ಎಲಿಮಿನೇಟ್ ಆದ ವ್ಯಕ್ತಿಯ ಮೇಲಿನ ವಿಶೇಷ ಪ್ರೀತಿಗೆ ಅವರ ವಸ್ತುವನ್ನು ಎತ್ತಿಟ್ಟುಕೊಂಡ ಹಂಸಾ
ಜಗದೀಶ್ ಅವರು ಹಂಸಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದರು. ಇದು ಸಾಕಷ್ಟು ಶಾಕಿಂಗ್ ಎನಿಸಿತ್ತು. ಇದನ್ನು ಇಡೀ ಮನೆ ಖಂಡಿಸಿತು. ಸಂದರ್ಭದಲ್ಲಿ ರಂಜಿತ್ ಅವರು ಜಗದೀಶ್ನ ತಳ್ಳಿದ್ದರು. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಇಬ್ಬರನ್ನೂ ಹೊರಕ್ಕೆ ಹಾಕಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವಾರದ ಮಧ್ಯವೇ ಎಲಿಮಿನೇಷನ್ ನಡೆದು ಹೋಗಿದೆ. ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಜಗದೀಶ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಎಲಿಮಿನೇಟ್ ಆದರೆ, ರಂಜಿತ್ ಅವರು ಜಗದೀಶ್ನ ತಳ್ಳಿದ ಕಾರಣಕ್ಕೆ ಹೊರಕ್ಕೆ ಹೋಗಿದ್ದಾರೆ. ರಂಜಿತ್ ಅವರ ಬ್ಯಾಗ್ನಿಂದ ಒಂದು ವಿಶೇಷ ವಸ್ತುವನ್ನು ಹಂಸಾ ನೆನಪಿಗಾಗಿ ಎತ್ತಿಟ್ಟುಕೊಂಡಿದ್ದಾರೆ.
ಜಗದೀಶ್ ಅವರು ಹಂಸಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದರು. ಇದು ಸಾಕಷ್ಟು ಶಾಕಿಂಗ್ ಎನಿಸಿತ್ತು. ಇದನ್ನು ಇಡೀ ಮನೆ ಖಂಡಿಸಿತು. ಆದಾಗ್ಯೂ ಜಗದೀಶ್ ಅವರು ಸ್ತಿಮಿತತೆ ಕಳೆದುಕೊಂಡು ಬಾಯಿಗೆ ಬಂದಂತೆ ಹೇಳುತ್ತಲೇ ಹೋದರು. ಈ ಸಂದರ್ಭದಲ್ಲಿ ರಂಜಿತ್ ಅವರು ಜಗದೀಶ್ನ ತಳ್ಳಿದ್ದರು. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಇಬ್ಬರನ್ನೂ ಹೊರಕ್ಕೆ ಹಾಕಲಾಗಿದೆ.
ಬಿಗ್ ಬಾಸ್ನಿಂದ ಮೊದಲು ಹೊರ ಹೋಗಿದ್ದು ಜಗದೀಶ್. ಆಗ ಎಲ್ಲರೂ ಖುಷಿಯಿಂದ ಕೇಕೆ ಹಾಕಿದರು. ಆದರೆ, ರಂಜಿತ್ ಕೂಡ ಎಲಿಮಿನೇಟ್ ಆಗುತ್ತಾರೆ ಎಂದು ಅಲ್ಲಿದ್ದ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರು ಹೊರ ಹೋಗುತ್ತಿದ್ದಂತೆ ಎಲ್ಲರೂ ಬಿಗ್ ಬಾಸ್ ಬಳಿ ಮನವಿ ಮಾಡಿದರು. ಆ ಬಳಿಕ ದೊಡ್ಮನೆಯಲ್ಲಿ ಎಲ್ಲರೂ ಕಣ್ಣೀರು ಹಾಕಿದರು.
ಇದನ್ನೂ ಓದಿ: ಇಡೀ ಮನೆಗೆ ಕಣ್ಣೀರು ತರಿಸಿದ ಶಾಕಿಂಗ್ ಎಲಿಮಿನೇಷನ್; ಇದನ್ನು ಯಾರೂ ಊಹಿಸಿರಲಿಲ್ಲ
ರಂಜಿತ್ ಅವರು ಹೊರ ಹೋದ ಬಳಿಕ ಅವರ ಬ್ಯಾಗ್ನ ಪ್ಯಾಕ್ ಮಾಡಿ ಇಡಬೇಕಿತ್ತು. ಅಂತೆಯೇ ಎಲ್ಲರೂ ರಂಜಿತ್ ಬ್ಯಾಗ್ನ ಪ್ಯಾಕ್ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಹಂಸಾ ಅವರು ರಂಜಿತ್ ಅವರ ವುಲ್ಲನ್ ಕ್ಯಾಪ್ನ ತೆಗೆದುಕೊಂಡರು. ಚಳಿ ಆಗುವ ಸಂದರ್ಭದಲ್ಲಿ ಈ ಕ್ಯಾಪ್ನ ರಂಜಿತ್ ಧರಿಸುತ್ತಿದ್ದರು. ಹೊರ ಬಂದ ಬಳಿಕ ಈ ಕ್ಯಾಪ್ನ ಕೊಡೋದಾಗಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ರಂಜಿತ್ ಮೇಲಿನ ವಿಶೇಷ ಪ್ರೀತಿಗೆ ಅವರು ಕ್ಯಾಪ್ನ ಸದಾ ಧರಿಸಿರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:50 am, Sat, 19 October 24