
ಬಾಲಿವುಡ್‌ನ ‘ಗ್ರೀಕ್ ಗಾಡ್’ ಎಂದೇ ಕರೆಯಲ್ಪಡುವ ನಟ ಹೃತಿಕ್ ರೋಷನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರ ನಿಭಾಯಿಸಿದ್ದಾರೆ. ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡು ಭರ್ಜರಿ ಸದ್ದು ಮಾಡುತ್ತಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲಿ 600 ಕೋಟಿ ರೂಪಾಯಿ ಕ್ಲಬ್‌ನತ್ತ ದಾಪುಗಾಲಿಡುತ್ತಿರುವ ಈ ಚಿತ್ರದಲ್ಲಿ ಹೃತಿಕ್ ನಟಿಸಲು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ವರದಿಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು.
ಆದರೆ ಈಗ ಈ ಸುದ್ದಿಯ ಕುರಿತು ದಿಢೀರ್ ಯು-ಟರ್ನ್ ಪಡೆದುಕೊಂಡಿರುವ ಹೊಸ ವರದಿಗಳು ಹೊರಬಂದಿವೆ. ಹೊಸ ಮೂಲಗಳ ಪ್ರಕಾರ, ಹೃತಿಕ್ ರೋಷನ್ ಯಾವುದೇ ಸಂಭಾವನೆ ಪಡೆಯದೇ ಸಂಪೂರ್ಣ ಉಚಿತವಾಗಿ ಈ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ಮೇಲಿನ ಗೌರವ ಮತ್ತು ಕೃತಜ್ಞತೆಯ ಕಾರಣದಿಂದ ಅವರು ಒಂದು ರೂಪಾಯಿಯೂ ಹಣ ತೆಗೆದುಕೊಳ್ಳದೆ ಈ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಈಗ ವೈರಲ್ ಆಗಿದೆ.
ಹೃತಿಕ್ ರೋಷನ್ ಅವರು ತಮ್ಮ ಸಾಮಾನ್ಯ ಸಂಭಾವನೆಯಂತೆ 25 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಆರಂಭಿಕ ವರದಿಗಳು ಹೇಳಿದ್ದವು. ಆದರೆ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ ಅಷ್ಟು ದೊಡ್ಡ ಮೊತ್ತವನ್ನು ನೀಡಲು ಹಿಂಜರಿಯಿತು ಎನ್ನಲಾಗಿದೆ. ಈ ವಿಷಯದಲ್ಲಿ ಸ್ವತಃ ರಜನಿಕಾಂತ್ ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗಿತ್ತು.
ಅಂತಿಮವಾಗಿ ಹೃತಿಕ್ ರೋಷನ್ ಅವರು ಸಂಭಾವನೆ ಪಡೆಯದೆ ನಟಿಸಿದರಾ ಅಥವಾ ಬೇರೆ ಒಪ್ಪಂದವಾಯಿತೇ ಎಂಬುದು ನಿರ್ಮಾಪಕರಿಗೆ ಮತ್ತು ನಟರಿಗೆ ಮಾತ್ರ ತಿಳಿದಿರುವ ಸತ್ಯ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಹೃತಿಕ್ ರೋಷನ್ ಅವರ ಎಂಟ್ರಿಯಿಂದಾಗಿ ‘ಜೈಲರ್ 2’ ಸಿನಿಮಾದ ಸ್ಟಾರ್ ಮೆರುಗು ಹೆಚ್ಚಿದೆ.
ಇದನ್ನೂ ಓದಿ: ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್
‘ಜೈಲರ್ 2’ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಆರಂಭಿಕ ಯಶಸ್ಸು ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ 59.70 ಕೋಟಿ ರೂ. ನೆಟ್ ಗಳಿಕೆ ಮಾಡಿದ ಚಿತ್ರವು, 2ನೇ ದಿನ 37.10 ಕೋಟಿ ರೂ., 3ನೇ ದಿನ 47.25 ಕೋಟಿ ರೂ. ಹಾಗೂ 4ನೇ ದಿನ 55.85 ಕೋಟಿ ರೂ. ಸಂಗ್ರಹಿಸಿದೆ.
ನಂತರದ ದಿನಗಳಲ್ಲಿ 5ನೇ ದಿನ 42.35 ಕೋಟಿ ರೂ., 6ನೇ ದಿನ 46.80 ಕೋಟಿ ರೂ. ಮತ್ತು 7ನೇ ದಿನ 28.15 ಕೋಟಿ ರೂ. ಗಳಿಸುವುದರೊಂದಿಗೆ, ಮೊದಲ ವಾರದಲ್ಲೇ ಭಾರತದಲ್ಲಿ ಒಟ್ಟು 317.20 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ 7ನೇ ದಿನ ವಿದೇಶಿ ಮಾರುಕಟ್ಟೆಯಲ್ಲಿ 5.00 ಕೋಟಿ ರೂ. ಗಳಿಕೆ ಹಾಗೂ ಒಟ್ಟಾರೆ ಅಂತಾರಾಷ್ಟ್ರೀಯ ಗ್ರಾಸ್ 205.00 ಕೋಟಿ ರೂ. ಸೇರಿ, ಚಿತ್ರದ ಒಟ್ಟು ವಿಶ್ವಾದ್ಯಂತ ಬಾಕ್ಸ್‌ಆಫೀಸ್ ಗಳಿಕೆಯು 576.45 ಕೋಟಿ ರೂ. ತಲುಪಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.