ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​

ಏಪ್ರಿಲ್​ ತಿಂಗಳಲ್ಲಿ ಗೌರಿ ಖಾನ್ ಹಾಗೂ ಅವರ ಮಗ ಆರ್ಯನ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ನ್ಯೂಯಾರ್ಕ್​ಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿತ್ತು.

ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​
ಶಾರುಖ್​ ಖಾನ್​ - ಶಾರುಖ್​ ಮಗ ಆರ್ಯನ್

Updated on: May 17, 2021 | 9:23 PM

 ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಕಾಲಿಡದೇ ಇದ್ದರೂ ಆಗಾಗ ಬೇರೆ ಬೇರೆ ವಿಚಾರಕ್ಕೆ ಸುದ್ದಿ ಆಗುತ್ತಿರುತ್ತಾರೆ. ಈಗ ಶಾರುಖ್​ ಖಾನ್​ ಮಗ ಆರ್ಯನ್​ ಸುದ್ದಿಯಲ್ಲಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅವರು ಪದವಿ ಸ್ವೀಕರಿಸಿದ್ದು, ಫೋಟೋ ವೈರಲ್​ ಆಗಿದೆ.

ಅಮೆರಿಕದಲ್ಲಿ ಕೊರೊನಾ ವೈರಸ್​ ನಿಯಂತ್ರಣಕ್ಕೆ ಬಂದಿಲ್ಲ. ಈ ಮದ್ಯೆಯೂ ಪದವಿ ಸಮಾರಂಭ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ದೂರ ದೂರ ಕೂರಿಸಿ ಪದವಿ ಪ್ರದಾನ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾರುಖ್​ ಮಗ ಆರ್ಯನ್​ ಕೂಡ ಇದ್ದರು. ಅವರು ಫೈನ್​ ಆರ್ಟ್ಸ್​ನಲ್ಲಿ​ ಪದವಿ ಪಡೆದಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ಎಲ್ಲರೂ ಆರ್ಯನ್​ಗೆ ಶುಭಾಶಯ ಕೋರಿದ್ದಾರೆ.

ಏಪ್ರಿಲ್​ ತಿಂಗಳಲ್ಲಿ ಗೌರಿ ಖಾನ್ ಹಾಗೂ ಅವರ ಮಗ ಆರ್ಯನ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ನ್ಯೂಯಾರ್ಕ್​ಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿತ್ತು. ದೇಶದಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿದೆ. ಹೀಗಾಗಿ, ಸುಹಾನಾ ಖಾನ್​ ನೋಡೋಕೆ ಗೌರಿ ಅಮೆರಿಕಕ್ಕೆ ತೆರಳಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಆರ್ಯನ್​ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ತೆರಳುವ ಉದ್ದೇಶದಿಂದ ಕಳೆದ ತಿಂಗಳು ಆರ್ಯನ್​ ಜತೆ ಗೌರಿ ಅಮೆರಿಕಕ್ಕೆ ತೆರಳಿದ್ದರು ಎನ್ನುವುದು ಈಗ ತಿಳಿದು ಬಂದಿದೆ. ಶಾರುಖ್​ ಮಗಳು ಸುಹಾನಾ ಕೂಡ ಅಮೆರಿಕದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ.

ಏಪ್ರಿಲ್​ನಲ್ಲಿ ಐಪಿಎಲ್ ನಡೆಯುತ್ತಿತ್ತು. ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಆಟ ನೋಡಲು ಶಾರುಖ್ ಮೈದಾನಕ್ಕೆ ತೆರಳುತ್ತಿದ್ದಾರೆ. ಹೀಗಾಗಿ, ಕುಟುಂಬದವರನ್ನು ಭೇಟಿ ಮಾಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರು ಅಮೆರಿಕಕ್ಕೆ ತೆರಳಿರಲಿಲ್ಲ.

ಇದನ್ನೂ ಓದಿ: ನಾರ್ವೆಯಲ್ಲಿರುವ ಪ್ರೀತಿ ಹುಡುಕಿ ಹೊರಡಲಿದ್ದಾರೆ ಶಾರುಖ್​ ಖಾನ್​; ಈ ಅಚ್ಚರಿಯ ಕಥೆ ಹಿಂದಿರೋದೇನು?

ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಶಾರುಖ್​ ಖಾನ್​ಗೂ ಇತ್ತು ಆಹ್ವಾನ

Published On - 9:22 pm, Mon, 17 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us