Citadel: ಸಮಂತಾ-ವರುಣ್​ ಧವನ್​ ಮಧ್ಯೆ ಅಂಥದ್ದೇನೂ ಆಗಿಲ್ವಾ? ನೆಟ್ಟಿಗರ ಅನುಮಾನಕ್ಕೆ ಸಿಕ್ತು ಉತ್ತರ

Samantha Ruth Prabhu: ‘ಸಿಟಾಡೆಲ್’​ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಹಾಗಾದರೆ ಇದರ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ಮತ್ತು ವರುಣ್​ ಧವನ್​ ಅವರು ಆಪ್ತವಾಗಿ ನಟಿಸಿದ್ದಾರಾ?

Citadel: ಸಮಂತಾ-ವರುಣ್​ ಧವನ್​ ಮಧ್ಯೆ ಅಂಥದ್ದೇನೂ ಆಗಿಲ್ವಾ? ನೆಟ್ಟಿಗರ ಅನುಮಾನಕ್ಕೆ ಸಿಕ್ತು ಉತ್ತರ
ಸಮಂತಾ, ವರುಣ್ ಧವನ್
Edited By:

Updated on: May 25, 2023 | 7:21 AM

ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆ ಆಗಿರುವ ‘ಸಿಟಾಡೆಲ್​’ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ರಿಚರ್ಡ್​ ಮ್ಯಾಡನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಅದರ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಮತ್ತು ವರುಣ್​ ಧವನ್​ ಅವರು ತೆರೆ ಹಂಚಿಕೊಂಡಿದ್ದಾರೆ. ಇಂಡಿಯನ್​ ವರ್ಷನ್​ ಇನ್ನೂ ಬಿಡುಗಡೆ ಆಗಿಲ್ಲ. ಇಂಗ್ಲಿಷ್​ ‘ಸಿಟಾಡೆಲ್’​ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಹಾಗಾದರೆ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು (Samantha Ruth Prabhu) ಮತ್ತು ವರುಣ್​ ಧವನ್​ ಅವರು ಆಪ್ತವಾಗಿ ನಟಿಸಿದ್ದಾರಾ? ಇಂಥ ಪ್ರಶ್ನೆ ಮೂಡುವುದು ಸಹಜ. ಆದರೆ ಅವರಿಬ್ಬರ ನಡುವೆ ಅಂಥದ್ದೇನೂ ನಡೆದಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಮೂಲಗಳ ಪ್ರಕಾರ ‘ಸಿಟಾಡೆಲ್​’ (Citadel Web Series) ಇಂಗ್ಲಿಷ್​ ವರ್ಷನ್​ಗೂ ಭಾರತದ ವರ್ಷನ್​ಗೂ ಸಾಕಷ್ಟು ಬದಲಾವಣೆ ಇರಲಿದೆ.

‘ಸಿಟಾಡೆಲ್​’ ವೆಬ್​​ ಸಿರೀಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ತುಂಬ ಬೋಲ್ಡ್​ ಆಗಿ ನಟಿಸಿದ್ದಾರೆ. ಆದರೆ ಸಮಂತಾ ರುತ್​ ಪ್ರಭು ಅವರ ಪಾತ್ರಕ್ಕೆ ಟ್ವಿಸ್ಟ್​ ನೀಡಲಾಗಿದೆ. ಹಾಗಾಗಿ ಇಂಡಿಯನ್​ ವರ್ಷನ್​ನ ‘ಸಿಟಾಡೆಲ್​’ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಪ್ರಿಯಾಂಕಾ ನಿಭಾಯಿಸಿದ ಪಾತ್ರಕ್ಕೂ ಸಮಂತಾ ಮಾಡುತ್ತಿರುವ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಹೇಳಲಾಗುತ್ತಿದೆ.

ಟ್ರೋಲ್​ ಆಗಿದ್ದ ಸಮಂತಾ:

ಸಮಂತಾ ರುತ್​ ಪ್ರಭು ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗಿದ್ದರು. ಅದಕ್ಕೆ ಕಾರಣ ಆಗಿದ್ದು ಅವರು ಇಂಗ್ಲಿಷ್​ ಉಚ್ಛಾರ. ಕೆಲವೇ ದಿನಗಳ ಹಿಂದೆ ‘ಸಿಟಾಡೆಲ್​’ ವೆಬ್​ ಸರಣಿಯ ಪ್ರೀಮಿಯರ್​ ಶೋ ಸಲುವಾಗಿ ಲಂಡನ್​ಗೆ ತೆರಳಿದ್ದ ಅವರು ಅಲ್ಲಿನ ಜನರ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಇದು ನೆಟ್ಟಿಗರಿಗೆ ಸರಿ ಎನಿಸಲಿಲ್ಲ. ಹಾಗಾಗಿ ಸಮಂತಾರನ್ನು ಟೀಕೆ ಮಾಡಲಾಯಿತು. ಇಂಗ್ಲೆಂಡ್ ಮಂದಿಯ ರೀತಿ ಸಮಂತಾ ಇಂಗ್ಲಿಷ್​ ಮಾತನಾಡಿರುವ ವಿಡಿಯೋ ವೈರಲ್​ ಆಯಿತು.

ಇದನ್ನೂ ಓದಿ
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ಇದನ್ನೂ ಓದಿ: Citadel: ‘ಸಿಟಾಡೆಲ್​’ ಪ್ರೀಮಿಯರ್​ ಶೋನಲ್ಲಿ ಮಿಂಚಿದ ಸಮಂತಾ ರುತ್​ ಪ್ರಭು, ವರುಣ್​ ಧವನ್​

ವಿದೇಶಿ ಮಾಧ್ಯಮಗಳ ಜೊತೆ ವರುಣ್​ ಧವನ್​ ಮತ್ತು ಸಮಂತಾ ಅವರು ಮಾತನಾಡಿದರು. ಆ ವೇಳೆ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಆದರೆ ಉಚ್ಚಾರಣೆಯಲ್ಲಿ ಇಂಗ್ಲಿಷ್​ ಮಂದಿಯನ್ನು ಅವರು ಅನುಕರಣೆ ಮಾಡಿರುವುದು ಹಾಸ್ಯಾಸ್ಪದ ಎಂದು ನೆಟ್ಟಿಗರು ಟ್ರೋಲ್​ ಮಾಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:25 pm, Wed, 24 May 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us