ಲಾಕ್​ಡೌನ್​ ಮಧ್ಯೆಯೂ ಟೈಗರ್-ದಿಶಾ ರೊಮ್ಯಾಂಟಿಕ್​ ರೈಡ್​; ಇವರನ್ನು ತಡೆದ ಪೊಲೀಸರು, ಮುಂದೇನಾಯ್ತು?

ಟೈಗರ್ ಶ್ರಾಫ್​ ಹಾಗೂ ದಿಶಾ ಇಬ್ಬರೂ ಅನೇಕ ವರ್ಷಗಳಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿಯಾದರೂ ಯಾರೂ ಒಪ್ಪಿಕೊಂಡಿಲ್ಲ.

ಲಾಕ್​ಡೌನ್​ ಮಧ್ಯೆಯೂ ಟೈಗರ್-ದಿಶಾ ರೊಮ್ಯಾಂಟಿಕ್​ ರೈಡ್​; ಇವರನ್ನು ತಡೆದ ಪೊಲೀಸರು, ಮುಂದೇನಾಯ್ತು?
ಟೈಗರ್ ಶ್ರಾಫ್​-ದಿಶಾ ಪಟಾಣಿ

Updated on: Jun 02, 2021 | 9:05 PM

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹೀಗಾಗಿ, ದೇಶದ ಬಹುತೇಕ ರಾಜ್ಯಗಳು ಲಾಕ್​ಡೌನ್​ ಘೋಷಣೆ ಮಾಡಿವೆ. ಅನೇಕ ರಾಜ್ಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಮಹಾರಾಷ್ಟ್ರ ಕೂಡ ಹೊರತಾಗಿಲ್ಲ. ಕೊವಿಡ್​ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಈ ಮಧ್ಯೆಯೂ ಟೈಗರ್​ ಶ್ರಾಫ್​ ಹಾಗೂ ದಿಶಾ ಪಟಾಣಿ ಮುಂಬೈ ಬಾಂದ್ರಾದಲ್ಲಿ ಜಾಲಿ ರೈಡ್​ ಹೋಗಿದ್ದಾರೆ. ಈ ವೇಳೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ.

ಟೈಗರ್ ಶ್ರಾಫ್​ ಹಾಗೂ ದಿಶಾ ಇಬ್ಬರೂ ಅನೇಕ ವರ್ಷಗಳಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆಯಾದರೂ ಯಾರೂ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ಮಾಲ್ಡೀವ್ಸ್​ಗೆ ತೆರಳಿ ಹಾಯಾಗಿ ಸಮಯ ಕಳೆದು ಬಂದಿದ್ದರು. ಸದ್ಯ, ಮುಂಬೈನಲ್ಲಿರುವ ಈ ಜೋಡಿ ಜಿಮ್​​ಗೆ ಒಟ್ಟಾಗಿ ತೆರಳುತ್ತಿದ್ದಾರೆ.

ಇತ್ತೀಚೆಗೆ ಹಾಗೆಯೇ ಆಗಿದೆ. ಇಬ್ಬರೂ ಜಿಮ್​ ಮುಗಿಸಿ ತಮ್ಮ ಐಷಾರಾಮಿ ಕಾರಲ್ಲಿ ಮುಂಬೈ ಸುತ್ತಾಟ ಮಾಡೋಕೆ ಮುಂದಾಗಿದ್ದಾರೆ. ದಿಶಾ ಕಾರಿನಲ್ಲಿ ಮುಂಭಾಗದಲ್ಲಿ ಕೂತಿದ್ದರೆ ಟೈಗರ್​ ಹಿಂಭಾಗದಲ್ಲಿ ಕೂತಿದ್ದರಂತೆ. ಬಾಂದ್ರಾದ ಬ್ಯಾಂಡ್​​ಸ್ಟ್ಯಾಂಡ್​ ಸಮೀಪ ಎರಡನೇ ರೌಂಡ್ ಹಾಕುವಾಗ ಪೊಲೀಸರು ಇವರನ್ನು ತಡೆದಿದ್ದಾರೆ. ನಂತರ ಪೊಲೀಸರು ಇವರ ಆಧಾರ್​ ಕಾರ್ಡ್​ ಪರಿಶೀಲಿಸಿ, ಇತರ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಬಿಟ್ಟುಕಳುಹಿಸಿದ್ದಾರೆ. ಅಲ್ಲದೆ, ಸುಖಾಸುಮ್ಮನೆ ಸುತ್ತಾಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ದಿಶಾ ಪಟಾಣಿ ‘ಏಕ್​ ವಿಲನ್​ ರಿಟರ್ನ್ಸ್’​ನಲ್ಲಿ ನಟಿಸುತ್ತಿದ್ದಾರೆ. ಟೈಗರ್​ ಶ್ರಾಫ್​ ‘ಹೀರೋಪಂತಿ 2’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳು ಸದ್ಯಕ್ಕೆ ನಿಂತಿವೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಶೂಟಿಂಗ್​ ಆರಂಭಿಸೋಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​

Published On - 8:32 pm, Wed, 2 June 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us