Rashmika Mandanna: ಹೊಸ ಸಿನಿಮಾ ಒಪ್ಪಿಕೊಂಡ ನಟಿ ರಶ್ಮಿಕಾ ಮಂದಣ್ಣ; ಆದರೆ ಈ ಬಾರಿ ಒಂದು ಟ್ವಿಸ್ಟ್​

ಇಡೀ ಸಿನಿಮಾದ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುವುದು ನಿಜಕ್ಕೂ ಚಾಲೆಂಜಿಂಗ್​. ಈ ಸವಾಲನ್ನು ರಶ್ಮಿಕಾ ಮಂದಣ್ಣ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Rashmika Mandanna: ಹೊಸ ಸಿನಿಮಾ ಒಪ್ಪಿಕೊಂಡ ನಟಿ ರಶ್ಮಿಕಾ ಮಂದಣ್ಣ; ಆದರೆ ಈ ಬಾರಿ ಒಂದು ಟ್ವಿಸ್ಟ್​
ರಶ್ಮಿಕಾ ಮಂದಣ್ಣ

Updated on: Apr 03, 2023 | 8:30 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಸೂಪರ್​ ಸ್ಟಾರ್​ಗಳ ಜೊತೆ ಸಿನಿಮಾ ಮಾಡುತ್ತಾ ಅವರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಾರೆ. ಕನ್ನಡದಿಂದ ಶುರುವಾದ ಅವರ ಸಿನಿಮಾ ಜರ್ನಿ ಈಗ ಬಾಲಿವುಡ್​ನಲ್ಲೂ ರಾರಾಜಿಸುತ್ತಿದೆ. ಹೊಸ ಹೊಸ ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಸಹಿ ಮಾಡುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು ಚಿತ್ರರಂಗದಲ್ಲಿ ಅವರದ್ದೇ ಹವಾ. ಈಗ ಅವರು ಹೊಸದೊಂದು ಸಿನಿಮಾ (Rashmika Mandanna New Movie) ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ನಿರ್ಮಾಣ ಸಂಸ್ಥೆಯವರೇ ಈ ಸಿನಿಮಾವನ್ನು ಅನೌನ್ಸ್​ ಮಾಡಲಿದ್ದಾರೆ. ಟ್ವಿಸ್ಟ್​ ಏನೆಂದರೆ, ಈ ಬಾರಿ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿರುವುದು ಮಹಿಳಾ ಪ್ರಧಾನ ಸಿನಿಮಾ!

ರಶ್ಮಿಕಾ ಮಂದಣ್ಣ ಅವರು ಈವರೆಗೂ 18 ಸಿನಿಮಾಗಳನ್ನು ಮಾಡಿದ್ದಾರೆ. ಆ ಪೈಕಿ ಬಹುತೇಕ ಸಿನಿಮಾಗಳಲ್ಲಿ ಅವರು ಗ್ಲಾಮರ್​ ಗೊಂಬೆಯಾಗಿ ಮಿಂಚಿದ್ದೇ ಹೆಚ್ಚು. ಮಹಿಳಾ ಪ್ರಧಾನ ಕಥೆ ಇರುವಂಥ ಸಿನಿಮಾಗಳಿಂದ ಅವರು ಕೊಂಚ ಅಂತರ ಕಾಯ್ದುಕೊಂಡಿದ್ದರು. ‘ಡಿಯರ್​ ಕಾಮ್ರೇಡ್​’, ‘ಗುಡ್​ ಬೈ’ ಚಿತ್ರಗಳಲ್ಲಿ ಸಣ್ಣ ಪ್ರಯತ್ನ ಆಗಿತ್ತು. ಆದರೂ ಕೂಡ ಸಂಪೂರ್ಣ ಮಹಿಳಾ ಪ್ರಧಾನ ಕಥೆಯನ್ನು ರಶ್ಮಿಕಾ ಮಂದಣ್ಣ ಅವರು ಈವರೆಗೂ ಒಪ್ಪಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ಅಂಥದ್ದೊಂದು ಸ್ಕ್ರಿಪ್ಟ್​ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹಿಳಾ ಪ್ರಧಾನ ಕಥೆ ಇರುವ ಸಿನಿಮಾ ಮಾಡಬೇಕು ಎಂಬುದು ಬಹುತೇಕ ಎಲ್ಲ ಹೀರೋಯಿನ್​ಗಳ ಆಸೆ ಆಗಿರುತ್ತದೆ. ಆದರೆ ಅದಕ್ಕೆ ಸಮಯ ಕೂಡಿಬರಬೇಕು. ಸೂಕ್ತವಾದ ತಂಡ ಸಿಗಬೇಕು. ಈ ವಿಚಾರದಲ್ಲಿ ರಶ್ಮಿಕಾ ಅವರಿಗೆ ಕಾಲ ಕೂಡಿಬಂದಂತಿದೆ. ಸದ್ಯದಲ್ಲೇ ಅವರ ಕಡೆಯಿಂದ ಈ ಕುರಿತು ಅಧಿಕೃತ ಮಾಹಿತಿ ಸಿಗಲಿದೆ.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಇದನ್ನೂ ಓದಿ: ವಿಜಯ್ ದೇವರಕೊಂಡ ಅಲ್ಲ, ತೆಲುಗಿನ ಈ ನಟನ ಜೊತೆ ರಶ್ಮಿಕಾ ಮಂದಣ್ಣ ಸುತ್ತಾಟ

ಮಹೇಶ್​ ಬಾಬು, ದಳಪತಿ ವಿಜಯ್​, ಸಿದ್ದಾರ್ಥ್​ ಮಲ್ಹೋತ್ರಾ, ಅಲ್ಲು ಅರ್ಜುನ್​ ಮುಂತಾದ ಸ್ಟಾರ್​ ಹೀರೋಗಳ ಜೊತೆ ನಟಿಸಿ ರಶ್ಮಿಕಾ ಮಂದಣ್ಣ ಸೈ ಎನಿಸಿಕೊಂಡಿದ್ದಾರೆ. ಅವರು ನಟಿಸಿದ ಬಹುತೇಕ ಸಿನಿಮಾಗಳು ಗೆದ್ದಿವೆ. ಆದರೆ ಮಹಿಳಾ ಪ್ರಧಾನ ಕಥೆ ಆಯ್ಕೆ ಮಾಡಿಕೊಂಡು, ಇಡೀ ಸಿನಿಮಾದ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುವುದು ನಿಜಕ್ಕೂ ಚಾಲೆಂಜಿಂಗ್​. ಈ ಸವಾಲನ್ನು ರಶ್ಮಿಕಾ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಇನ್ನು, ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಅನಿಮಲ್​’, ‘ಪುಷ್ಪ 2’ ಮುಂತಾದ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Mon, 3 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us