ಚಿತ್ರರಂಗದಲ್ಲಿ ಯಾರ ಬದುಕು ಯಾವ ರೀತಿಯಲ್ಲಿ ಬದಲಾಗುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಕೆಲವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರೆ ಇನ್ನೂ ಕೆಲವರು ಸಂಕಷ್ಟ ಅನುಭವಿಸುತ್ತಾರೆ. ಇದಕ್ಕೆ ತೆಲುಗು ಆರ್ಟಿಸ್ಟ್ ದರ್ಶನಮ್ ಮೊಗಲಯ್ಯಾ (Darshanam Mogilaiah) ಉತ್ತಮ ಉದಾಹರಣೆ. ಪದ್ಮಶ್ರೀ ಪ್ರಶಸ್ತಿ ಪಡೆದ ಇವರು ಈಗ ಹೈದರಾಬಾದ್ನಲ್ಲಿ ದಿನಗೂಲಿ ಮಾಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ದರ್ಶನಮ್ ಅವರು ಕಿನ್ನೇರ ಮೊಗಲಯ್ಯ ಎಂದು ಕೂಡ ಫೇಮಸ್. ಕಿನ್ನೇರ ಎಂಬ ಹೆಸರಿನಿಂದ ಕರೆಯಲ್ಪಡುವ ಬುಡಕಟ್ಟು ಸಂಗೀತ ವಾದ್ಯ ನುಡಿಸುವ ಕೆಲವೇ ಕೆಲವು ಕಲಾವಿದರಲ್ಲಿ ಅವರು ಕೂಡ ಒಬ್ಬರು. ಕಿನ್ನೇರ ವೀಣೆ ತಂತಿ ವಾದ್ಯವಾಗಿದ್ದು, ಇದರ ಮೂಲ ತುಂಬಾನೇ ಹಳೆಯದು. ಇದನ್ನು ದರ್ಶನಮ್ ಅವರು ನುಡಿಸುತ್ತಾರೆ . 2022ರಲ್ಲಿ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕಲಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ.
Padma Shri awardee #Mogulaiah, known for reinventing the ‘Kinnera’, now toils as a daily wager near #Hyderabad after his monthly honorarium ceased. Despite promises and positive responses, he struggles with medical expenses for himself and his son. #PadmaShriAwardee pic.twitter.com/5yYryOonFD
— Glint Insights Media (@GlintInsights) May 3, 2024
ಸದ್ಯ ಈಗ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಗಾರೆ ಕೆಲಸ ಮಾಡುತ್ತಿರುವುದು ಇದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಕಷ್ಟಕ್ಕೆ ಸರ್ಕಾರ ಕಿವಿ ಆಗಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲಿ ಚಿಕಿತ್ಸೆ
‘ಭೀಮ್ಲಾ ನಾಯಕ್’ ಸಿನಿಮಾದ ಟೈಟಲ್ ಸಾಂಗ್ಗೆ ದರ್ಶನಮ್ ಅವರು ಕಿನ್ನೇರ ನುಡಿಸಿದ್ದರು. ರಾಜ್ಯ ಸರ್ಕಾರದಿಂದ ಅವರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡೋ ಬಗ್ಗೆ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇತ್ತೀಚೆಗೆ ಅದನ್ನು ಅವರು ನಿಲ್ಲಿಸಿದ್ದರು. ಇದಾದ ಬಳಿಕ ದರ್ಶನಮ್ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.