ಕಾನೂನು ಮಾತಾಡುವ ಜಗದೀಶ್​ ಕೈಯಿಂದಲೇ ಆಯ್ತು ರೂಲ್ಸ್​ ಬ್ರೇಕ್; ಕಾದಿದೆ ಶಿಕ್ಷೆ

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಅಖಾಡದಲ್ಲಿ ಲಾಯರ್​ ಜಗದೀಶ್​ ಇದ್ದಾರೆ. ಹೊರ ಜಗತ್ತಿನಲ್ಲಿ ಅವರು ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಗ್​ ಬಾಸ್​ ಮನೆಯೊಳಗೆ ಅವರೇ ರೂಲ್ಸ್​ ಬ್ರೇಕ್​ ಮಾಡಿದ್ದಾರೆ. ಜಗದೀಶ್​ ಮಾಡಿದ ತಪ್ಪಿನಿಂದಾಗಿ ಇನ್ನುಳಿದ ಸ್ಪರ್ಧಿಗಳಿಗೆ ಕೋಪ ಬಂದಿದೆ. ಯಾಕೆಂದರೆ, ಅಲ್ಲಿ ಒಬ್ಬರು ಮಾಡುವ ತಪ್ಪಿಗೆ ಎಲ್ಲರೂ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕಾನೂನು ಮಾತಾಡುವ ಜಗದೀಶ್​ ಕೈಯಿಂದಲೇ ಆಯ್ತು ರೂಲ್ಸ್​ ಬ್ರೇಕ್; ಕಾದಿದೆ ಶಿಕ್ಷೆ
ಧರ್ಮ, ಜಗದೀಶ್, ಐಶ್ವರ್ಯಾ
Follow us
ಮದನ್​ ಕುಮಾರ್​
|

Updated on: Sep 30, 2024 | 8:49 PM

ಸೋಶಿಯಲ್​ ಮೀಡಿಯಾದಲ್ಲಿ ಲಾಯರ್​ ಜಗದೀಶ್​ ಹಲವಾರು ವಿಡಿಯೋಗಳ ಮೂಲಕ ಫೇಮಸ್​ ಆಗಿದ್ದಾರೆ. ಕಾನೂನಿನ ಬಗ್ಗೆ ಅವರು ಯಾವಾಗಲೂ ಧ್ವನಿ ಎತ್ತುತ್ತಾರೆ. ಆದರೆ ಅವರು ಬಿಗ್ ಬಾಸ್​ ಮನೆಯ ಕಾನೂನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಹಾಗಾಗಿ ಮೊದಲ ದಿನವೇ ಅವರು ಆಟದ ರೂಲ್ಸ್​ ಬ್ರೇಕ್​ ಮಾಡಿದ್ದು, ಇನ್ನುಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಹಾಗಾದ್ರೆ ಜಗದೀಶ್​ ಮಾಡಿದ ತಪ್ಪು ಏನು? ‘ಬಿಗ್ ಬಾಸ್​ ಕನ್ನಡ ಸೀನಸ್​ 11’ ಶೋನಲ್ಲಿ ಅವರ ಆಟ ಹೇಗೆ ಶುರುವಾಗಿದೆ? ಇಲ್ಲಿದೆ ಉತ್ತರ..

ದೊಡ್ಮನೆಯೊಳಗೆ ಎರಡು ಭಾಗ ಇದೆ. ಸ್ವರ್ಗದಲ್ಲಿ ಕೆಲವರು ಇದ್ದಾರೆ. ನರಕದಲ್ಲಿ ಇನ್ನುಳಿದವರು ಇದ್ದಾರೆ. ಮನೆಯ ಒಂದಷ್ಟು ಕೆಲಸವನ್ನು ನರಕವಾಸಿಗಳಿಂದ ಮಾಡಿಸಲಾಗುತ್ತಿದೆ. ಆ ಕೆಲಸವನ್ನು ಸ್ವರ್ಗವಾಸಿಗಳು ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಬಿಗ್​ ಬಾಸ್​ ಮನೆಯ ನಿಯಮವನ್ನು ಮುರಿದಂತೆ ಆಗುತ್ತದೆ. ಇಂಥ ಪ್ರಮಾದವನ್ನು ಲಾಯರ್​ ಜಗದೀಶ್​ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯನ್ನು ಕ್ಲೀನ್ ಮಾಡುವ ಕೆಲಸ ಚೈತ್ರಾ ಕುಂದಾಪುರ ಅವರಿಗೆ ನೀಡಲಾಗಿದೆ. ಆದರೆ ಅವರು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂಬ ಕಾರಣಕ್ಕೆ ಲಾಯರ್​ ಜಗದೀಶ್​ ಅವರು ಕ್ಲೀನ್​ ಮಾಡಿದ್ದಾರೆ. ಇದರಿಂದ ನಿಯಮದ ಉಲ್ಲಂಘನೆ ಆಗಿದೆ. ಈ ಬಗ್ಗೆ ಇನ್ನುಳಿದ ಸ್ಪರ್ಧಿಗಳು ಜಗದೀಶ್​ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ತಾವು ಮಾಡಿದ್ದಕ್ಕೆ ಸಮರ್ಥನೆ ನೀಡಲು ಅವರು ಮುಂದಾಗಿದ್ದಾರೆ.

ಒಂದರ್ಥದಲ್ಲಿ ನೋಡಿದರೆ ಇದಕ್ಕೆ ಚೈತ್ರಾ ಕುಂದಾಪುರ ಅವರೇ ಮೂಲ ಕಾರಣ. ಅವರು ಸರಿಯಾಗಿ ಕ್ಲೀನ್​ ಮಾಡದೇ ಇರುವುದರಿಂದಲೇ ಈ ರೀತಿ ಗೊಂದಲ ಉಂಟಾಗಿದೆ. ಈ ಬಗ್ಗೆ ವೀಕೆಂಡ್​ನಲ್ಲಿ ಸುದೀಪ್​ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಅದಕ್ಕೂ ಮುನ್ನ ಈ ವಿಚಾರಕ್ಕೆ ಬಿಗ್​ ಬಾಸ್​ ನಿಲುವು ಏನು ಎಂಬುದನ್ನು ಕೂಡ ತಿಳಿಯಬೇಕಿದೆ. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮ ಪ್ರಸಾರ ಆಗಲಿದೆ.

ಇದನ್ನೂ ಓದಿ: ಉಗ್ರಂ ಮಂಜು ಜೊತೆ ಚೈತ್ರಾ ಕುಂದಾಪುರ ಕಿರಿಕ್: ಬಿಗ್​ ಬಾಸ್ ಮೊದಲ ದಿನವೇ ರಂಪಾಟ

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಸ್ಪರ್ಧಿಗಳು: ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್​, ತ್ರಿವಿಕ್ರಮ್​, ಶಿಶಿರ್​, ರಂಜಿತ್​, ಹಂಸಾ, ಮಾನಸಾ, ಗೋಲ್ಡ್ ಸುರೇಶ್​, ಗೌತಮಿ ಜಾಧವ್, ಧನರಾಜ್​, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಐಶ್ವರ್ಯಾ, ಮೋಕ್ಷಿತಾ ಅವರು ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್