
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇಂದು (ಮಾರ್ಚ್ 19) ರಿಲೀಸ್ ಆಗಿದೆ. ಸಿನಿಮಾ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಇರೋದ್ರಿಂದ ಸದ್ಯದ ಮಟ್ಟಿಗೆ ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಸಿನಿಮಾ ನೋಡಿದ ಅನೇಕರು ಚಿತ್ರದ ವಿಮರ್ಶೆ ತಿಳಿಸುತ್ತಿದ್ದಾರೆ. ಕೆಲವರು ಸಿನಿಮಾನ ಇಷ್ಟಪಟ್ಟರೆ, ಇನ್ನೂ ಕೆಲವರು ಚಿತ್ರ ಹಳೆಯ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಅವರು ‘ಉತ್ಸಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಭಗತ್ ಸಿಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳಿನ ‘ಥೇರಿ’ ಚಿತ್ರದ ರಿಮೇಕ್. ಎಂದು ಹೇಳಲಾಗಿತ್ತು. ಆದರೆ, ಇದು ರಿಮೇಕ್ ಅಲ್ಲ ಎಂದು ನಿರ್ದೇಶಕ ಹರೀಶ್ ಶಂಕರ್ ಅವರು ಹೇಳಿದ್ದಾರೆ. ಚಿತ್ರ ನೋಡಿದ ಅನೇಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?
‘ಇದು ಔಟ್ಡೇಟೆಡ್ ಆಯ್ತು ಎಂದೆನಿಸಿದೆ. ವಿಂಟೇಜ್ ಸ್ವ್ಯಾಗ್ ಹಾಗೂ ಎನರ್ಜಿ ಇದೆ. ಥಮನ್ ಬಿಜಿಎಂ, ದೇವಿಶ್ರೀ ಪ್ರಸಾದ್ ಹಾಡು ಗಮನ ಸೆಳೆದಿದೆ’ ಎಂದು ಕೆಲವರು ಹೇಳಿದ್ದಾರೆ. ‘ ಇದು ಸಂಪೂರ್ಣವಾಗಿ ಹಳೆಯ ಕಮರ್ಷಿಯಲ್ ಸಿನಿಮಾ. ಇಂತಹ ಕಮರ್ಷಿಯಲ್ ಚಿತ್ರಕ್ಕೆ ಸಾಮಾನ್ಯ ಬರವಣಿಗೆಯ ಅಗತ್ಯವಿರುವುದಿಲ್ಲ. ಆದರೆ ಕನಿಷ್ಠ ಸ್ವಲ್ಪ ತಾಜಾತನವಾದರೂ ಬೇಕು. ಆರಂಭದಿಂದ ಕೊನೆಯವರೆಗೂ ಸಿನಿಮಾ ಹಳೆಯದಾಗಿದೆ ಎಂದು ಭಾಸವಾಗುತ್ತದೆ’ ಎಂದಿದ್ದಾರೆ ಕೆಲವರು.
ಪವನ್ ಕಲ್ಯಾಣ್ ಅವರು ಇತ್ತೀಚೆಗೆ ನಿರಂತರವಾಗಿ ಸೋಲು ಕಾಣುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಉಸ್ತಾದ್ ಭಗತ್ ಸಿಂಗ್ ಚಿತ್ರವೂ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.