‘ವಾರಣಾಸಿ’: ಇನ್ನೂ ಎಷ್ಟು ತಿಂಗಳ ಚಿತ್ರೀಕರಣ ಬಾಕಿ ಇದೆ?

Priyanka Chopra: ಇತ್ತೀಚೆಗೆ ಅಮೆರಿಕದ ಖ್ಯಾತ ಜಿಮ್ಮಿ ಫಾಲನ್ ಟಾಕ್ ಶೋನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ‘ದಿ ಬ್ಲಫ್’ ಸಿನಿಮಾದ ಜೊತೆಗೆ ‘ವಾರಣಾಸಿ’ ಸಿನಿಮಾದ ಬಗೆಯೂ ಕೆಲವು ಕುತೂಹಲಕಾರಿ ಅಪ್‌ಡೇಟ್‌ಗಳನ್ನು ಹಂಚಿಕೊಂಡರು. ವಿಶೇಷವಾಗಿ ‘ವಾರಣಾಸಿ’ ಸಿನಿಮಾದ ಶೂಟಿಂಗ್ ಇನ್ನೆಷ್ಟು ದಿನ ಉಳಿದಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ವಾರಣಾಸಿ’: ಇನ್ನೂ ಎಷ್ಟು ತಿಂಗಳ ಚಿತ್ರೀಕರಣ ಬಾಕಿ ಇದೆ?
Priyanka Chopra Varanasi

Updated on: Feb 28, 2026 | 7:04 PM

ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಚಿತ್ರರಂಗದಿಂದ ದೂರವೇ ಉಳಿದಿದ್ದ ಪ್ರಿಯಾಂಕ ಸುಮಾರು 7 ವರ್ಷಗಳ ಸುದೀರ್ಘ ಬಿಡುವಿನ ನಂತರ ಭಾರತೀಯ ಚಿತ್ರರಂಗಕ್ಕೆ ಭರ್ಜರಿಯಾಗಿ ಮರಳುತ್ತಿದ್ದಾರೆ. ಅದು ಕೂಡ ಪ್ರಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಆಕ್ಷನ್-ಅಡ್ವೆಂಚರ್ ಚಿತ್ರ ‘ವಾರಣಾಸಿ’ ಮೂಲಕ ಎನ್ನುವುದು ವಿಶೇಷ.

ಇತ್ತೀಚೆಗೆ ಅಮೆರಿಕದ ಖ್ಯಾತ ಜಿಮ್ಮಿ ಫಾಲನ್ ಟಾಕ್ ಶೋನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ‘ದಿ ಬ್ಲಫ್’ ಸಿನಿಮಾದ ಜೊತೆಗೆ ‘ವಾರಣಾಸಿ’ ಸಿನಿಮಾದ ಬಗೆಯೂ ಕೆಲವು ಕುತೂಹಲಕಾರಿ ಅಪ್‌ಡೇಟ್‌ಗಳನ್ನು ಹಂಚಿಕೊಂಡರು. ವಿಶೇಷವಾಗಿ ‘ವಾರಣಾಸಿ’ ಸಿನಿಮಾದ ಶೂಟಿಂಗ್ ಇನ್ನೆಷ್ಟು ದಿನ ಉಳಿದಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಶೋನಲ್ಲಿ ‘ವಾರಣಾಸಿ’ ಸಿನಿಮಾ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ‘ನಾವು ಕಳೆದ 14 ತಿಂಗಳುಗಳಿಂದ ಈ ಚಿತ್ರದ ಶೂಟಿಂಗ್ ಮಾಡುತ್ತಿದ್ದೇವೆ. ಇನ್ನೂ ಸುಮಾರು 6 ತಿಂಗಳ ಚಿತ್ರೀಕರಣ ಬಾಕಿ ಇದೆ. ಅಂದರೆ ಒಟ್ಟಾರೆಯಾಗಿ 20 ತಿಂಗಳುಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ’ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಅದೇ ಶೋನಲ್ಲಿ ರಾಜಮೌಳಿ ಅವರ ಪ್ರತಿಭೆಯನ್ನು ಕೊಂಡಾಡಿದ ಪ್ರಿಯಾಂಕಾ, ‘ಅವರು ಭಾರತದ ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಅವರ ಜೊತೆ ಕೆಲಸ ಮಾಡುವುದು ಒಂದು ಸಾಹಸಮಯ ಅನುಭವದಂತಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಾಜಮೌಳಿಯ ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ನಟನೆ?

‘ವಾರಣಾಸಿ’ ಸಿನಿಮಾದ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ರಾಜಮೌಳಿ ಅವರು ಜಾರ್ಜಿಯಾ ದೇಶಕ್ಕೆ ತೆರಳಿದ್ದಾರೆ. ಅಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಅವರೊಂದಿಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಭಾರತದ ಈವರೆಗಿನ ಭಾರೀ ಬಜೆಟ್‌ ಪ್ಯಾನ್-ಇಂಡಿಯಾ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾವು ಏಪ್ರಿಲ್ 7, 2027 ರಂದು ತೆರೆಕಾಣುವ ಸಾಧ್ಯತೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us