ಸಿನಿಪ್ರಿಯರಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಹಬ್ಬ; 29 ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಿದ ಒಟಿಟಿ ಸಂಸ್ಥೆ
ನೆಟ್‌ಫ್ಲಿಕ್ಸ್ ಭಾರತದಲ್ಲಿ ಪಾರುಪತ್ಯ ಸಾಧಿಸುವ ಪ್ರಯತ್ನದಲ್ಲಿದೆ. ಇತ್ತೀಚೆಗೆ ಈ ವರ್ಷದ ಪೂರ್ವವೀಕ್ಷಣೆ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು, ಸರಣಿ ಹಾಗೂ ಶೋಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸೀರಿಸ್, ಸಿನಿಮಾ ಸೇರಿ 29 ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಒಟಿಟಿ ಬಗ್ಗೆ ಇರೋ ಕ್ರೇಜ್ ಜನರಲ್ಲಿ ಸಾಕಷ್ಟು ಹೆಚ್ಚಾಗಿದೆ. ಒಂದು ವರ್ಗದ ಜನರು ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ವೀಕ್ಷಿಸುತ್ತಿದ್ದಾರೆ. ಆದರೆ, ಮತ್ತೊಂದು ವರ್ಗ ಒಟಿಟಿ ಕಡೆ ಒಲವು ಹೊಂದಿದೆ. ಇವರು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಮನೆಯಲ್ಲಿ ಕುಳಿತು ವಿವಿಧ ರೀತಿಯ ಸಿನಿಮಾ, ಸೀರಿಸ್ ಆನಂದಿಸಲು ಬಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಒಟಿಟಿ ಪ್ಲಾಟ್ಫಾರ್ಮ್ಗಳು ಲಗ್ಗೆ ಇಟ್ಟಿವೆ. ಇವರ ಮಧ್ಯೆ ಸ್ಪರ್ಧೆ ಕೂಡ ಜೋರಾಗಿದೆ. ಈ ನಿಟ್ಟಿನಲ್ಲಿ ಇದೀಗ ನೆಟ್‌ಫ್ಲಿಕ್ಸ್ (Netflix) ದೊಡ್ಡ ಘೋಷಣೆ ಮಾಡಿದೆ. ಈ ವರ್ಷ ರಿಲೀಸ್ ಆಗಲಿರುವ ಸೀರಿಸ್ ಹಾಗೂ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ನೆಟ್‌ಫ್ಲಿಕ್ಸ್ ಭಾರತದಲ್ಲಿ ಪಾರುಪತ್ಯ ಸಾಧಿಸಿದೆ. ಈಗ ಫೆಬ್ರವರಿ 29ರಂದು ಪೂರ್ವವೀಕ್ಷಣೆ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು ಮತ್ತು ಸರಣಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸೀರಿಸ್, ಸಿನಿಮಾ ಸೇರಿ 29 ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಪಟ್ಟಿಯು 8 ಸಿನಿಮಾಗಳು ಮತ್ತು ಹಲವಾರು ವೆಬ್ ಸರಣಿಗಳು ಮತ್ತು ಸಾಕ್ಷ್ಯಚಿತ್ರವನ್ನು ಒಳಗೊಂಡಿದೆ. ಇವುಗಳು ನೇರವಾಗಿ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ರಿಲೀಸ್ ಆಗೋ ಸಿನಿಮಾ ಹಾಗೂ ಸರಣಿಗಳಾಗಿವೆ. ಥಿಯೇಟರ್ನಲ್ಲಿ ರಿಲೀಸ್ ಆಗಿ ಒಟಿಟಿಗೆ ಕಾಲಿಡುವ ಸಿನಿಮಾಗಳ ಪಟ್ಟಿ ಬೇರೆಯೇ ಇದೆ. ಅದನ್ನು ಕಾಲಕ್ಕೆ ತಕ್ಕಂತೆ ರಿವೀಲ್ ಮಾಡಲಾಗುತ್ತದೆ.
ಸಿನಿಮಾಗಳ ಪಟ್ಟಿ
ಏಪ್ರಿಲ್ 12ರಂದು ‘ಅಮರ್ ಸಿಂಗ್ ಚಮಿಕ್ಲಾ’ ಸಿನಿಮಾ ರಿಲೀಸ್ ಆಗಲಿದೆ. ದಿಲ್ಜಿತ್ ದೋಸಂಜ್, ಪರಿಣೀತಿ ಚೋಪ್ರಾ ನಟಿಸಿದ್ದಾರೆ. ಇಮ್ತಿಯಾಜ್ ಅಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾಜೋಲ್ ಕೃತಿ ಸನೋನ್ ನಟನೆಯ ‘ದೋ ಪಟ್ಟಿ’, ‘ಮಹರಾಜ್’, ‘ಮರ್ಡರ್ ಮುಬಾರಕ್’, ‘ಫಿರ್ ಆಯಿ ಹಸೀ ದಿಲ್ರುಬಾ’, ‘ಸಿಕಂದರ್ ಕಾ ಮುಕ್ದಾರ್’, ‘ವಿಜಯ್ 69’, ‘ವೈಲ್ಡ್ ವೈಲ್ಡ್ ಪಂಜಾಬ್’ ಸಿನಿಮಾಗಳು ಈ ವರ್ಷ ರಿಲೀಸ್ ಆಗಲಿವೆ.
ಸೀರಿಸ್ ಬಗ್ಗೆ
‘ಡಬ್ಬಾ ಕಾರ್ಟೆಲ್’, ‘ಹೀರಾಮಂಡಿ: ದಿ ಡೈಮಂಡ್ ಬಜಾರ್’, ‘ಐಸಿ 814: ದಿ ಕಂದಾಹಾರ್ ಹೈಜಾಕ್’, ‘ಖಾಕಿ’, ‘ಕೋಟಾ ಫ್ಯಾಕ್ಟರಿ 3’, ‘ಮಂಡಾಲಾ ಮರ್ಡರ್ಸ್’ ಮೊದಲಾದ ಸೀರಿಸ್ಗಳು ಈ ವರ್ಷ ರಿಲೀಸ್ ಆಗಲಿವೆ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕೂಡ ಮಾರ್ಚ್ 30ರಿಂದ ಪ್ರಸಾರ ಆರಂಭಿಸಲಿದೆ. ಈ ಶೋ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಕಪಿಲ್ ಶರ್ಮಾ ಅವರು ಈ ಶೋ ನಡೆಸಿಕೊಡಲಿದ್ದಾರೆ. ಸುನಿಲ್ ಗ್ರೋವರ್ ಹಾಗೂ ಕಪಿಲ್ ಶರ್ಮಾ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ: ಕುಮಾರಿ ಆಂಟಿಯಂತೆ! ನೆಟ್‌ಫ್ಲಿಕ್ಸ್‌ನಲ್ಲಿ ಆಂಟಿ ಜೀವನ ಕಥೆ ಸಾಕ್ಷ್ಯಚಿತ್ರವಾಗಿ ಬರುತ್ತದಾ? ಅಸಲಿ ಕಥೆಯೇನು?
ಸಿನಿಮಾ, ವೆಬ್ ಸರಣಿಗಳು ಮತ್ತು ಟಿವಿ ಕಾರ್ಯಕ್ರಮಗಳ ಹೊರತಾಗಿ, ಈ ಪಟ್ಟಿಯಲ್ಲಿ ಒಂದು ಸಾಕ್ಷ್ಯಚಿತ್ರವೂ ಇದೆ. ಇದು ಗಾಯಕ ಹನಿ ಸಿಂಗ್ ಅವರನ್ನು ಆಧರಿಸಿದೆ. ಸಾಕ್ಷ್ಯಚಿತ್ರದ ಹೆಸರು ‘ಯೋ ಯೋ ಹನಿ ಸಿಂಗ್: ಫೇಮಸ್’ ಇದನ್ನು 2023ರ ಮಾರ್ಚ್ನಲ್ಲಿ ಘೋಷಿಸಲಾಯಿತು ಮತ್ತು ಇದರ ಬಿಡುಗಡೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 am, Fri, 1 March 24