AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃತಿಕ್ ರೋಷನ್ ಸಿನಿಮಾ ನಿರ್ದೇಶಿಸಲಿರುವ ದಕ್ಷಿಣದ ನಿರ್ದೇಶಕ

‘ಜೈಲರ್ 2’ ಮೂಲಕ ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಅವರು ದಕ್ಷಿಣದ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ‘ಜೈಲರ್ 2’ ಇಂದಾಗಿ ಹೃತಿಕ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡುವ ಅವಕಾಶ ದಕ್ಷಿಣದ ನಿರ್ದೇಶಕರೊಬ್ಬರಿಗೆ ಒಲಿದಿದೆ ಎನ್ನಲಾಗಿದೆ. ‘ಜೈಲರ್ 2’ ನಿರ್ದೇಶಿಸಿರುವ ನೆಲ್ಸನ್ ಅವರೇ ಹೃತಿಕ್ ನಟನೆಯ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಹೃತಿಕ್ ರೋಷನ್ ಸಿನಿಮಾ ನಿರ್ದೇಶಿಸಲಿರುವ ದಕ್ಷಿಣದ ನಿರ್ದೇಶಕ
Hritik Roshan
ಮಂಜುನಾಥ ಸಿ.
|

Updated on: Oct 20, 2026 | 2:51 PM

Share

ಮುಖ್ಯಾಂಶಗಳು

  • ‘ಜೈಲರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ ನಟನೆ
  • ವಿಶೇಷ ಪಾತ್ರದಲ್ಲಿ ನಟನೆ ಮಾಡಿರುವ ಹೃತಿಕ್ ರೋಷನ್
  • ಹೃತಿಕ್ ಸಿನಿಮಾ ನಿರ್ದೇಶಿಸಲಿರುವ ದಕ್ಷಿಣದ ನಿರ್ದೇಶಕ

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿರುವ ‘ಜೈಲರ್ 2’ ಸಿನಿಮಾ ಬಿಡುಗಡೆ ಆಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೆಲ ಕ್ಯಾಮಿಯೋಗಳು ಸಖತ್ ಹಿಟ್ ಆಗಿವೆ. ಮೋಹನ್​​ಲಾಲ್, ಶಿವರಾಜ್ ಕುಮಾರ್ ಜೊತೆಗೆ ಈ ಬಾರಿ ಹೃತಿಕ್ ರೋಷನ್ ಸಹ ನಟನೆ ಮಾಡಿದ್ದು, ಹೃತಿಕ್ ರೋಷನ್ ಅವರ ಎಂಟ್ರಿ ದೃಶ್ಯ ಸಖತ್ ವೈರಲ್ ಆಗಿದೆ. ‘ಜೈಲರ್ 2’ ಮೂಲಕ ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಅವರು ದಕ್ಷಿಣದ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ‘ಜೈಲರ್ 2’ ಇಂದಾಗಿ ಹೃತಿಕ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡುವ ಅವಕಾಶ ದಕ್ಷಿಣದ ನಿರ್ದೇಶಕರೊಬ್ಬರಿಗೆ ಒಲಿದಿದೆ ಎನ್ನಲಾಗಿದೆ.

ಹೃತಿಕ್ ರೋಷನ್, ಬಾಲಿವುಡ್​​ನ ‘ಸಂಪೂರ್ಣ ನಟ’. ಅದ್ಭುತ ಫಿಸೀಕ್, ಅತ್ಯದ್ಭುತ ಡ್ಯಾನ್ಸು ಹಾಗೂ ಅಷ್ಟೇ ಅದ್ಭುತವಾಗಿ ನಟನೆ ಮಾಡಬಲ್ಲರು ಹೃತಿಕ್ ರೋಷನ್. ಹಾಗಾಗಿ ಈ ನಟರೊಟ್ಟಿಗೆ ಕೆಲಸ ಮಾಡಲು ಹಲವು ನಿರ್ದೇಶಕರು ವರ್ಷಗಳ ಗಟ್ಟಲೆ ಕಾಯುತ್ತಾರೆ. ಆದರೆ ಇದೀಗ ಹೃತಿಕ್ ಅವರ ಹೊಸ ಸಿನಿಮಾ ನಿರ್ದೇಶಿಸುವ ಅವಕಾಶ ದಕ್ಷಿಣದ ನಿರ್ದೇಶಕನಿಗೆ ಧಕ್ಕಿದೆ. ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಅವರು ಹೃತಿಕ್ ಅವರ ಹೊಸ ಸಿನಿಮಾ ಅನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಜೈಲರ್’ ಮತ್ತು ‘ಜೈಲರ್ 2’ ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ‘ಜೈಲರ್ 2’ ಸಿನಿಮಾನಲ್ಲಿ ಹೃತಿಕ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೆಲ್ಸನ್ ಅವರ ಕೆಲಸ ಮಾಡುವ ರೀತಿ ಹೃತಿಕ್ ಅವರಿಗೆ ಇಷ್ಟವಾಗಿದೆ ಎನ್ನಲಾಗುತ್ತಿದೆ. ಜೊತೆಗೆ ನೆಲ್ಸನ್ ಅವರು ಹೃತಿಕ್ ಅವರಿಗೆ ಕತೆಯೊಂದನ್ನು ಸಹ ಹೇಳಿದ್ದಾರಂತೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದು ಇನ್ನೂ ಖಚಿತವಾಗಿಲ್ಲವಾದರೂ, ಕತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆಯಂತೆ.

ಇದನ್ನೂ ಓದಿ:‘ಜೈಲರ್ 2’ ವಿಮರ್ಶೆ: ಲಾಜಿಕ್ ಇಲ್ಲದೆಯೂ ರಜನಿಕಾಂತ್ ಅಭಿಮಾನಿಗಳಿಗೆ ಖುಷಿಕೊಡುವ ಸಿನಿಮಾ

ಹೃತಿಕ್ ರೋಷನ್ ಮತ್ತು ನೆಲ್ಸನ್ ಇಬ್ಬರೂ ಸಹ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೃತಿಕ್ ರೋಷನ್ ಇದೇ ಮೊದಲ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, ಅವರು ‘ಕ್ರಿಶ್ 4’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ಅವರು ಸಿದ್ಧಾರ್ಥ್ ನಿರ್ದೇಶನದ ಹೊಸ ಸಿನಿಮಾ ಹಾಗೂ ಯಶ್ ರಾಜ್ ಫಿಲಮ್ಸ್ ನಿರ್ಮಾಣದ ಸಿನಿಮಾ ಒಂದರಲ್ಲಿ ಸಹ ನಟನೆ ಮಾಡಲಿದ್ದಾರೆ.

ಇನ್ನು ನೆಲ್ಸನ್, ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದಾದ ಬಳಿಕ ಅವರು ಜೂ ಎನ್​​ಟಿಆರ್ ನಟಿಸಲಿರುವ ತೆಲುಗು ಸಿನಿಮಾ ಅನ್ನು ಸಹ ನಿರ್ದೇಶಿಸಲಿದ್ದಾರೆ. ಇವುಗಳ ನಡುವೆ ಅವರು ಹೃತಿಕ್ ಅವರಿಗಾಗಿ ಸಿನಿಮಾ ಮಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ