಷ್ಟು ಬೇಸರಗೊಂಡರು.

ಟೀಕೆ

ಕಪಿಲ್ ಶರ್ಮಾ ಅವರ ಹಾರಾಟ ಇಷ್ಟಕ್ಕೆ ನಿಂತಿಲ್ಲ. ಅವರು ತಮ್ಮ ತಂಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ‘ನಾನು ನಿಮಗೆ ಜನಪ್ರಿಯತೆ ನೀಡಿದ್ದು. ಎಲ್ಲರ ಕರಿಯರನ್​​ ಮುಗಿಸುತ್ತೇನೆ’ ಎಂದು ಕೂಗಾಡಿದ್ದರು. ಸುನಿಲ್ ಗ್ರೋವರ್ ತಮ್ಮದೇ ಶೋ ಆರಂಭಿಸಿದ್ದರು. ಇದನ್ನು ಕೂಡ ಅವರು ಟೀಕೆ ಮಾಡಿದ್ದರು.

ಇದನ್ನೂ ಓದಿ: ಬರ್ತಿದೆ ಕಪಿಲ್ ಶರ್ಮಾ ಹೊಸ ಶೋ; ವಾಹಿನಿ ತೊರೆದು ಒಟಿಟಿಯತ್ತ ಮುಖ ಮಾಡಿದ ಕಾಮಿಡಿಯನ್  

ಶೋಗೆ ಬಂದಿರಲಿಲ್ಲ..

ಈ ಘಟನೆ ನಡೆದಿದ್ದು 2018ರಲ್ಲಿ. ಇದಾದ ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ಸುನಿಲ್ ಹಾಗೂ ಕಪಿಲ್ ಶರ್ಮಾ ಮುನಿಸು ಮರೆತು ಒಂದಾಗಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗಾಗಿ ವೀಕ್ಷಕರು ಕಾದಿದ್ದಾರೆ. ಈ ಮೊದಲು ಕೂಡ ಕಪಿಲ್ ಶರ್ಮಾ ಅವರು ಅನೇಕ ಬಾರಿ ಸುನಿಲ್​ಗೆ ಆಹ್ವಾನ ನೀಡಿದ್ದರು. ಆದರೆ, ಇದನ್ನು ಅವರು ಸ್ವೀಕರಿಸಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ