ಕಾಲಿವುಡ್ ನಟ ರಜನಿಕಾಂತ್ ಅವರಿಗೆ ಈಗ 73 ವರ್ಷ. ವಯಸ್ಸು ಆದಂತೆ ಅವರಿಗೆ ಅನಾರೋಗ್ಯ ಸಮಸ್ಯೆ ಕೂಡ ಹೆಚ್ಚುತ್ತಿದೆ. ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರ ಹೃದಯ ಪರೀಕ್ಷೆ ಕೂಡ ಮಾಡಿಸಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಅವರ ನಟನೆಯ ‘ವೆಟ್ಟೈಯಾನ್’ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಈ ರೀತಿ ಆಗಿದೆ.
ರಜನಿಕಾಂತ್ ಅವರಿಗೆ ಸೆಪ್ಟೆಂಬರ್ 30ರ ತಡರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಕಾರಣದಿಂದ ಅವರನ್ನು ತಕ್ಷಣವೇ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ವೇಳೆ ಅವರ ಹೃದಯ ಪರೀಕ್ಷೆ ಕೂಡ ಮಾಡಿಸಲಾಗಿದೆ. ಹೃದಯರೋಗ ತಜ್ಞ ಸಾಯಿ ಸತೀಶ್ ಅವರು ರಜನಿ ಅವರನ್ನು ಪರೀಕ್ಷೆ ಮಾಡಿದ್ದಾರೆ. ಈಗ ರಜನಿಕಾಂತ್ ಆರೋಗ್ಯ ಸುಸ್ಥಿರವಾಗಿದೆ.
ಇಂದು (ಅಕ್ಟೋಬರ್ 1) ಅಪೋಲೋ ಆಸ್ಪತ್ರೆಯಲ್ಲಿ ರಜನಿಕಾಂತ್ ಅವರ ಹೃದಯದ ಪರೀಕ್ಷೆ ನಡೆಯಲಿದೆ. ಈ ವೇಳೆ ಕೆಲವು ಚಿಕಿತ್ಸೆಗಳನ್ನು ರಜನಿಕಾಂತ್ಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಸದ್ಯ ರಜನಿಕಾಂತ್ ಫ್ಯಾನ್ಸ್ ಸಾಕಷ್ಟು ಆತಂಕಗೊಂಡಿದ್ದಾರೆ. ಅವರ ಕಡೆಯಿಂದ ಆರೋಗ್ಯದ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
BREAKING: Superstar #Rajinikanth admitted to Apollo Hospital, Chennai.
To undergo an elective procedure.
Wishing him a speedy recovery! pic.twitter.com/XbAafNCMb4
— Manobala Vijayabalan (@ManobalaV) October 1, 2024
ಇದನ್ನೂ ಓದಿ: ‘ನೆಲದ ಮೇಲೆ ಮಲಗುತ್ತಿದ್ದರು’: ರಜನಿಕಾಂತ್ ಸರಳತೆಯ ಕೊಂಡಾಡಿದ ಬಿಗ್-ಬಿ
ಈ ಮೊದಲು ಕೂಡ ರಜನಿಕಾಂತ್ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಈ ರೀತಿ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆತಂಕ ಹೆಚ್ಚಿದೆ. ಆದಾಗ್ಯೂ ಅವರು ಸಿನಿಮಾ ಕೃಷಿಯನ್ನು ನಿಲ್ಲಿಸಿಲ್ಲ ಅನ್ನೋದು ವಿಶೇಷ.
ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ರಜನಿಕಾಂತ್ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ಈ ರೀತಿ ಆಗಿರುವುದು ಸಹಜವಾಗಿಯೇ ಅವರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.