AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್‌ನಲ್ಲಿ ಹೊಸ ಕಾಂಬಿನೇಷನ್ ಧಮಾಕ; ಮೊದಲ ಬಾರಿಗೆ ಜೊತೆಯಾಗಲಿದ್ದಾರೆ ಪ್ರಿಯಾಂಕಾ-ಸೈಫ್

ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲು ಸಜ್ಜಾಗಿದ್ದಾರೆ. ರಿತೇಶ್ ಬಟ್ರಾ ನಿರ್ದೇಶನದ ಅಂತಾರಾಷ್ಟ್ರೀಯ ಸಿನಿಮಾದಲ್ಲಿ ಈ ಜೋಡಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ಈ ಹೊಸ ಕಾಂಬಿನೇಷನ್ ಭಾರಿ ಕುತೂಹಲ ಮೂಡಿಸಿದೆ.

ಬಾಲಿವುಡ್‌ನಲ್ಲಿ ಹೊಸ ಕಾಂಬಿನೇಷನ್ ಧಮಾಕ; ಮೊದಲ ಬಾರಿಗೆ ಜೊತೆಯಾಗಲಿದ್ದಾರೆ ಪ್ರಿಯಾಂಕಾ-ಸೈಫ್
ಪ್ರಿಯಾಂಕಾ-ಸೈಫ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 01, 2026 | 11:03 AM

Share

ಬಾಲಿವುಡ್‌ ಅಭಿಮಾನಿಗಳಿಗೆ ಶೀಘ್ರದಲ್ಲೇ ಹೊಸ ಮತ್ತು ವಿಭಿನ್ನ ಆನ್‌ಸ್ಕ್ರೀನ್‌ ಜೋಡಿಯೊಂದು ಕಣ್ಣುತುಂಬಿಕೊಳ್ಳುವ ಅವಕಾಶ ಸಿಗಲಿದೆ. ಪ್ರಸಿದ್ಧ ನಟ ಸೈಫ್ ಅಲಿ ಖಾನ್ ಹಾಗೂ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲು ಸಜ್ಜಾಗಿದ್ದಾರೆ. ಖ್ಯಾತ ನಿರ್ದೇಶಕ ರಿತೇಶ್ ಬಟ್ರಾ ನಿರ್ದೇಶಿಸಲಿರುವ ಮುಂಬರುವ ಅಂತಾರಾಷ್ಟ್ರೀಯ ಸಿನಿಮಾದಲ್ಲಿ ಈ ಇಬ್ಬರು ದಿಗ್ಗಜ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇಬ್ಬರೂ ನಟರು ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸಿನಿಮಾದಲ್ಲಿಯೂ ಮುಖ್ಯ ಪಾತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿಲ್ಲ. ಹೀಗಾಗಿ ಈ ಹೊಸ ಜೋಡಿಯ ಕಾಂಬಿನೇಷನ್ ಸಿನಿಮಾ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾ ಮೂಲಕ ಇಬ್ಬರೂ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದ್ದಾರೆ.

‘ದಿ ಲಂಚ್‌‌ಬಾಕ್ಸ್’ ಮತ್ತು ‘ಫೋಟೋಗ್ರಾಫ್’ ನಂತಹ ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳನ್ನು ನೀಡಿದ ರಿತೇಶ್ ಬಟ್ರಾ ಈ ಯೋಜನೆಯನ್ನು ರೂಪಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಈಗಾಗಲೇ ‘ಸಿಟಾಡೆಲ್’ ಮತ್ತು ‘ಹೆಡ್ಸ್ ಆಫ್ ಸ್ಟೇಟ್’ ನಂತಹ ಹಾಲಿವುಡ್ ಯೋಜನೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಹೊಸ ಯೋಜನೆಯು ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಮತ್ತೊಂದು ಮೈಲಿಗಲ್ಲಾಗಲಿದೆ.

ಮತ್ತೊಂದೆಡೆ ಸೈಫ್ ಅಲಿ ಖಾನ್ ಕಮರ್ಷಿಯಲ್ ಸಿನಿಮಾಗಳು ಹಾಗೂ ವಿಷಯಾಧಾರಿತ ಚಿತ್ರಗಳ ನಡುವೆ ಸಮತೋಲನ ಕಾಯ್ದುಕೊಂಡು ನಟಿಸುತ್ತಿದ್ದಾರೆ. ಅವರು ಕೊನೆಯದಾಗಿ ಪ್ರಿಯದರ್ಶನ್ ನಿರ್ದೇಶನದ ‘ಹೈವಾನ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಮಟ್ಟದ ಯಶಸ್ಸು ಕಾಣಲು ವಿಫಲವಾಗಿತ್ತು.

ಇದನ್ನೂ ಓದಿ: ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ವಿಶೇಷ ನಮನ; ಬಯೋಗ್ರಫಿ ‘ಎಂಪ್ರೆಸ್’ ಮೊದಲ ಲುಕ್ ರಿಲೀಸ್

ಪ್ರಸ್ತುತ ಪ್ರಿಯಾಂಕಾ ಚೋಪ್ರಾ ತಮ್ಮ ಭಾರತೀಯ ಕಂಬ್ಯಾಕ್ ಚಿತ್ರವಾದ ‘ವಾರಾಣಸಿ’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಿತೇಶ್ ಬಟ್ರಾ ಅವರ ಅಂತಾರಾಷ್ಟ್ರೀಯ ಸಿನಿಮಾದಲ್ಲಿ ಸೈಫ್ ಮತ್ತು ಪ್ರಿಯಾಂಕಾ ಎಂಥಹಾ ಕಥಾವಸ್ತುವಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More