ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು

|

Updated on: Oct 18, 2024 | 12:16 PM

ಪ್ರಭಾಸ್​ ಭಾರತದ ಅತಿ ದೊಡ್ಡ ಸ್ಟಾರ್ ನಟ. ಪ್ರಭಾಸ್ ತಮ್ಮ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಬೇಕೆಂದು ಹಲವು ನಟ, ನಿರ್ಮಾಪಕರು, ನಿರ್ದೇಶಕರು ನಿರೀಕ್ಷಿಸುತ್ತಾರೆ. ಆದರೆ ಈಗ ಪ್ರಭಾಸ್​ರ ಮುಂದಿನ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ನಟಿಸಲಿದ್ದಾರೆ.

ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು
Follow us on

ಪ್ರಭಾಸ್ ಭಾರತದ ಅತಿ ದೊಡ್ಡ ಸ್ಟಾರ್ ನಟರಲ್ಲಿ ಒಬ್ಬರು. ಅವರ ಸಿನಿಮಾಗಳಿಗೆ ದಕ್ಷಿಣ ಭಾರತದಲ್ಲಿ ಮಾತ್ರವೇ ಅಲ್ಲದೆ. ಉತ್ತರ ಭಾರತ, ವಿದೇಶಗಳಲ್ಲಿಯೂ ಭಾರಿ ದೊಡ್ಡ ಓಪನಿಂಗ್ ಸಿಗುತ್ತದೆ. ಪ್ರಭಾಸ್, ತಮ್ಮ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರೆ ಸಾಕು ಎಂದು ಕಾಯುವ ಹಲವು ನಟರು, ನಿರ್ಮಾಪಕರಿದ್ದಾರೆ. ಆದರೆ ಈಗ ಪ್ರಭಾಸ್​ರ ಹೊಸ ಸಿನಿಮಾದಲ್ಲಿ ಇಬ್ಬರು ಸ್ಟಾರ್ ಹೀರೋಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಅರ್ಜುನ್ ರೆಡ್ಡಿ’, ‘ಅನಿಮಲ್’ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಹೆಸರಿನ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಸಿನಿಮಾದ ಚಿತ್ರಕತೆಯನ್ನು ಸಂದೀಪ್ ಬಹುತೇಕ ಅಂತಿಮಗೊಳಿಸಿದ್ದಾರೆ. ಸಿನಿಮಾಕ್ಕೆ ನಟರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಸಂದರ್ಭದಲ್ಲಿ ಪ್ರಭಾಸ್​ರ ‘ಸ್ಪಿರಿಟ್’ ಸಿನಿಮಾದಲ್ಲಿ ಇನ್ನೂ ಇಬ್ಬರು ಸ್ಟಾರ್ ನಟರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಸ್ಪಿರಿಟ್’ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್ ಮತ್ತು ವಿಜಯ್ ದೇವರಕೊಂಡ ಅವರುಗಳು ನಟಿಸಲಿದ್ದಾರಂತೆ. ಈ ಇಬ್ಬರೂ ಸಹ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದರೆ, ರಣ್​ಬೀರ್ ಕಪೂರ್ ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ‘ಸ್ಪಿರಿಟ್’ ಸಿನಿಮಾದಲ್ಲಿ ಈ ಇಬ್ಬರೂ ಸಹ ಅವರ ಸಿನಿಮಾಗಳ ಪಾತ್ರಗಳಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರದ್ದೂ ಸಹ ಸಣ್ಣ ಅತಿಥಿ ಪಾತ್ರ ಆಗಿರಲಿದೆಯಷ್ಟೆ.

ಇದನ್ನೂ ಓದಿ:ಪ್ರಭಾಸ್ ನಟನೆಯ ಮೂರು ಸಿನಿಮಾಗಳು ಒಟ್ಟಿಗೆ ಮರು ಬಿಡುಗಡೆ

ಅಸಲಿಗೆ ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾದಲ್ಲಿಯೇ ತಮ್ಮ ಹಿಂದಿನ ಸಿನಿಮಾದ ಪಾತ್ರವನ್ನು ತರುವ ಪ್ರಯತ್ನ ಮಾಡಿದ್ದರಂತೆ. ‘ಅನಿಮಲ್’ ಸಿನಿಮಾದಲ್ಲಿ ‘ಅರ್ಜುನ್ ರೆಡ್ಡಿ’ ಸಿನಿಮಾದ ರೀಮೇಕ್ ಆಗಿರುವ ‘ಕಬೀರ್ ಸಿಂಗ್’ರ ಶಾಹಿದ್ ಕಪೂರ್ ಪಾತ್ರವನ್ನು ತರುವ ಪ್ರಯತ್ನ ಮಾಡಿದ್ದರಂತೆ. ರಣ್​ಬೀರ್ ಕಪೂರ್​ಗೆ ಗುಂಡೇಟು ಬಿದ್ದಾಗ ಅವರಿಗೆ ಚಿಕಿತ್ಸೆ ನೀಡುವ ವೈದ್ಯರಾಗಿ ಶಾಹಿದ್ ಅನ್ನು ತೋರಿಸುವ ಆಸೆ ಸಂದೀಪ್​ಗೆ ಇತ್ತಂತೆ. ಆದರೆ ಸಿನಿಮಾದ ಲೆಂತ್ ಹೆಚ್ಚಾದ ಕಾರಣ ಅದು ಸಾಧ್ಯವಾಗಿಲ್ಲ. ಈಗ ‘ಸ್ಪಿರಿಟ್’ ಸಿನಿಮಾದಲ್ಲಿ ತಮ್ಮ ಹಿಂದಿನ ಎರಡು ಸಿನಿಮಾಗಳ ಮುಖ್ಯ ಪಾತ್ರಗಳನ್ನು ಕರೆತರುತ್ತಿದ್ದಾರೆ.

ಇನ್ನು ಪ್ರಭಾಸ್ ಹಾರರ್ ರೊಮ್ಯಾಂಟಿಕ್ ಸಿನಿಮಾ ‘ರಾಜಾ ಡಿಲಕ್ಸ್’ ಚಿತ್ರೀಕರಣ ಬಹುತೇಕ ಮುಗಿಸಿದ್ದು, ಈ ಸಿನಿಮಾ ಫೆಬ್ರವರಿ ಅಥವಾ ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ. ಇದೀಗ ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ‘ಸಲಾರ್ 2’ ಅದಾದ ಬಳಿಕ ‘ಕಲ್ಕಿ 2’ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ