
ಪವನ್ ಕಲ್ಯಾಣ್ (Pawan Kalyan), ಆಂಧ್ರ ಪ್ರದೇಶ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ. ಜೊತೆಗೆ ಕೆಲವು ಪ್ರಮುಖ ಖಾತೆಗಳಿಗೆ ಸಚಿವರು ಸಹ. ಜೊತೆಗೆ ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸಹ. ಈ ಜವಾಬ್ದಾರಿಗಳ ಜೊತೆಗೆ ಸಿನಿಮಾ ನಟನೆಯನ್ನೂ ಮಾಡುತ್ತಿದ್ದಾರೆ. ಪ್ರಸ್ತುತ ಅವರು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಶೂಟಿಂಗ್ಗಾಗಿ ವಿದೇಶಕ್ಕೆ ಸಹ ಹೋಗಿ ಬಂದಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರಿಗೆ ವಿಶೇಷ ಗೌರವವೊಂದು ಧಕ್ಕಿದೆ.
ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಸಮರ ಕಲೆಗಳ ಬಗ್ಗೆ ಅತೀವ ಆಸಕ್ತಿ ಹೊಂದಿರುವವರು. ಪವನ್ ಕಲ್ಯಾಣ್ ಅವರ ಹಲವು ಸಿನಿಮಾಗಳಲ್ಲಿ ಅವರು ತಮ್ಮ ಸಮರ ಕಲಾ ನೈಪುಣ್ಯತೆ ತೋರಿಸಿದ್ದಾರೆ. ‘ಖುಷಿ’, ‘ಜಾನಿ’, ‘ಬದ್ರಿ’, ‘ಗುಡುಂಬ ಶಂಕರ್’ ಸೇರಿದಂತೆ ಇನ್ನು ಹಲವಾರು ಸಿನಿಮಾಗಳಿಗೆ ಸ್ಟಂಟ್ ಕೊರಿಯೋಗ್ರಫಿ ಸಹ ಮಾಡಿದ್ದಾರೆ. ಸ್ವತಃ ಕರಾಟೆ, ಜಿಜುತ್ಸು ಇನ್ನೂ ಕೆಲವು ಸಮರ ಕಲೆಗಳನ್ನು ಕಲಿತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಓಜಿ’ ಸಿನಿಮಾನಲ್ಲಿ ಸಹ ಪವನ್ ಕಲ್ಯಾಣ್ ಸಮರ ಕಲಾ ನೈಪುಣ್ಯವುಳ್ಳ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಪವನ್ ಕಲ್ಯಾಣ್ ಪುತ್ರನಿಗಾಗಿ ನೂರಾರು ಕೋಟಿ ಸುರಿಯಲು ರೆಡಿ’
ಪವನ್ ಕಲ್ಯಾಣ್ ಅವರು ಸಮರ ಕಲೆಗಳ ಕ್ಷೇತ್ರದಲ್ಲಿ ಅಪರೂಪದ ಮತ್ತು ವಿಶೇಷ ಗೌರವವನ್ನು ಗಳಿಸಿದ್ದಾರೆ. ಅವರನ್ನು ಅಧಿಕೃತವಾಗಿ ಜಪಾನಿನ ಪ್ರಾಚೀನ ಕತ್ತಿವರಸೆ ಕಲೆಯಾದ ಕೆಂಜುಟ್ಸುಗೆ ಸೇರಿಸಿಕೊಳ್ಳಲಾಗಿದೆ, ಸಮರ ಕಲೆಗೆ ಯಾವುದೇ ವ್ಯಕ್ತಿಯ ದೀರ್ಘ ಕಾಲದ ಸಮರ್ಪಣೆ ಮತ್ತು ಶಿಸ್ತಿಗೆ ಈ ಮನ್ನಣೆ ನೀಡಲಾಗುತ್ತದೆ. ಪವನ್ ಕಲ್ಯಾಣ್ ಅವರಿಗೆ ಕೆಂಜುತ್ಸುಗೆ ಅಧಿಕೃತ ಪ್ರವೇಶ ನೀಡಲಾಗಿದೆ. ಇದನ್ನು ಅಪರೂಪದ ಗೌರವವೆಂದು ಪರಿಗಣಿಸಲಾಗುತ್ತದೆ, ಗೌರವಾನ್ವಿತ ಜಪಾನಿನ ಸಂಸ್ಥೆ ಆಗಿರುವ ಸೊಗೊ ಬುಡೊ ಕನ್ರಿ ಇಂದ, ಪವನ್ ಅವರಿಗೆ ಐದನೇ ಡಾನ್ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಾಗಿದೆ.
ಮತ್ತೊಂದು ವಿಶೇಷ ಸಾಧನೆ ಸಹ ಪವನ್ ಅವರ ಹೆಸರಿಗೆ ಸೇರಿಕೊಂಡಿದೆ. ಅವರು ಸೋಕೆ ಮುರಮಟ್ಸು ಸೆನ್ಸೈ ಅಡಿಯಲ್ಲಿ ಟಕೆಡಾ ಶಿಂಗೆನ್ ವಿಭಾಗಕ್ಕೆ ಸೇರ್ಪಡೆಗೊಂಡ ಮೊದಲ ತೆಲುಗು ವ್ಯಕ್ತಿ ಎನಿಸಿಕೊಂಡಿದ್ದಾರೆ ಪವನ್ ಕಲ್ಯಾಣ್. ಇದು ಜಪಾನ್‌ನ ಹೊರಗಿನ ವ್ಯಕ್ತಿಗೆ ಅತ್ಯಂತ ವಿರಳವಾಗಿ ನೀಡಲಾಗುವ ಗೌರವ ಆಗಿದೆ. ಗೋಲ್ಡನ್ ಡ್ರಾಗನ್ಸ್ ಸಂಸ್ಥೆಯಿಂದ ಪವನ್ ಕಲ್ಯಾಣ್ ಅವರಿಗೆ ಟೈಗರ್ ಆಫ್ ಮಾರ್ಷಲ್ ಆರ್ಟ್ಸ್ ಎಂಬ ಬಿರುದನ್ನು ಸಹ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ