ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಪ್ರಕರಣ; ಬಾಲಿವುಡ್ ನಟಿ ಅರೆಸ್ಟ್​

ನಟಿ ಪಾಯಲ್​ ವಾಗ್ವಾದಕ್ಕೆ ಇಳಿಯುವವರ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇವರಿಂದ ಈ ಅಪಾರ್ಟ್​ಮೆಂಟ್​ನ ಸಾಕಷ್ಟು ನಿವಾಸಿಗಳು ತೊಂದರೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಪ್ರಕರಣ; ಬಾಲಿವುಡ್ ನಟಿ ಅರೆಸ್ಟ್​
ಪಾಯಲ್

Updated on: Jun 25, 2021 | 5:18 PM

ಅನೇಕರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್​ ನಟಿ ಪಾಯಲ್​ ರೋಹಟ್ಗಿ ಅವರನ್ನು ಗುಜರಾತ್​ನ ಅಹ್ಮದಾಬಾದ್ ಪೊಲೀಸರು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ. ಈ ಮೊದಲು ಕೂಡ ಪಾಯಲ್​ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿದ್ದರು. ಈಗ ಅವರು ಜೈಲು ಮೆಟ್ಟಿಲು ಹತ್ತುವಂತಾಗಿದೆ.  

ವೃತ್ತಿಯಲ್ಲಿ ವೈದ್ಯರಾಗಿರುವ ಪರಾಗ್​ ಶಾ ಎಂಬುವವರು ಪೊಲೀಸ್​ ಠಾಣೆಯಲ್ಲಿ ಪಾಯಲ್​ ವಿರುದ್ಧ ದೂರು ದಾಖಲು ಮಾಡಿದ್ದರು. ಅಹ್ಮದಾಬಾದ್​ನ ಹೌಸಿಂಗ್​ ಸೊಸೈಟಿಯೊಂದರಲ್ಲಿ ಪರಾಗ್​ ಸದಸ್ಯರಾಗಿದ್ದಾರೆ. ಈ ಹೌಸಿಂಗ್​ ಸೊಸೈಟಿ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಪರಾಗ್​ ವಿರುದ್ಧ ಹಾಗೂ ಆ ಸೊಸೈಟಿಯ ಮುಖ್ಯಸ್ಥರ ವಿರುದ್ಧ ಪಾಯಲ್ ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ. ಅಲ್ಲದೆ, ಬೆದರಿಕೆ ಹಾಕಿದ್ದಾರೆ. ನಂತರ ಈ ಪೋಸ್ಟ್​ಗಳನ್ನು ಅವರು ಡಿಲೀಟ್​ ಮಾಡಿದ್ದಾರೆ.

ವರದಿಗಳ ಪ್ರಕಾರ, ನಟಿ ಪಾಯಲ್​ ವಾಗ್ವಾದಕ್ಕೆ ಇಳಿಯುವವರ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇವರಿಂದ ಈ ಅಪಾರ್ಟ್​ಮೆಂಟ್​ನ ಸಾಕಷ್ಟು ನಿವಾಸಿಗಳು ತೊಂದರೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ.

ನೆರೆ ಹೊರೆಯ ನಿವಾಸಿಗಳ ಜತೆ ಜಗಳವಾಡಿದ, ಬೆದರಿಕೆ ಹಾಕಿದ ಹಾಗೂ ಕೆಟ್ಟ ಶಬ್ದಗಳ ಬಳಕೆ ಆರೋಪದ ಮೇಲೆ ಈಗ ನಟಿಯನ್ನು ಬಂಧಿಸಲಾಗಿದೆ. ಅರೆಸ್ಟ್​ ಮಾಡಿದ ನಂತರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಇವರನ್ನು ಕೊವಿಡ್​ ಪರೀಕ್ಷೆಗೂ ಒಳಪಡಿಸಲಾಗುತ್ತಿದೆ.

ಪಾಯಲ್​ ಈ ರೀತಿ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ 2019ರಲ್ಲಿ ಪಾಯಲ್​ ವಿರುದ್ಧ ಪ್ರಕರಣ ದಾಖಲಾಗಿತ್ತು. ಟ್ವಿಟರ್​ನಲ್ಲಿ ಆ್ಯಕ್ಟಿವ್​ ಆಗಿದ್ದ ಇವರು, ಸಾಕಷ್ಟು ಬಾರಿ ಕೀಳಾಗಿ ಮಾತನಾಡಿದ್ದಿದೆ. ಇದರಿಂದ ಅವರ ಟ್ವಿಟರ್​ ಖಾತೆಯನ್ನು ಟ್ವಿಟರ್​ ಇಂಡಿಯಾ ಡಿಲೀಟ್​ ಮಾಡಿದೆ.

‘36 ಚೈನಾ ಟೌನ್’​, ‘ಅಗ್ಲಿ ಔರ್​ ಪಗ್ಲಿ’, ‘ಹೇ ಬೇಬಿ’ ಸೇರಿ ಸಾಕಷ್ಟು ಚಿತ್ರಗಳಲ್ಲಿ ಪಾಯಲ್​  ನಟಿಸಿದ್ದಾರೆ. 2008ರಲ್ಲಿ ಬಿಗ್​ ಬಾಸ್​ಗೂ ಕೂಡ ಬಂದಿದ್ದರು. ವ್ರೆಸ್ಲರ್​ ಸಂಗ್ರಾಮ್​ ಸಿಂಗ್​ ಜತೆ ಇವರು ಬಹುಕಾಲದಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಪಾರ್ಟಿಗಳೆಂದರೆ ಅಕ್ಷಯ್​ ಕುಮಾರ್​​ಗೆ ಅಲರ್ಜಿ? ಇದರ ಹಿಂದಿದೆ ಇಂಟರೆಸ್ಟಿಂಗ್​ ವಿಚಾರ

ಬಾಲಿವುಡ್​ನಲ್ಲಿ ಲಿಂಗ ತಾರತಮ್ಯ; ಸ್ಟಾರ್​ ನಟರಿಂದ ವಿದ್ಯಾ ಬಾಲನ್​ಗೆ ಈ ಒಂದು ಕಷ್ಟ ತಪ್ಪಿರಲಿಲ್ಲ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us