ತೆಲುಗು ರಾಜ್ಯಗಳಲ್ಲೂ ‘ಪ್ರೇಮದ ಊರಲಿ’ ಮ್ಯಾಜಿಕ್, ‘ಪ್ಯಾರಡೈಸ್’ ಅನ್ನೂ ಹಿಂದಿಕ್ಕಿದ ಕನ್ನಡ ಸಿನಿಮಾ

ಸೆಪ್ಟೆಂಬರ್ 25ರಂದು ರಿಲೀಸ್ ಆದ ‘ಪ್ರೇಮದ ಊರಲಿ’ ಸಿನಿಮಾ ರಿಲೀಸ್ ಆದ ಎರಡು ವಾರಗಳಲ್ಲಿ 25 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಸಾಗಿದೆ. ಸಿನಿಮಾ ಈಗಾಗಲೇ ತೆಲುಗಿಗೆ ಡಬ್ ಆಗಿ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲೂ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ತೆಲುಗಿನದ್ದೇ ಆದ ಹಾಗೂ ‘ಪ್ರೇಮದ ಊರಲಿ’ ಸಿನಿಮಾದ ಜೊತೆಗೇ ರಿಲೀಸ್ ಆದ ‘ದಿ ಪ್ಯಾರಡೈಸ್’ ಸಿನಿಮಾ ಅನ್ನೂ ಸಹ ಟಿಕೆಟ್ ಮಾರಾಟದಲ್ಲಿ ಹಿಂದಿಕ್ಕಿದೆ.

ತೆಲುಗು ರಾಜ್ಯಗಳಲ್ಲೂ ‘ಪ್ರೇಮದ ಊರಲಿ’ ಮ್ಯಾಜಿಕ್, ‘ಪ್ಯಾರಡೈಸ್’ ಅನ್ನೂ ಹಿಂದಿಕ್ಕಿದ ಕನ್ನಡ ಸಿನಿಮಾ
Premada Oorali The Paradise

Updated on: Oct 07, 2026 | 12:35 PM

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಯಶಸ್ಸು
  • ತೆಲುಗಿನ ‘ದಿ ಪ್ಯಾರಡೈಸ್’ ಅನ್ನು ಹಿಂದಿಕ್ಕಿದೆ
  • ಸಿನಿಮಾದ ಟಿಕೆಟ್​​ ಭರ್ಜರಿ ಮಾರಾಟ

ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಮಾಡುತ್ತಿದೆ. ಸಣ್ಣ ಬಜೆಟ್​ನ ಈ ಸಿನಿಮಾ ದೊಡ್ಡ ಬಜೆಟ್, ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾಗಳಿಗೆ ಠಕ್ಕರ್ ನೀಡುವುದು ಮಾತ್ರವಲ್ಲದೆ, ಅವುಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 25ರಂದು ರಿಲೀಸ್ ಆದ ಈ ಸಿನಿಮಾ ರಿಲೀಸ್ ಆದ ಎರಡು ವಾರಗಳಲ್ಲಿ 25 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಸಾಗಿದೆ. ಸಿನಿಮಾ ಈಗಾಗಲೇ ತೆಲುಗಿಗೆ ಡಬ್ ಆಗಿ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲೂ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ತೆಲುಗಿನದ್ದೇ ಆದ ಹಾಗೂ ‘ಪ್ರೇಮದ ಊರಲಿ’ ಸಿನಿಮಾದ ಜೊತೆಗೇ ರಿಲೀಸ್ ಆದ ‘ದಿ ಪ್ಯಾರಡೈಸ್’ ಸಿನಿಮಾ ಅನ್ನೂ ಸಹ ಟಿಕೆಟ್ ಮಾರಾಟದಲ್ಲಿ ಹಿಂದಿಕ್ಕಿದೆ.

24 ಗಂಟೆಯಲ್ಲಿ ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬುಕ್​​ ಮೈ ಶೋನಲ್ಲಿ 1.15 ಲಕ್ಷಕ್ಕೂ ಹೆಚ್ಚು ಟಿಕೆಟ್​​ಗಳು ಬುಕ್ ಆಗಿದ್ದರೆ ಅದೇ ನಾನಿಯ ಭಾರಿ ಬಜೆಟ್ ಸಿನಿಮಾ ‘ದಿ ಪ್ಯಾರಡೈಸ್​’ಗೆ ಕೇವಲ ಏಳು ಸಾವಿರ ಟಿಕೆಟ್​​ಗಳು ಬುಕ್ ಆಗಿವೆ. ‘ದಿ ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ಕ್ಕೆ ರಿಲೀಸ್ ಆಗಿದ್ದರೆ, ‘ಪ್ರೇಮದ ಊರಲಿ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ತೆರೆಗೆ ಬಂದಿತ್ತು. ತೆಲುಗು ರಾಜ್ಯಗಳಲ್ಲಿಯೂ ಸಹ ‘ಪ್ರೇಮದ ಊರಲಿ’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ತೆಲುಗು ಪ್ರೇಕ್ಷಕರನ್ನು ಸೆಳೆಯುತ್ತಿದೆ. ತೆಲುಗು ರಾಜ್ಯಗಳಲ್ಲಿ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದು, ಹಲವು ಸೋಷಿಯಲ್ ಮೀಡಿಯಾ ಇನ್​​ಫ್ಲ್ಯುಯೆನ್ಸರ್​​ಗಳು ಸಿನಿಮಾ ಅನ್ನು ಕೊಂಡಾಡುತ್ತಿದ್ದಾರೆ.

‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ಸ್ಟಾರ್ ನಟ ನಾನಿ ನಾಯಕ. ಖಯಾದು ಲೋಹರ್ ನಾಯಕಿ. ಭಾರಿ ಬಜೆಟ್​​ನ ಈ ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಮೋಹನ್​​ಬಾಬು ಮತ್ತು ಬಾಲಿವುಡ್ ನಟ ರಾಘವ್ ಜುಯೆಲ್ ಸಹ ಇದ್ದಾರೆ. ಭರ್ಜರಿ ಆಕ್ಷನ್ ಹೊಂದಿರುವ ಈ ಸಿನಿಮಾ ಮೊದಲೆರಡು ದಿನಗಳಲ್ಲಿಯೇ ನೂರು ಕೋಟಿ ಗಳಿಕೆ ಮಾಡಿತ್ತು. ಆದರೆ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಎರಡನೇ ವಾರಕ್ಕೆ ಸಿನಿಮಾದ ಟಿಕೆಟ್ ಸೇಲ್​​ ತೀವ್ರವಾಗಿ ಕಡಿಮೆ ಆಗಿದೆ. ಆದರೆ ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬಹಳ ನಿಧಾನದ ಆರಂಭ ದೊರಕಿತ್ತು. ವಿತರಕರು, ಪ್ರದರ್ಶಕರು ಸಿನಿಮಾದ ಬಗ್ಗೆ ಆಸಕ್ತಿಯನ್ನೇ ತೋರಿರಲಿಲ್ಲ. ಆದರೆ ಸಿನಿಮಾ ಬಿಡುಗಡೆ ಆದ ಮೂರನೇ ದಿನದಿಂದ ಸಿನಿಮಾದ ಬಗ್ಗೆ ಜನರೇ ಪ್ರಚಾರ ಮಾಡಲು ಆರಂಭಿಸಿದರು. ಸಿನಿಮಾಕ್ಕೆ ಬೇಡಿಕೆ ಹೆಚ್ಚಾಯ್ತು.

ಇದನ್ನೂ ಓದಿ:ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ ‘ಪ್ರೇಮದ ಊರಲಿ’; ಮಂಗಳವಾರದ ಗಳಿಕೆ ಇಷ್ಟೊಂದಾ?

‘ಪ್ರೇಮದ ಊರಲಿ’ ಸಿನಿಮಾನಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದ ನಾಯಕನಾಗಿ ಶ್ರೀರಾಮ್, ನಾಯಕಿಯರಾಗಿ ತಪಸ್ವಿನಿ ಪೂಣಚ್ಚ, ರಮಿಕಾ ಶಿವು ನಾಯಕಿಯರು. ಮನೋಜ್ ಕುಮಾರ್ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾ ನಿರ್ಮಾಣ ಮಾಡಿರುವುದು ಮಮತಾ ದೇವೇಂದ್ರ. ಸಂಗೀತ ನೀಡಿರುವುದು ಸನದ್ ಗೌತಮ್, ರಜಕಾಂತ್ ಎಸ್​​ಕೆ ಕ್ಯಾಮೆರಾ ಮತ್ತು ಹರ್ಷಿತ್ ಪ್ರಭು ಸಂಕಲನ ಇದೆ. ಈ ಸಿನಿಮಾ ಇದೀಗ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದ್ದು ಮುಂದಿನ ದಿನಗಳಲ್ಲಿ ಭೇರೆ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us