ನರೇಶ್ (Naresh ) ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕೌಟುಂಬಿಕ ಕಲಹ ಬೀದಿಗೆ ಬಂದು ಬಹಳ ಸಮಯ ಕಳೆದಿದೆ. ನಟಿ ಪವಿತ್ರಾ ಲೋಕೇಶ್ ಅವರನ್ನು ನರೇಶ್ ಲವ್ ಮಾಡುತ್ತಿದ್ದಾರೆ, ಅವರಿಬ್ಬರು ಒಟ್ಟಿಗೆ ಬಾಳುತ್ತಿದ್ದಾರೆ ಎಂದು ಆರೋಪಿಸಿ ರಮ್ಯಾ ರಘುಪತಿ (Ramya Raghupathi) ಈ ಮೊದಲು ಗಲಾಟೆ ಮಾಡಿದ್ದರು. ಈಗ ನರೇಶ್ ಹಾಗೂ ಪವಿತ್ರಾ ಶೀಘ್ರವೇ ಮದುವೆ ಆಗುವ ಸೂಚನೆ ನೀಡಿದ್ದಾರೆ. ಹೊಸ ವಿಡಿಯೋ ಮೂಲಕ ನರೇಶ್ ಈ ವಿಚಾರವನ್ನು ಖಚಿತಪಡಿಸಿದ್ದರು. ಈಗ ಈ ಬೆಳವಣಿಗೆ ಬಗ್ಗೆ ರಮ್ಯಾ ರಘುಪತಿ ಮಾತನಾಡಿದ್ದಾರೆ.
ತೆಲುಗಿನ ರೆಡ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರಮ್ಯಾ ರಘುಪತಿ ಸುಮಾರು ಮೂರು ಗಂಟೆ ಮಾತನಾಡಿದ್ದಾರೆ. ಸಂದರ್ಶನದುದ್ದಕ್ಕೂ ನರೇಶ್ ಅವರಿಂದ ಆದ ಮೋಸದ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲ ನರೇಶ್ ಅವರನ್ನು ಬಿಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ‘ಪವಿತ್ರಾ ಹಾಗೂ ನರೇಶ್ ಮದುವೆ ಆಗುತ್ತಿರುವುದು ನಿಜ. ಆದರೆ, ನನಗೆ ಹಾಗೂ ನರೇಶ್ಗೆ ವಿಚ್ಛಆದನ ಆಗಿಲ್ಲ. ನಾನು ವಿಚ್ಛೇದನ ಕೊಡುವುದೂ ಇಲ್ಲ. ನಾವಿಬ್ಬರೂ ಬೇರೆ ಆಗುವುದಿಲ್ಲ ಎಂದು ಮಗನಿಗೆ ಪ್ರಾಮಿಸ್ ಮಾಡಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
‘ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮಗ ಹುಟ್ಟಿದ ನಂತರದಲ್ಲಿ ನರೇಶ್ ಬದಲಾದರು. ಅವರ ಶರ್ಟ್ನಿಂದ ಲೇಡಿಸ್ ಪರ್ಫ್ಯೂಮ್ ಪರಿಮಳ ಬರುತ್ತಿತ್ತು. ಈ ಬಗ್ಗೆ ಕೇಳಿದರೆ ಬೇರೆ ಯಾವುದೋ ಕಥೆಯನ್ನು ಹೇಳುತ್ತಿದ್ದರು. ಮೀಟಿಂಗ್ನಲ್ಲಿ ಇದ್ದೆ ಎನ್ನುತ್ತಿದ್ದರು. ಆದರೆ, ಕ್ರಾಸ್ಚೆಕ್ ಮಾಡಿದರೆ ಅದು ಸುಳ್ಳು ಎಂಬುದು ಗೊತ್ತಾಗುತ್ತಿತ್ತು’ ಎಂದಿದ್ದಾರೆ ರಮ್ಯಾ.
‘ಹೊಸ ವರ್ಷ, ಹೊಸ ಆರಂಭ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂದು ಕ್ಯಾಪ್ಷನ್ ನೀಡುವ ಮೂಲಕ ನರೇಶ್ ಅವರು ಈ ವಿಡಿಯೋ ಹಂಚಿಕೊಂಡಿದ್ದರು. 2023ರ ಹೊಸ ವರ್ಷವನ್ನು ನರೇಶ್ ಮತ್ತು ಪವಿತ್ರಾ ಲೋಕೇಶ್ ತುಂಬ ರೊಮ್ಯಾಂಟಿಕ್ ಆಗಿ ಸ್ವಾಗತಿಸುತ್ತಿದ್ದರು. ಕ್ಯಾಂಡಲ್ ಹಚ್ಚಿ, ಕೇಕ್ ಕತ್ತರಿಸಿ, ಪರಸ್ಪರ ಸಿಹಿ ತಿನಿಸಿ ನಂತರ ತುಟಿಗೆ ಚುಂಬಿಸುತ್ತಿರುವ ವಿಡಿಯೋವನ್ನು ಈ ಜೋಡಿ ಹಂಚಿಕೊಂಡಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:24 am, Fri, 6 January 23