‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?

ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ. ರಣವೀರ್ ಸಿಂಗ್ ಅವರ 'ಧುರಂಧರ್ 2' ಪ್ರಪಂಚದಾದ್ಯಂತ ಅಬ್ಬರಿಸುತ್ತಿದ್ದು, ತೆಲುಗು ಪ್ರದೇಶಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಇದು 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಸವಾಲು ಒಡ್ಡಿದೆ. ರಾಜಕೀಯ ಬ್ಯುಸಿ ನಡುವೆಯೂ ಪವನ್ ಕಲ್ಯಾಣ್ ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.

‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?
ಪವನ್

Updated on: Mar 20, 2026 | 9:07 AM

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಇಡೀ ವಿಶ್ವಾದ್ಯಂತ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಗಳ ಎದುರು ಕನ್ನಡದಲ್ಲಿ ‘ಲವ್ ಮಾಕ್ಟೇಲ್ 3’ ಹಾಗೂ ತೆಲುಗಿನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ‘ಲವ್ ಮಾಕ್ಟೇಲ್ 3’ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಉಸ್ತಾದ್ ಭಗತ್ ಸಿಂಗ್ ಸಿನಿಮಾ ತೆಲುಗಿನಲ್ಲಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ವಿವರ ಸಿಕ್ಕಿದೆ.

ಪವನ್ ಕಲ್ಯಾಣ್ ಅವರು ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ, ಒಪ್ಪಿಕೊಂಡ ಸಿನಿಮಾಗಳನ್ನು ಮಾಡಿ ಮುಗಿಸೋ ಚಾಲೆಂಜ್ ಅವರಿಗೆ ಇತ್ತು. ಈ ಕಾರಣದಿಂದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಶೂಟ್​​ನ ಪೂರ್ಣಗೊಳಿಸಿದ್ದಾರೆ. ಈ ಚಿತ್ರ ಮೊದಲ ದಿನ 31 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರದ ಗ್ರಾಸ್ ಕಲೆಕ್ಷನ್ 37 ಕೋಟಿ ರೂಪಾಯಿ ಆಗಿದೆ ಎಂದು ವರದಿ ಆಗಿದೆ.

ಪವನ್ ಕಲ್ಯಾಣ್ ಅವರು ತಮ್ಮ ಆ್ಯಕ್ಷನ್ ಮೂಲಕ ಮೆಚ್ಚುಗೆ ಪಡೆದವರು. ಈಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪೊಲೀಸ್ ಪಾತ್ರದ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಈ ಸಿನಿಮಾ ಆದರೂ ಗೆಲ್ಲುತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಕೆಲವೇ ದಿನದಲ್ಲಿ ಇದಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ ಸಿನಿಮಾ ಹಿಂದಿ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿದೆ. ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಇದು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಸಣ್ಣ ಹೊಡೆತ ಕೊಡುತ್ತಿದೆ. ಆದರೆ, ಇದನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ‘ಉಸ್ತಾದ್ ಭಗತ್ ಸಿಂಗ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us