‘ಯಶ್ ಫೆನಾಮಿನಲ್ ಆ್ಯಕ್ಟರ್, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ’; ಕಾಜಲ್

ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಯಶ್ ಅವರನ್ನು 'ಅದ್ಭುತ ನಟ' ಎಂದು ಕಾಜಲ್ ಅಗರ್ವಾಲ್ ಶ್ಲಾಘಿಸಿದ್ದಾರೆ. ರಾವಣ-ಮಂಡೋದರಿಯಾಗಿ ಯಶ್-ಕಾಜಲ್ ಜೋಡಿ ಮೊದಲ ಭಾಗದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರ ತೆರೆ ಮೇಲಿನ ಕೆಮಿಸ್ಟ್ರಿ ಬಗ್ಗೆ ಭಾರಿ ನಿರೀಕ್ಷೆಯಿದೆ. ಈ ಮಹಾಕಾವ್ಯವು ಭಾರತೀಯ ಸಿನೆಮಾದ ಇತಿಹಾಸದಲ್ಲಿ ಅತಿದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಲಿದೆ.

‘ಯಶ್ ಫೆನಾಮಿನಲ್ ಆ್ಯಕ್ಟರ್, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ’; ಕಾಜಲ್
ಕಾಜಲ್-ಯಶ್

Updated on: Jun 20, 2026 | 11:00 AM

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ (Ramayana Movie) ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದಾರೆ. ರಣಬೀರ್​ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ದೊಡ್ಡ ಅಭಿಮಾನಿ ಬಳಗವೇ ಚಿತ್ರದಲ್ಲಿ ಇದೆ. ಈ ಕಾರಣದಿಂದಲೇ ದಕ್ಷಿಣದವರಿಗೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ನಟಿಸಿರುವ ಸೌತ್ ಸಿನಿರಂಗದ ಸ್ಟಾರ್ ನಟಿ ಕಾಜಲ್ ಅಗರ್ವಾಲ್, ಅವರ ನಟನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಶ್ ಅವರನ್ನು ಒಬ್ಬ ‘ಫೆನಾಮಿನಲ್ ಆ್ಯಕ್ಟರ್’ ಎಂದು ಕರೆದಿರುವ ಕಾಜಲ್, ಅವರ ಜೊತೆ ಕೆಲಸ ಮಾಡಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ನಿಖಿಲ್ ದ್ವಿವೇದಿ ನಿರ್ಮಾಣದ ಹಾಗೂ ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧಾರಿತ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಕಾಜಲ್ ಅಗರ್ವಾಲ್ ಅವರು ರಾವಣನ ಪತ್ನಿ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮೊದಲ ಭಾಗದ ಶೂಟಿಂಗ್ ಕಂಪ್ಲೀಟ್!

ಚಿತ್ರದ ಪ್ರಗತಿಯ ಬಗ್ಗೆ ಮಾತನಾಡಿರುವ ಕಾಜಲ್ ಅಗರ್ವಾಲ್, ‘ಯಶ್ ನಿಜಕ್ಕೂ ಒಬ್ಬ ಅದ್ಭುತ ನಟ. ನಾವು ಈಗಾಗಲೇ ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಸದ್ಯಕ್ಕೆ ಫಸ್ಟ್ ಪಾರ್ಟ್ ಮಾತ್ರ ಶೂಟ್ ಆಗಿದ್ದು, ಎರಡನೇ ಭಾಗದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ

ರಾವಣ ಹಾಗೂ ಮಂಡೋದರಿಯಾಗಿ ಯಶ್ ಮತ್ತು ಕಾಜಲ್ ಜೋಡಿ ತೆರೆಮೇಲೆ ಹೇಗೆ ಅಬ್ಬರಿಸಲಿದೆ ಎಂದು ನೋಡಲು ಸಿನಿರಸಿಕರು ಈಗಿನಿಂದಲೇ ಕಾತುರರಾಗಿದ್ದಾರೆ. ರಾವಣನ ಭಾಗದ ದೃಶ್ಯಗಳು ಎರಡನೇ ಪಾರ್ಟ್​​​ನಲ್ಲಿ ಹೆಚ್ಚಾಗಿ ಬರಲಿವೆ. ಹೀಗಾಗಿ, ಯಶ್​-ಕಾಜಲ್ ಕಾಂಬಿನೇಷನ್ ‘ರಾಮಾಯಣ 2’ ಚಿತ್ರದಲ್ಲಿ ಹೆಚ್ಚಾಗಿ ಇರಲಿದೆ. ಭಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಿನಿಮಾಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:54 am, Sat, 20 June 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us