ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ತಮ್ಮ ವಿಚಿತ್ರ ವಾದದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅನೇಕ ವಿಚಾರಗಳಲ್ಲಿ ಅವರು ಮನೆಯ ಸ್ಪರ್ಧಿಗಳ ಜತೆ ವಾದಕ್ಕೆ ಇಳಿದಿದ್ದಿದೆ. ಕೊನೆಯ ದಿನ ಪ್ರಶಾಂತ್ ಸಂಬರಗಿ ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರ ಕೇಳಿ ಮನೆಯವರು ಅಚ್ಚರಿಪಟ್ಟಿದ್ದಾರೆ.
|
ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಅಂತಿಮ ದಿನದ ಎಪಿಸೋಡ್ಗಳನ್ನು ಮೇ 11 ಹಾಗೂ 12ರಂದು ಪ್ರಸಾರ ಮಾಡಲಾಗಿದೆ. ಕೊನೆಯ ದಿನ ಎಲ್ಲಾ ಸ್ಪರ್ಧಿಗಳು ತುಂಬಾನೇ ಆಪ್ತವಾಗಿದ್ದರು. ಈ ವೇಳೆ ಪ್ರಶಾಂತ್ ಸಂಬರಗಿ ತಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಹೇಳಿಕೊಂಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಕುಟುಂಬದವರು ಎಂದು ಪ್ರಶಾಂತ್ ಹೇಳಿಕೊಂಡಿದ್ದಾರೆ.
‘ಮನೆಯ ಸ್ಪರ್ಧಿಗಳು ಊಟಕ್ಕೆ ಕೂತಿದ್ದರು. ಈ ವೇಳೆ ಪ್ರಶಾಂತ್ ಮಾತು ಆರಂಭಿಸಿದರು. ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು. ರಾಣಿ ಚೆನ್ನಮ್ಮ ನನ್ನ ಅಜ್ಜಿಯ ಅಜ್ಜಿ’ ಎಂದರು ಅವರು. ಈ ವೇಳೆ ಮನೆ ಮಂದಿ ಅನುಮಾನ ಹೊರ ಹಾಕಿದರು. ‘ನಾನು ಹೇಳುತ್ತಿರುವುದು ಸುಳ್ಳಲ್ಲ. ಇದನ್ನು ನಾನು ಹೊಸದಾಗಿ ಹೇಳುತ್ತಾ ಇಲ್ಲ. ಈ ಮೊದಲು ವಿಡಿಯೋ ಮಾಡಿ ಹೇಳಿದ್ದೆ. ಇದಕ್ಕೆ ದಾಖಲೆಗಳನ್ನು ನೀಡಿದ್ದೇವೆ. ನಮ್ಮ ಜಮೀನು ಕಿತ್ತೂರಿನಿಂದ ಇನಾಮು ಬಂದಿದೆ’ ಎಂದರು ಪ್ರಶಾಂತ್.
ಪ್ರತಿಬಾರಿ ಬಿಗ್ ಬಾಸ್ ಕೊನೆಯ ದಿನ ಗ್ರ್ಯಾಂಡ್ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಕೊನೆಯ ದಿನದ ಕಾರ್ಯಕ್ರಮವನ್ನು ಮಾಡಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕೊನೆಯ ಎಪಿಸೋಡ್ನಲ್ಲಿ ವಿನ್ನರ್ ಘೋಷಿಸಿದ ಸುದೀಪ್; ಅಚ್ಚರಿ ಮೂಡಿಸಿದ ಕಿಚ್ಚನ ಮಾತು