ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?

Pawan Kalyan-Sreeleela: ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಪ್ರೀ ರಿಲೀಸ್ ವೇಳೆ ಮಾತನಾಡಿದ ಪವನ್ ಕಲ್ಯಾಣ್, ‘ಶ್ರೀಲೀಲಾ ಜೊತೆ ನನ್ನನ್ನು ತೋರಿಸಬೇಡಿ ಎಂದು ನಿರ್ದೇಶಕರಿಗೆ ಹೇಳಿ ಬಿಟ್ಟಿದ್ದೆ’ ಎಂದಿದ್ದಾರೆ. ಕಾರಣವೇನು ಗೊತ್ತೆ?

ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?
Pawan Sreeleela

Updated on: Mar 17, 2026 | 11:19 AM

ಪವನ್ ಕಲ್ಯಾಣ್ (Pawan Kalyan), ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಆಂಧ್ರ ಡಿಸಿಎಂ ಆಗಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪವನ್ ಕಲ್ಯಾಣ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ಇನ್ನೂ ಹಲವರು ಭಾಗಿ ಆಗಿದ್ದರು. ಈ ವೇಳೆ ಪವನ್ ಕಲ್ಯಾಣ್ ಮಾತನಾಡಿ ತಮಗೆ ಶ್ರೀಲೀಲಾ ಜೊತೆ ನನ್ನನ್ನು ಒಂದೇ ಫ್ರೇಮ್​​ನಲ್ಲಿ ತೋರಿಸಬೇಡಿ ಎಂದು ನಿರ್ದೇಶಕರ ಬಳಿ ಹೇಳಿಬಿಟ್ಟಿದ್ದೆ ಎಂದರು. ಅದಕ್ಕೆ ಕಾರಣವೇನು?

ಕಾರ್ಯಕ್ರಮ ಆರಂಭಕ್ಕೂ ಮುನ್ನ, ನಿರೂಪಕಿ ಸುಮಾ ಕನಕಾಲ ಅವರು ಪವನ್ ಅವರೊಟ್ಟಿಗೆ ಮಾತನಾಡುತ್ತಾ, ನೀವು ಸಖತ್ ಆಗಿ ಡ್ಯಾನ್ಸ್ ಮಾಡಿದ್ದೀರಿ, ಶ್ರೀಲೀಲಾ ಡ್ಯಾನ್ಸ್ ಸಹ ಟ್ರೈಲರ್​​ನಲ್ಲಿ ಅಲ್ಲಲ್ಲಿ ಕಾಣಿಸಿದೆ ಎಂದರು. ಅದಕ್ಕೆ ಪವನ್ ಕಲ್ಯಾಣ್, ‘ನಾನು ನಿರ್ದೇಶಕರ ಬಳಿ ಕಡ್ಡಾಯವಾಗಿ ಹೇಳಿಬಿಟ್ಟಿದ್ದೆ, ನನ್ನನ್ನು ಶ್ರೀಲೀಲಾ ಜೊತೆಗೆ ಡ್ಯಾನ್ಸ್ ಮಾಡಿಸಬೇಡಿ, ನಾನು ಒಬ್ಬನೇ ಡ್ಯಾನ್ಸ್ ಮಾಡಬೇಕು ಅಥವಾ ಶ್ರೀಲೀಲಾ ಒಬ್ಬರೇ ಡ್ಯಾನ್ಸ್ ಮಾಡಬೇಕು, ಹಾಡುಗಳಲ್ಲಿ ನನ್ನ ಶ್ರೀಲೀಲಾ ಜೊತೆ ತೋರಿಸಲೇಬೇಡಿ. ಏಕೆಂದರೆ ಶ್ರೀಲೀಲಾ ಅದ್ಭುತವಾದ ಡ್ಯಾನ್ಸರ್, ಡ್ಯಾನ್ಸ್​​ನಲ್ಲಿ ಅವರು ನನ್ನನ್ನು ಸುಲಭವಾಗಿ ಡಾಮಿನೇಟ್ ಮಾಡಿಬಿಡುತ್ತಾರೆ’ ಎಂದರು ಪವನ್ ಕಲ್ಯಾಣ್.

ಶ್ರೀಲೀಲಾ ಅದ್ಭುತವವಾದ ಡ್ಯಾನ್ಸರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಹಲವಾರು ಮಂದಿ ನಟರು ಈ ವಿಷಯವನ್ನು ಒಪ್ಪಿಕೊಂಡು, ಶ್ರೀಲೀಲಾರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಇದೀಗ ಪವನ್ ಕಲ್ಯಾಣ್ ಸಹ ತಮ್ಮದೇ ಶೈಲಿಯಲ್ಲಿ ಶ್ರೀಲೀಲಾ ಡ್ಯಾನ್ಸ್ ಅನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ:ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಲೀಲಾ, ಪವನ್ ಕಲ್ಯಾಣ್ ಅವರ ಗುಣಗಾನ ಮಾಡುತ್ತಾ ಅವರನ್ನು ‘ಅಜ್ಞಾತವಾಸಿ’ ಎಂದು ಕರೆದರು. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸುವಾಗ ನಾನು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದೆ, ಅಲ್ಲೆಲ್ಲ ಪವನ್ ಅವರು ಹೇಗೆ ಎಂದೆಲ್ಲ ಕೇಳುತ್ತಿದ್ದರು, ಆಗ ನಾನು, ‘ಪವನ್ ಕಲ್ಯಾಣ್ ಒಂದು ರೀತಿ ಅಜ್ಞಾತವಾಸಿ’ ಎಂದೆ. ಹಾಗೆಂದರೇನು ಎಂದು ಕೇಳಿದರು, ಚಾಟ್​​ಜಿಪಿಟಿ ಮಾಡಿಕೊಳ್ಳಿ ಎಂದು ಅವರಿಗೆ ಹೇಳಿದೆ. ನಿಮ್ಮಿಂದ ಸಾಕಷ್ಟು ಕಲಿತೆ, ಎಲ್ಲದರಲ್ಲೂ ಧನಾತ್ಮಕವಾಗಿ ಇರುವುದು ಕಲಿತೆ, ನಿಮ್ಮಿಂದ ಪರಿಸರ ಪ್ರೇಮ ಕಲಿತೆ. ಸಮಾಜದ ಬಗ್ಗೆ ಕಾಳಜಿ ಇರಬೇಕು ಎಂಬುದನ್ನು ಕಲಿತೆ. ನೀವು ಸಿನಿಮಾಗಳಲ್ಲಿ ನಟಿಸುವುದರಿಂದ ಸಿನಿಮಾ ರಂಗಕ್ಕೆ ಒಳ್ಳೆಯದಾಗುತ್ತದೆ. ನೀವು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರಬೇಕು’ ಎಂದರು ಶ್ರೀಲೀಲಾ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾನಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us