
ತಮ್ಮ ಮಾದಕತೆಯಿಂದಲೇ ಫೇಮಸ್ ಆಗಿದ್ದಾರೆ ನಟಿ ಪೂನಂ ಪಾಂಡೆ. ಅದರ ಜೊತೆಗೆ ಅವರು ಆಗಾಗ ಕಾಂಟ್ರವರ್ಸಿ ಮೂಲಕವೂ ಸುದ್ದಿ ಆಗುತ್ತಾರೆ. ಕಳೆದ ವರ್ಷ ಅವರಿಗೆ ಸ್ಯಾಮ್ ಬಾಂಬೆ ಎಂಬುವವರ ಜೊತೆ ಮದುವೆ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಮದುವೆ ಮುರಿದುಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಲಕ್ಷಾಂತರ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಪಡ್ಡೆ ಹುಡುಗರ ಸಂಖ್ಯೆಯೇ ಜಾಸ್ತಿ. ಅದಕ್ಕೆ ಕಾರಣ ಬೇರೆಯೇ ಇದೆ.
ಬೇರೆಲ್ಲ ಸೆಲೆಬ್ರಿಟಿಗಳು ತಮ್ಮ ಸಿನಿಮಾ, ವೆಬ್ ಸಿರೀಸ್ ಮುಂತಾದ ಕಂಟೆಂಟ್ಗಳನ್ನು ಪ್ರಚಾರ ಮಾಡಲು ಹೆಚ್ಚಾಗಿ ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಆದರೆ ಪೂನಂ ಪಾಂಡೆ ಕೈಯಲ್ಲಿ ಕೇಳಿಕೊಳ್ಳುವಂತಹ ಯಾವುದೇ ಆಫರ್ ಇಲ್ಲ. ಅದರ ಬದಲಾಗಿ ಅವರು ತಮ್ಮ ಮೈಮಾಟ ಪ್ರದರ್ಶಿಸಿ ಪಡ್ಡೆಗಳ ನಿದ್ದೆ ಕೆಡಿಸುತ್ತಾರೆ. ಅದರಿಂದ ಅವರಿಗೆ ಸಿಕ್ಕಾಪಟ್ಟೆ ಕಮಾಯಿ ಆಗಲಿದೆ ಎಂಬುದು ಅಚ್ಚರಿಯ ವಿಷಯ.
ಹೌದು, ಪೂನಂ ಪಾಂಡೆ ತಮ್ಮದೇ ಆ್ಯಪ್ ಹೊಂದಿದ್ದಾರೆ. ಅಲ್ಲಿ ಅನೇಕ ಹಸಿಬಿಸಿ ವಿಡಿಯೋಗಳನ್ನು, ಮಾದಕ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡು ಚಂದದಾರಾರಾದವರಿಗೆ ಆ ವಿಡಿಯೋ ಮತ್ತು ಫೋಟೋಗಳು ಲಭ್ಯ ಆಗುತ್ತವೆ. ಚಂದದಾರರು ಹೆಚ್ಚಿದಷ್ಟೂ ಪೂನಂ ಪಾಂಡೆಗೆ ಹಣ ಹೆಚ್ಚುತ್ತದೆ. ಅದೇ ರೀತಿ ಅವರು ಇನ್ನೊಂದು ಮಾರ್ಗವನ್ನೂ ಕಂಡುಕೊಂಡಿದ್ದಾರೆ. ‘ಓನ್ಲಿಫ್ಯಾನ್ಸ್’ ಎಂಬ ಜಾಲತಾಣದ ಮೂಲಕವೂ ಅವರು ಹಣ ಗಳಿಸಲು ಶುರುಮಾಡಿದ್ದಾರೆ.
ಇಂಗ್ಲೆಂಡ್ ಮೂಲದ ಓನ್ಲಿಫ್ಯಾನ್ಸ್ ಜಾಲತಾಣದಲ್ಲಿ ಪೂನಂ ಪಾಂಡೆ ಖಾತೆ ಹೊಂದಿದ್ದಾರೆ. ಅಲ್ಲಿ ಅವರು ಹಾಕುವ ವಿಡಿಯೋಗಳನ್ನು ನೋಡಬೇಕು ಎಂದರೆ ಜನರು ಹಣ ನೀಡಬೇಕು. ‘ಇಂದು ರಾತ್ರಿ ಓನ್ಲಿಫ್ಯಾನ್ಸ್ನಲ್ಲಿ ನನ್ನ ಪೇಜ್ ನೋಡುತ್ತಿರಿ. ಅಲ್ಲಿ ತುಂಬ ಆಸಕ್ತಿಕರವಾಗಿ ಏನನ್ನೋ ಪೋಸ್ಟ್ ಮಾಡುತ್ತೇನೆ’ ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಪಡ್ಡೆ ಹುಡುಗರನ್ನು ಓನ್ಲಿಫ್ಯಾನ್ಸ್ ಜಾಲತಾಣದತ್ತ ಸೆಳೆದುಕೊಳ್ಳಲು ಪೂನಂ ಪಾಂಡೆ ಸ್ಕೆಜ್ ಹಾಕಿದ್ದಾರೆ. ವಿಷಯ ಹೀಗಿದೆ ಎಂದಮೇಲೆ ಆ ಜಾಲತಾಣಕ್ಕೆ ಚಂದದಾರರಾಗುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ.
ಇದನ್ನೂ ಓದಿ:
ಗೋವಾದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ: ನಟಿ ಪೂನಂ ಪಾಂಡೆ ಅಂದರ್
ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ