
ಟಾಲಿವುಡ್ನ ಖ್ಯಾತ ನಟ ಜ್ಯೂ.ಎನ್ಟಿಆರ್ (JR NTR Birthday) ಇಂದು (ಮೇ.20) ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜ್ಯೂ.ಎನ್ಟಿಆರ್ ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹತ್ತಿಸುವಂತೆ ಪ್ರಶಾಂತ್ ನೀಲ್ ಕಾಂಬಿನೇಷನ್ನ ಹೊಸ ಚಿತ್ರ ಘೋಷಣೆಯಾಗಿದೆ. ‘ಎನ್ಟಿಆರ್31’ ಎಂದು ಚಿತ್ರವನ್ನು ಗುರುತಿಸಲಾಗುತ್ತಿದ್ದು, ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಪುಷ್ಪ’ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ‘ಮೈತ್ರಿ ಮೂವಿ ಮೇಕರ್ಸ್’ ನೀಲ್-ತಾರಕ್ ಕಾಂಬಿನೇಷನ್ನ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಮೊದಲ ಪೋಸ್ಟರ್ನಲ್ಲಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿರುವ ಜ್ಯೂ.ಎನ್ಟಿಆರ್ ಕಣ್ಣಿನಲ್ಲೇ ಅಬ್ಬರಿಸಿದ್ದಾರೆ. ಪ್ರಶಾಂತ್ ನೀಲ್ ಟ್ರೇಡ್ ಮಾರ್ಕ್ ಮಾದರಿಯಲ್ಲಿ ಕಪ್ಪು-ಬಿಳುಪಿನ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದಕ್ಕೆ ‘‘ರಕ್ತದಲ್ಲಿ ತೋಯ್ದ ಮಣ್ಣು ನೆನಪಿನಲ್ಲಿ ಉಳಿಯುತ್ತದೆ. ಅವನ ಮಣ್ಣು, ಅವನ ಆಳ್ವಿಕೆ.. ಆದರೆ ರಕ್ತ ಮಾತ್ರ ಅವನದ್ದಲ್ಲ’’ ಎಂದು ಪವರ್ಫುಲ್ ಕ್ಯಾಪ್ಶನ್ ನೀಡಲಾಗಿದೆ. ಚಿತ್ರದ ಪೋಸ್ಟರ್ ಇಲ್ಲಿದೆ.
ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡ ಟ್ವೀಟ್:
ಇದನ್ನೂ ಓದಿ: Jr NTR Birthday: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್ಟಿಆರ್
ಜ್ಯೂ.ಎನ್ಟಿಆರ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ:
ನಿನ್ನೆಯಷ್ಟೇ ಕೊರಟಾಲ ಶಿವ ಹಾಗೂ ಜ್ಯೂ.ಎನ್ಟಿಆರ್ ಕಾಂಬಿನೇಷನ್ನಲ್ಲಿ ಹೊಸ ಚಿತ್ರ ಅನೌನ್ಸ್ ಆಗಿತ್ತು. ಅದನ್ನು ‘ಎನ್ಟಿಆರ್30’ ಹೆಸರಿನಿಂದ ಗುರುತಿಸಲಾಗುತ್ತಿದೆ. ಅದರ ಸಣ್ಣ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ಪಕ್ಕಾ ಆಕ್ಷನ್ ಚಿತ್ರದ ಸೂಚನೆ ನೀಡಿರುವ ಅದು ವೈರಲ್ ಆಗಿತ್ತು.
ಇದನ್ನೂ ಓದಿ: Jr NTR Birthday: ಜ್ಯೂ.ಎನ್ಟಿಆರ್ ಜನ್ಮದಿನ; ಈ ನಟನ ಬಗ್ಗೆ ನಿಮಗೆ ಗೊತ್ತಿರದ ಐದು ಅಪರೂಪದ ವಿಚಾರಗಳು
ಎರಡು ಹೊಸ ಚಿತ್ರಗಳು ಅನೌನ್ಸ್ ಆದ ಖುಷಿಯಲ್ಲಿ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯೂ ಸಿಕ್ಕಿದೆ. ಹೌದು. ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಆರ್ಆರ್ಆರ್’ ಇಂದಿನಿಂದ ಓಟಿಟಿಯಲ್ಲಿ ಬಿತ್ತರವಾಗುತ್ತಿದೆ. ಈ ಮೂಲಕ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ ಸಿಕ್ಕಿದಂತಾಗಿದ್ದು, ನೆಚ್ಚಿನ ನಟನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Fri, 20 May 22