ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಕುರಿತು ಬರಲಿದೆ ಸೀರಿಸ್; ಮೂಡಿತು ಕುತೂಹಲ
ಹಿರಿಯ ನಿರ್ದೇಶಕ ಪ್ರಕಾಶ್ ಝಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರು ಎಂಟು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೀಗಾಗಿ ಅವರು ಈ ಕಥೆಯನ್ನು ಸಮರ್ಥವಾಗಿ ನಿರ್ವಹಿಸಬಹುದು ಎಂದು ಕೆಲವರು ಊಹಿಸಿದ್ದಾರೆ. ವಿನಯ್ ಸೀತಾಪತಿ ಬರೆದ ‘ಹಾಫ್ ಲಯನ್’ ಪುಸ್ತಕ ಆಧರಿಸಿಯೇ ಈ ಚಿತ್ರ ಸಿದ್ಧವಾಗುತ್ತಿದೆ.
ಇತ್ತೀಚೆಗೆ ಹಲವು ಬಯೋಪಿಕ್ಗಳು ಸಿದ್ಧಗೊಳ್ಳುತ್ತಿವೆ. ರಾಜಕೀಯ, ಕ್ರೀಡೆ, ಸಿನಿಮಾ ಹೀಗೆ ನಾನಾ ಕ್ಷೇತ್ರದಲ್ಲಿ ಹೆಸರು ಮಾಡಿದವರ ಜೀವನ ಚರಿತ್ರೆಯನ್ನು ದೊಡ್ಡ ಪರದೆಮೇಲೆ ತರುವ ಕೆಲಸ ಆಗುತ್ತಿದೆ. ಈಗ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ (PV Narasimha Rao) ಅವರ ಬಯೋಪಿಕ್ ತರಲು ‘ಆಹಾ’ ಒಟಿಟಿ ಪ್ಲಾಟ್ಫಾರ್ಮ್ ಮುಂದಾಗಿದೆ. ಇದಕ್ಕೆ ‘ಹಾಫ್ ಲಯನ್’ ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪಿ.ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಈ ಬೆನ್ನಲ್ಲೇ ಈ ಬಯೋಪಿಕ್ ಘೋಷಣೆ ಆಗಿದೆ.
1991ರಿಂದ 1996ರವರೆಗೆ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರು ದೇಶದ ಒಂಭತ್ತನೇ ಪ್ರಧಾನಿ. ಅಂದಿನ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆ ಆಯಿತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಆಗ ಪಿ.ವಿ. ನರಸಿಂಹ ರಾವ್ ಪ್ರಧಾನಿ ಆದರು. 90ರ ದಶಕದಲ್ಲಿ ಭಾರತದ ಆರ್ಥಿಕತೆಯ ಪುನಶ್ಚೇತನ ಮಾಡಿದ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಈಗ ಅವರ ಬಗ್ಗೆ ಬಯೋಪಿಕ್ ಬರುತ್ತಿರುವುದು ಅವರ ಅನುಯಾಯಿಗಳಿಗೆ ಖುಷಿ ನೀಡಿದೆ.
ಆಹಾ ಮಾಡಿರೋ ಟ್ವೀಟ್
Honouring the unparalleled legacy of the late PM, P.V. Narasimha Rao, Bharat Ratna awardee and the driving force behind India’s economic revolution.
Aha Studio and Applause Entertainment are proud and excited to bring his story to the audience.@ApplauseSocial @ahavideoIN… pic.twitter.com/cUj3UEe9zs
— ahavideoin (@ahavideoIN) February 28, 2024
ಹಿರಿಯ ನಿರ್ದೇಶಕ ಪ್ರಕಾಶ್ ಝಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರು ಎಂಟು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೀಗಾಗಿ ಅವರು ಈ ಕಥೆಯನ್ನು ಸಮರ್ಥವಾಗಿ ನಿರ್ವಹಿಸಬಹುದು ಎಂದು ಸಿನಿಪ್ರಿಯರು ಊಹಿಸಿದ್ದಾರೆ. ವಿನಯ್ ಸೀತಾಪತಿ ಬರೆದ ‘ಹಾಫ್ ಲಯನ್’ ಪುಸ್ತಕ ಆಧರಿಸಿಯೇ ಈ ಚಿತ್ರ ಸಿದ್ಧವಾಗುತ್ತಿದೆ.
ನರಸಿಂಹರಾವ್ ಅವರು ಪ್ರಧಾನಿ ಆದ ಸಂದರ್ಭದಲ್ಲಿ ಭಾರತದ ಭಾರತದ ಆರ್ಥಿಕತೆ ಸರಿ ಇರಲಿಲ್ಲ. ನಾನಾ ಸಮಸ್ಯೆಗಳು ಕಾಡುತ್ತಿದ್ದವು. ಆಗ ಅವರು ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿದರು. ಜೊತೆಗೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅವರು ತಂದ ಸುಧಾರಣೆಗಳು ಹಲವಿದೆ. ಇವುಗಳನ್ನು ಸಿನಿಮಾದಲ್ಲಿ ತೋರಿಸೋ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದಿಂದ ಅವರಿಗೆ ಮೋಸ ಆಗಿದೆ ಎಂದು ಬಿಜೆಪಿ ಆರೋಪಿಸುತ್ತಾ ಇರುತ್ತದೆ. ಇದನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ಪ್ರಕಾಶ್ ಝಾ ಅವರು ‘ರಾಜನೀತಿ’ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ಅವರು ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯ ಪಾತ್ರಗಳನ್ನು ಪರೋಕ್ಷವಾಗಿ ತೋರಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ