
ವಿಜಯ್ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಿಪ್ಪನ್ ಸ್ವಾಮಿ’ ಟ್ರೈಲರ್ ಮೂಲಕವೇ ಗಮನ ಸೆಳೆದಿದ್ದ ಸಿನಿಮಾ. ಚಿತ್ರಮಂದಿರಗಳಲ್ಲಿಯೂ ಸಿನಿಮಾ ಸುದ್ದು ಮಾಡಿತ್ತು. ಇದೀಗ ಸಿನಿಮಾ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಮಿರಾಯ್’ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಖತ್ ಸದ್ದು ಮಾಡಿತ್ತು. ತೇಜ್ ಸಜ್ಜಾ ನಾಯಕನಾಗಿ ನಟಿಸಿದ್ದ ಈ ಸಿನಿಮಾನಲ್ಲಿ ಮಂಚು ಮನೋಜ್ ವಿಲನ್. ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಸ್ಟ್ರೀಂ ಆಗುತ್ತಿದೆ.

ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಿಗೆ ನಟಿಸಿರುವ ಸಿನಿಮಾ ‘ವಾರ್ 2’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ಕನ್ನಡದ ನಟ ವಶಿಷ್ಟ ಸಿಂಹ, ಕಟ್ಟಪ್ಪ ಖ್ಯಾತಿಯ ಸತ್ಯ ರಾಜ್ ಸೇರಿದಂತೆ ಇನ್ನೂ ಕೆಲವು ನಟರು ನಟಿಸಿರುವ ತೆಲುಗು ಸಿನಿಮಾ ಕೆಲ ದಿನಗಳ ಹಿಂದೆ ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. ಈ ಕ್ರೈಂ ಥ್ರಿಲ್ಲರ್ ಸಿನಿಮಾ ಸನ್ ನೆಕ್ಸ್ಟ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸರ್ಚ್ ಹೆಸರಿನ ಕ್ರೈಂ ಥ್ರಿಲ್ಲರ್ ಹಿಂದಿ ವೆಬ್ ಸರಣಿ ಇದೇ ವಾರ ಜಿಯೋ ಹಾಟ್ಸ್ಟಾರ್ಲ್ಲಿ ಬಿಡುಗಡೆ ಆಗಿದೆ. ಯುವತಿಯೊಬ್ಬಾಕೆಯ ಹೆಣ ಸಿಗುವ ಮೂಲಕ ಪ್ರಾರಂಭವಾಗುವ ಕತೆ ಇಂದಿನ ಕಾಲದ ಯುವಕ-ಯುವತಿಯ ಮನಸ್ಥಿತಿಯನ್ನು ಹೇಳುವ ಕತೆಯನ್ನು ಒಳಗೊಂಡಿದೆ.
Published On - 3:32 pm, Sat, 11 October 25