ಮೊದಲ ದಿನವೇ ನರಕವಾಯಿತು ಸ್ವರ್ಗ; ರೂಲ್ಸ್ ಬ್ರೇಕ್ ಮಾಡಿದವರಿಗೆ ಯಾರೂ ಊಹಿಸದ ಶಿಕ್ಷೆ
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭರ್ಜರಿ ದ್ವೇಷ ಹುಟ್ಟಿಕೊಂಡಿತ್ತು. ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದರು. ಈಗ ಈ ದ್ವೇಷದ ಬೀಜ ಮೊದಲ ದಿನವೇ ಮೊಳಕೆ ಒಡೆದಿದೆ. ಬಿಸಿನೀರು ಹಾಗೂ ತಣ್ಣೀರಿನ ವಿಚಾರಕ್ಕೆ ಮನೆ ಮಂದಿ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಮನೆಯವರಿಗೆ ಶಿಕ್ಷೆ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆ ಮೊದಲ ದಿನವೇ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಸಾಲು ಸಾಲು ರೂಲ್ಸ್ಗಳನ್ನು ಬ್ರೇಕ್ ಮಾಡಲಾಗಿದೆ. ಇದರಿಂದ ಮನೆ ಮಂದಿ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗಿದೆ. ಎಲ್ಲಕಿಂತ ಮುಖ್ಯವಾಗಿ ಎಲ್ಲರಿಗೂ ಕಾನೂನು ಹೇಳುವ ಜಗದೀಶ್ ಅವರೇ ನಿಯಮ ಮುರಿದಿದ್ದಾರೆ. ಇದರಿಂದ ಮನೆ ಮಂದಿ ಕಠಿಣ ಶಿಕ್ಷೆ ಅನುಭವಿಸಿದ್ದಾರೆ.
‘ಬಿಗ್ ಬಾಸ್’ನಲ್ಲಿರೋ ಸಣ್ಣ ಸಣ್ಣ ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು. ಕೆಲವೊಮ್ಮೆ ಬೇರೆಯವರು ಹೇಳಿದರೂ ಅದನ್ನು ಅರ್ಥ ಮಾಡಿಸಿಕೊಳ್ಳುವ ಮನಸ್ಥಿತಿಯಲ್ಲಿ ಯಾರೂ ಇರುವುದಿಲ್ಲ. ಈಗ ಆಗಿದ್ದೂ ಅದೇ. ನರಕವಾಸಿಗಳಿಗೆ ಮನೆಯ ಯಾವುದೇ ಸೌಲಭ್ಯ ಕೊಡುವಂತೆ ಇಲ್ಲ. ಆದಾಗ್ಯೂ ನಿಯಮ ಬ್ರೇಕ್ ಮಾಡಿ ನರಕವಾಸಿಗಳಿಗೆ ಲಾಯರ್ ಜಗದೀಶ್ ಅವರು ಬಿಸಿ ನೀರು ಕೊಟ್ಟರು. ಇದರ ಪರಿಣಾಮ ಸ್ವರ್ಗವಾಸಿಗಳ ಮೇಲೆ ಆಗಿದೆ.
‘ಮನೆಯಲ್ಲಿ ದಿನಸಿ ಸಾಮಗ್ರಿಗಳ ಜೊತೆ ಒಂದಷ್ಟು ಲಕ್ಷುರಿ ಸಾಮಗ್ರಿಗಳು ಇದ್ದವು. ಸ್ವರ್ಗ ಹಾಗೂ ನರಕ ನಿವಾಸಗಿಗಳಿಗೆ ನೀಡಿದ್ದ ನಿಯಮಗಳ ಪೈಕಿ ಬಿಸಿನೀರಿನ ನಿಯಮ ಬ್ರೇಕ್ ಆಗಿದೆ. ಇದನ್ನು ಬಿಗ್ ಬಾಸ್ ಗಮನಿಸಿದ್ದಾರೆ. ಹೀಗಾಗಿ, ಸ್ವರ್ಗ ನಿವಾಸಿಗಳಿಗೆ ಮೀಸಲಿರುವ ಲಕ್ಷುರಿ ಸಾಮಗ್ರಿಗಳಾದ ಪನೀರ್, ಚಿಪ್ಸ್, ಕಾಫಿ, ಐಸ್ಕ್ರೀಮ್, ಚಾಕೋಲೇಟ್, ತುಪ್ಪ ಸೇರಿ ಎಲ್ಲಾ ಲಕ್ಷುರಿ ವಸ್ತುಗಳನ್ನು ಈಗಲೇ ಹಿಂದಿರುಗಿಸಲೇಬೇಕು. ಇದು ಬಿಗ್ ಬಾಸ್ ಆದೇಶ. ಇದನ್ನು ಪಾಲಿಸಲೇಬೇಕು’ ಎಂದು ಧನರಾಜ್ ಬಿಗ್ ಬಾಸ್ ಆದೇಶ ಓದಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕೂಗಾಟ, ಗೊಂದಲ; ರಿಪೀಟ್ ಆಗುತ್ತಾ ಕಳೆದ ಸೀಸನ್?
ಇದಾದ ಬಳಿಕ ತಾವೇ ಇದರ ಜವಾಬ್ದಾರಿ ಹೊತ್ತುಕೊಳ್ಳೋದಾಗಿ ಜಗದೀಶ್ ಹೇಳಿದರು. ಆದರೆ, ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋದಮೇಲೆ ಏನು ಪ್ರಯೋಜನ ಎನ್ನುವ ಮಾತು ಮನೆಯವರಿಂದ ಕೇಳಿ ಬಂತು. ಸದ್ಯ, ಜಗದೀಶ್ ವಿರುದ್ಧ ಎಲ್ಲರೂ ಸಿಟ್ಟಾಗಿದ್ದಾರೆ. ಈ ಶಿಕ್ಷೆಯನ್ನು ಯಾರೂ ಊಹಿಸಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.