ಬರ್ತಿದೆ ಕಪಿಲ್ ಶರ್ಮಾ ಹೊಸ ಶೋ; ವಾಹಿನಿ ತೊರೆದು ಒಟಿಟಿಯತ್ತ ಮುಖ ಮಾಡಿದ ಕಾಮಿಡಿಯನ್
ಕಪಿಲ್ ಶರ್ಮಾ ಒಂದು ಹೇಳಿಕೆ ನೀಡಿದ್ದರು. ‘ಮನೆ ಬದಲಾಗಿದೆ ಆದರೆ ಕುಟುಂಬವಲ್ಲ’ ಎಂದಿದ್ದರು. ಈ ಮೂಲಕ ಸೋನಿ ಟಿವಿಯನ್ನು ತೊರೆವ ಬಗ್ಗೆ ಘೋಷಣೆ ಮಾಡಿದ್ದರು. ಹಲವು ವರ್ಷಗಳಿಂದ ಸೋನಿ ವಾಹಿನಿ ಜೊತೆ ಕಪಿಲ್ ಒಳ್ಳೆಯ ಒಡನಾಟ ಹೊಂದಿದ್ದರು. ಈಗ ಅವರು ನೆಟ್ಫ್ಲಿಕ್ಸ್ ಒಟಿಟಿಯತ್ತ ಮುಖ ಮಾಡಿದ್ದಾರೆ.
ನಟ ಕಪಿಲ್ ಶರ್ಮಾ (Kapil Sharma) ಅವರು ತಮ್ಮದೇ ಆದ ಹಲವು ಶೋಗಳನ್ನು ಮಾಡಿದ್ದಾರೆ. ‘ಫ್ಯಾಮಿಲಿ ಟೈಮ್ ವಿತ್ ಕಪಿಲ್ ಶರ್ಮಾ’, ‘ದಿ ಕಪಿಲ್ ಶರ್ಮಾ ಶೋ’ ಹೀಗೆ ನಾನಾ ಹೆಸರುಗಳಲ್ಲಿ ಅವರು ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈಗ ಹೊಸ ಹೆಸರಿನೊಂದಿಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಎಂದು ಇದಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಮೊದಲು ಕಪಿಲ್ ಶರ್ಮಾ ಶೋಗಳು ಸೋನಿ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಈ ಬಾರಿ ಅವರು ನೆಟ್ಫ್ಲಿಕ್ಸ್ನತ್ತ ಮುಖ ಮಾಡಿದ್ದಾರೆ.
ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಈ ಮೊದಲು ಹಲವು ಶೋಗಳನ್ನು ಒಟ್ಟಾಗಿ ಮಾಡಿದ್ದಾರೆ. ಸುನಿಲ್ ಗ್ರೋವರ್ ಅವರ ಡಾಕ್ಟರ್ ಮಶೂರ್ ಗುಲಾಟಿ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಆದರೆ, ಇಬ್ಬರ ಮಧ್ಯೆ ಕಿರಿಕ್ ಆಗಿದ್ದರಿಂದ ಇಬ್ಬರೂ ದೂರ ಆದರು. ಈಗ ಸುಮಾರು ಆರು ವರ್ಷಗಳ ಬಳಿಕ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಈ ವಿಚಾರ ಫ್ಯಾನ್ಸ್ಗೆ ಸಾಕಷ್ಟು ಖುಷಿ ನೀಡಿದೆ.
ಇತ್ತೀಚೆಗಷ್ಟೇ ಕಪಿಲ್ ಶರ್ಮಾ ಅವರು ಒಂದು ಹೇಳಿಕೆ ನೀಡಿದ್ದರು. ‘ಮನೆ ಬದಲಾಗಿದೆ ಆದರೆ ಕುಟುಂಬವಲ್ಲ’ ಎಂದಿದ್ದರು. ಈ ಮೂಲಕ ಸೋನಿ ಟಿವಿಯನ್ನು ತೊರೆದ ಬಗ್ಗೆ ಘೋಷಣೆ ಮಾಡಿದ್ದರು. ಹಲವು ವರ್ಷಗಳಿಂದ ಅವರು ಸೋನಿ ವಾಹಿನಿ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ಈಗ ಅವರು ನೆಟ್ಫ್ಲಿಕ್ಸ್ ಒಟಿಟಿಯತ್ತ ಮುಖ ಮಾಡಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಇನ್ನೂ ಹಲವರು ಇರಲಿದ್ದಾರೆ. ಇದರ ಪ್ರಮೋಷನಲ್ ಟೀಸರ್ ಗಮನ ಸೆಳೆದೆ.
ಇದನ್ನೂ ಓದಿ: ಆನ್ಲೈನ್ ಬೆಟ್ಟಿಂಗ್ ಕೇಸ್; ಕಪಿಲ್ ಶರ್ಮಾ, ಶ್ರದ್ಧಾ ಕಪೂರ್ ಸೇರಿ ಹಲವರಿಗೆ ನೋಟಿಸ್
ಕಪಿಲ್ ಶರ್ಮಾ ಮೊದಲಾದವರು ಕುಳಿತು ಈ ಶೋನ ಟೈಟಲ್ ಹೇಗೆ ಅನೌನ್ಸ್ ಮಾಡೋದು ಎನ್ನುವ ಯೋಚನೆಯಲ್ಲಿ ಇರುತ್ತಾರೆ. ಒಬ್ಬೊಬ್ಬರು ಒಂದೊಂದು ಐಡಿಯಾ ಕೊಡುತ್ತಾರೆ. ಆದರೆ, ಬಜೆಟ್ ಕಾರಣಕ್ಕೆ ಎಲ್ಲಾ ಪ್ಲ್ಯಾನ್ ಕ್ಯಾನ್ಸಲ್ ಆಗುತ್ತದೆ. ಕೊನೆಯಲ್ಲಿ ಅದೇ ಸೆಟ್ನಲ್ಲಿ ಟೈಟಲ್ ಅನೌನ್ಸ್ ಆಗುತ್ತದೆ. ಈ ಟೀಸರ್ ಸಾಕಷ್ಟು ಫನ್ ಆಗಿದೆ. ಮಾರ್ಚ್ 30ರಿಂದ ಈ ಶೋ ಆರಂಭ ಆಗಲಿದೆ. ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಶೋ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ