Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್​ನಿಂದ ಹೊರಬಂದು ಕೆಲವರಿಗೆ ಕ್ಷಮೆ ಕೇಳಿದ ಜಗದೀಶ್

ಬಿಗ್​ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಹೊರ ಹಾಕಲ್ಪಟ್ಟಿದ್ದಾರೆ. ಮನೆಯಲ್ಲಿ ಅಶಿಸ್ತು ತೋರಿ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಕಾರಣ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಹೊರಗೆ ಬಂದ ಬಳಿಕ ಜಗದೀಶ್ ಕೆಲವರಿಗೆ ಕ್ಷಮೆ ಕೇಳಿದ್ದಾರೆ. ಇಲ್ಲಿದೆ ಅವರ ಸಂದೇಶದ ವಿವರ.

ಬಿಗ್​ಬಾಸ್​ನಿಂದ ಹೊರಬಂದು ಕೆಲವರಿಗೆ ಕ್ಷಮೆ ಕೇಳಿದ ಜಗದೀಶ್
Follow us
ಮಂಜುನಾಥ ಸಿ.
|

Updated on: Oct 18, 2024 | 1:25 PM

ಲಾಯರ್ ಜಗದೀಶ್, ಬಿಗ್​ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್​ಬಾಸ್ ಮನೆಗೆ ಹೋದಾಗಿನಿಂದಲೂ ಒಂದರ ಹಿಂದೊಂದರಂತೆ ನಿಯಮಗಳನ್ನು ಮುರಿಯುತ್ತಾ ಸ್ಪರ್ಧಿಗಳ ಮೇಲೆ ಜಗಳವಾಡುತ್ತಾ, ಏಕ ವಚನದಲ್ಲಿ ಮಾತನಾಡುತ್ತಾ ಮನೆಯವರ ಸಿಟ್ಟಿಗೆ ಗುರಿಯಾಗಿದ್ದ ಜಗದೀಶ್ ನಿನ್ನೆ ಮನೆ ಮಂದಿಯ ಜೊತೆ ಜಗಳಕ್ಕೆ ಬಿದ್ದಿದ್ದು, ಮನೆಯ ಮಹಿಳೆರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಕ್ಕೆ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಜಗದೀಶ್​ ಮೇಲೆ ಕೈ ಮಾಡಿದ ಕಾರಣಕ್ಕೆ ರಂಜಿತ್​ರನ್ನೂ ಸಹ ಬಿಗ್​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವ ಜಗದೀಶ್, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶ ರವಾನಿಸಿರುವ ಜಗದೀಶ್, ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್​ಬಾಸ್​ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್​ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ’ ಎಂದಿದ್ದಾರೆ. ಮುಂದುವರೆದು, ‘ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್​ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು’ ಎಂದು ಬಿಗ್​ಬಾಸ್​ ಕಾರ್ಯಕ್ರಮವನ್ನು ಹೊಗಳಿದ್ದಾರೆ.

ಇದನ್ನೂ ಓದಿ:ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು

‘ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲ ತುಂಬಾ ಚಿಕ್ಕ ವಯಸ್ಸಿನಲ್ಲೇ ಅಧ್ಭುತ ಕಲಾವಿದರು, ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿದೆ, ಅದು ನಟನೆ ಅಥವಾ ಮನರಂಜನೆಯ ಒಂದು ಭಾಗವಷ್ಟೆ, ವೈಯಕ್ತಿಕ ದ್ವೇಷ ಯಾವುದೂ ಇಲ್ಲ’ ಎಂದಿದ್ದಾರೆ ಜಗದೀಶ್. ಮಾಧ್ಯಮಗಳನ್ನು ಭೇಟಿ ಆಗಲು ಕಾಯುತ್ತಿದ್ದೇನೆ ಎಂದಿರುವ ಜಗದೀಶ್, ಭಾನುವಾರದಂದು ಜಕ್ಕೂರು ಏರೋಸ್ಪೇಸ್​ ಬಳಿ ಸುದ್ದಿಗೋಷ್ಠಿ ನಡೆಸಲಿದ್ದೇನೆ’ ಎಂದಿದ್ದಾರೆ.

ಜಗದೀಶ್, ಬಿಗ್​ಬಾಸ್ ಮನೆಯಲ್ಲಿ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆಯೇ ಹರಡಿತ್ತು, ರಂಜಿತ್ ಹಾಗೂ ಜಗದೀಶ್ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರನ್ನೂ ಹೊರಗೆ ಹಾಕಲಾಗಿದೆ ಎನ್ನಲಾಗಿತ್ತು. ಇಂದು (ಅಕ್ಟೋಬರ್ 18) ಬೆಳಿಗ್ಗೆ ಪ್ರಸಾರವಾಗಿರುವ ಪ್ರೋಮೋನಲ್ಲಿ ಜಗದೀಶ್ ಹಾಗೂ ರಂಜಿತ್ ಹೊರಗೆ ಹೋಗುತ್ತಿರುವ ದೃಶ್ಯ ತೋರಿಸಲಾಗಿದೆ.

ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ