‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರವನ್ನು ಮಿಸ್ ಮಾಡಲೇಬೇಡಿ; ಕಾರಣ ಇಲ್ಲಿದೆ

‘ದಿ ಶೀಪ್ ಡಿಟೆಕ್ಟಿವ್ಸ್’ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿರುವ ವಿಶಿಷ್ಟ ಮರ್ಡರ್ ಮಿಸ್ಟರಿ ಚಿತ್ರ. ಇದರಲ್ಲಿ ಕುರಿಗಳು ತಮ್ಮ ಮಾಲೀಕನ ಹತ್ಯೆಯನ್ನು ತನಿಖೆ ಮಾಡುತ್ತವೆ. ಕನ್ನಡಕ್ಕೆ ಡಬ್ ಆಗಿರುವ ಈ ಹಾಲಿವುಡ್ ಚಿತ್ರ ಸಸ್ಪೆನ್ಸ್ ಜೊತೆಗೆ ಜೀವನದ ಪಾಠಗಳನ್ನೂ ಹೇಳುತ್ತದೆ. ವೀಕೆಂಡ್ ವಾಚ್‌ಗೆ ಉತ್ತಮ ಆಯ್ಕೆಯಾಗಿರುವ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರವನ್ನು ಮಿಸ್ ಮಾಡಲೇಬೇಡಿ; ಕಾರಣ ಇಲ್ಲಿದೆ
ದಿ ಶೀಪ್ ಡೆಟೆಕ್ಟಿವ್ಸ್

Updated on: Jul 11, 2026 | 4:00 PM

ಮುಖ್ಯಾಂಶಗಳು

  • ಕುರಿಗಳ ತನಿಖೆಯ ವಿಶಿಷ್ಟ ಕಥಾಹಂದರ ಹೊಂದಿರುವ ‘ದಿ ಶೀಪ್ ಡಿಟೆಕ್ಟಿವ್’
  • ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲೇ ವೀಕ್ಷಿಸಿ ಹೊಸ ಮರ್ಡರ್ ಮಿಸ್ಟರಿ
  • ಸಸ್ಪೆನ್ಸ್ ಮತ್ತು ಮನರಂಜನೆಯ ಜೊತೆಗೆ ಜೀವನದ ಪಾಠ ಹೇಳುವ ಸಿನಿಮಾ

ವಿಶ್ವಾದ್ಯಂತ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಬೇರೆ ಬೇರೆ ಭಾಷೆಗಳಲ್ಲಿ, ಬೇರೆ ಬೇರೆ ರೀತಿಯ ಆಲೋಚನೆಗಳೊಂದಿಗೆ ಸಿನಿಮಾಗಳು ಮೂಡಿ ಬರುತ್ತವೆ. ಈಗ ಒಟಿಟಿ ಅಂಗೈಯಲ್ಲೇ ಇರುವುದರಿಂದ ಅವುಗಳನ್ನು ಸುಲಭದಲ್ಲಿ ವೀಕ್ಷಿಸಬಹುದು. ಅಮೇಜಾನ್ ಪ್ರೈಮ್ ವಿಡಿಯೋ (Prime Video) ಮೂಲಕ ಪ್ರಸಾರ ಆರಂಭಿಸಿರುವ ‘ದಿ ಶೀಪ್ ಡಿಟೆಕ್ಟಿವ್ಸ್​’ ವೀಕೆಂಡ್ ವಾಚ್​​ಗೆ ಉತ್ತಮ ಆಯ್ಕೆ.

ಒಂದು ಸಾವು ಸಂಭವಿಸುತ್ತದೆ. ಆ ಕೊಲೆಯನ್ನು ಯಾರು ಮಾಡಿದ್ದು ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ಇಳಿಯೋದು ಸಾಮಾನ್ಯ. ಆದರೆ, ‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರದಲ್ಲಿ ಕುರಿಗಳು ತನಿಖೆಗೆ ಇಳಿಯುತ್ತವೆ. ತನ್ನ ಮಾಲೀಕನನ್ನು ಸಾಯಿಸಿದವರು ಯಾರು ಎಂಬುದನ್ನು ಅವೇ ಪತ್ತೆ ಹಚ್ಚುತ್ತವೆ. ಈ ರೀತಿಯ ಭಿನ್ನ ಆಲೋಚನೆಯೊಂದಿಗೆ ಸಿನಿಮಾ ಮೂಡಿ ಬಂದಿದೆ.

ಕುರಿಗಳಿಗೆ ಮಾತನಾಡಲು ಬರೋದಿಲ್ಲ. ಅವನ್ನು ದಡ್ಡ ಪ್ರಾಣಿಗಳು ಎಂದು ಕೂಡ ಪರಿಗಣಿಸಲಾಗುತ್ತದೆ. ಒಂದೊಮ್ಮೆ ಅವರಿಗೆ ಮಾತನಾಡಲು ಬಂದಿದ್ದರೆ ಅವು ಯಾವ ರೀತಿಯಲ್ಲಿ ತಮ್ಮ ಭಾವನೆಯನ್ನು ಹೊರಕ್ಕೆ ಹಾಕುತ್ತಿದ್ದವು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಭಿನ್ನ ಆಲೋಚನೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಕೈಲೆ ಬಾಲ್ದಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹುಗ್ ಜಾಕ್​​ಮ್ಯಾನ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಸ್ಪೆನ್ಸ್ ಜೊತೆಗೆ ಒಂದಷ್ಟು ಫನ್ ಹಾಗೂ ಜೀವನದ ಪಾಠಗಳನ್ನು ಹೇಳಿಕೊಡುವ ಪ್ರಯತ್ನ ನಡೆದಿದೆ ಎಂಬುದು ವಿಶೇಷ. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ: ಸಾಕಷ್ಟು ಹಣ ಕೊಟ್ಟ ಬಳಿಕವೂ ಜಾಹೀರಾತು; ಅಮೆಜಾನ್‌ ಪ್ರೈಮ್ ವಿಡಿಯೋಗೆ ಕಾನೂನು ಸಂಕಷ್ಟ 

ಡಬ್ಬಿಂಗ್ ಎಂಬುದು ಈಗ ತುಂಬಾನೇ ವಿಸ್ತಾರವಾಗಿ ಬೆಳೆದಿದೆ. ಇದು ಹಾಲಿವುಡ್ ಸಿನಿಮಾ ಆದರೂ ಕನ್ನಡದಲ್ಲೂ ಡಬ್ ಆಗಿ. ತುಂಬಾನೇ ಸುಂದರವಾಗಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us