ಪ್ರಭಾಸ್​ ಹಾಲಿವುಡ್​ಗೆ ಹೋದ್ರು ಅಂತ ಖುಷಿಪಟ್ಟ ಫ್ಯಾನ್ಸ್​; ಅದೆಲ್ಲ ಸಾಧ್ಯವಿಲ್ಲ ಎಂದ ಮಿಷನ್​ ಇಂಪಾಸಿಬಲ್ ​ ನಿರ್ದೇಶಕ

ಟಾಮ್ ಕ್ರೂಸ್ ನಟನೆಯ ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾದಲ್ಲಿ ಪ್ರಭಾಸ್​ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಇದಕ್ಕೆ ಸುಮ್ಮನಾಗದ ಅಭಿಮಾನಿಗಳು ಈ ವದಂತಿಗೆ ರೆಕ್ಕೆಪುಕ್ಕ ಎಲ್ಲವನ್ನೂ ಸೇರಿಸಿದ್ದರು.

ಪ್ರಭಾಸ್​ ಹಾಲಿವುಡ್​ಗೆ ಹೋದ್ರು ಅಂತ ಖುಷಿಪಟ್ಟ ಫ್ಯಾನ್ಸ್​; ಅದೆಲ್ಲ ಸಾಧ್ಯವಿಲ್ಲ ಎಂದ ಮಿಷನ್​ ಇಂಪಾಸಿಬಲ್ ​ ನಿರ್ದೇಶಕ
ಪ್ರಭಾಸ್

Updated on: May 26, 2021 | 5:20 PM

ನಟ ಪ್ರಭಾಸ್ ಟಾಲಿವುಡ್​ ಸಿನಿಮಾಗಳ ಜತೆಗೆ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಬಾಹುಬಲಿ ತೆರೆಕಂಡ ನಂತರದಲ್ಲಿ ಬೇರೆ ಭಾಷೆಗಳಲ್ಲೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಗ ಅವರು ಹಾಲಿವುಡ್​​ಗೆ ತೆರಳುತ್ತಿದ್ದಾರೆ ಎಂದು ಅಭಿಮಾನಿಗಳು ಸಂತಸಪಟ್ಟಿದ್ದರು. ಆದರೆ, ಇದೆಲ್ಲವೂ ಸುಳ್ಳು, ಅದೆಲ್ಲ ಸಾಧ್ಯವಿಲ್ಲ ಎಂದು ಖುದ್ದು ಹಾಲಿವುಡ್​ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

ಟಾಮ್ ಕ್ರೂಸ್ ನಟನೆಯ ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾದಲ್ಲಿ ಪ್ರಭಾಸ್​ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಇದಕ್ಕೆ ಸುಮ್ಮನಾಗದ ಅಭಿಮಾನಿಗಳು ಈ ವದಂತಿಗೆ ರೆಕ್ಕೆಪುಕ್ಕ ಎಲ್ಲವನ್ನೂ ಸೇರಿಸಿದ್ದರು. ಈ ಸಿನಿಮಾದ ನಿರ್ದೇಶಕ ಕ್ರಿಸ್ಟಫರ್ ಮೆಕ್ವಾರಿ, ಪ್ರಭಾಸ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಿನಿಮಾದಲ್ಲಿ ನಟಿಸೋಕೆ ಪ್ರಭಾಸ್​ ಒಕೆ ಎಂದಿದ್ದಾರೆ ಎಂಬಿತ್ಯಾದಿ ಸುದ್ದಿಗಳನ್ನು ಹರಿಬಿಟ್ಟಿದ್ದರು.

ಕೆಲವರು ಈ ಸುದ್ದಿಯನ್ನು ನಿಜವೆಂದು ನಂಬಿದ್ದರು. ಅಷ್ಟೇ ಅಲ್ಲ, ನಮ್ಮ ನೆಚ್ಚಿನ ನಟ ಹಾಲಿವುಡ್​ಗೆ ಕಾಲಿಡುತ್ತಿದ್ದಾರೆ ಎಂದು ಸಂಭ್ರಮಿಸಿದ್ದರು. ಈ ಬಗ್ಗೆ ಕ್ರಿಸ್ಟಫರ್​ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಸ್​ ಟ್ಯಾಲೆಂಟ್​ ಇರುವ ವ್ಯಕ್ತಿ. ಆದರೆ ನಾವೆಂದೂ ಭೇಟಿ ಆಗಿಲ್ಲ. ಧನ್ಯವಾದಗಳು ಇಂಟರ್​ನೆಟ್​ ಎಂದು ಬರೆದುಕೊಂಡಿದ್ದಾರೆ.

ಆದಿಪುರುಷ್​ ಚಿತ್ರ ರಾಮಾಯಣ ಆಧರಿಸಿ ಸಿದ್ಧಗೊಳ್ಳುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್​ ಕಾಣಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ತಂಡ ಪ್ರಭಾಸ್​ ಅವರ ರಾಮನ ಲುಕ್​ ರಿಲೀಸ್​ ಮಾಡಿತ್ತು. ​ರಾಧೆ ಶ್ಯಾಮ್ ಹಾಗೂ ಸಲಾರ್​ ಸಿನಿಮಾ ಕೆಲಸಗಳಲ್ಲೂ ಪ್ರಭಾಸ್ ಬ್ಯುಸಿ ಆಗಿದ್ದಾರೆ. ಈ ಎಲ್ಲಾ ಚಿತ್ರಗಳ ಕೆಲಸವನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ ಪ್ರಭಾಸ್​.

ಇದನ್ನೂ ಓದಿ: Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us