ಮತ್ತೊಬ್ಬ ‘ಅರುಂಧತಿ’ ಆಗುವ ಹಾದಿಯಲ್ಲಿ ರಶ್ಮಿಕಾ ಮಂದಣ್ಣ: ಕೈ ಹಿಡಿಯುತ್ತಾ ‘ಮೈಸಾ’

Rashmika Mandanna: ಮದುವೆಯ ಬಳಿಕ ರಶ್ಮಿಕಾ ಮಹಿಳಾ ಪ್ರಧಾನ ಸಿನಿಮಾಗಳು, ‘ಹೋಮ್ಲಿ’ ಆದಂಥಹಾ ಪಾತ್ರಗಳನ್ನೇ ಹೆಚ್ಚು ಒಪ್ಪಿಕೊಳ್ಳಲು ನಿಶ್ಚಯಿಸಿದ್ದಾರೆ. ಈ ಹಿಂದೆ ಅವರ ನಟನೆಯ ಮಹಿಳಾ ಪ್ರಧಾನ ಸಿನಿಮಾ ‘ಗರ್ಲ್​ ಫ್ರೆಂಡ್’ ಹಿಟ್ ಆಗಿರುವುದು ಅವರಿಗೆ ಇನ್ನಷ್ಟು ಸ್ಪೂರ್ತಿಯನ್ನು ನೀಡಿದೆ. ಇದೀಗ ರಶ್ಮಿಕಾ, ಹೊಸದೊಂದು ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾ ಮೇಲೆ ರಶ್ಮಿಕಾ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಮತ್ತೊಬ್ಬ ‘ಅರುಂಧತಿ’ ಆಗುವ ಹಾದಿಯಲ್ಲಿ ರಶ್ಮಿಕಾ ಮಂದಣ್ಣ: ಕೈ ಹಿಡಿಯುತ್ತಾ ‘ಮೈಸಾ’
Mysa Arundhati

Updated on: Jul 08, 2026 | 5:33 PM

ರಶ್ಮಿಕಾ ಮಂದಣ್ಣ (Rashmika Mandanna), ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಕಳೆದ ಕೆಲ ವರ್ಷಗಳಲ್ಲಿ ರಶ್ಮಿಕಾ ಅವರಿಗೆ ಸಿಕ್ಕಷ್ಟು ಯಶಸ್ಸು ಬಹುಷಃ ಇನ್ಯಾವ ಭಾರತೀಯ ನಟಿಗೂ ದೊರೆತಿಲ್ಲ. ಆದರೆ ಮದುವೆ ಆದ ಬಳಿಕ ರಶ್ಮಿಕಾ ಅವರ ಸಿನಿಮಾ ಆಯ್ಕೆ ವಿಧಾನದಲ್ಲಿ ಬದಲಾವಣೆಗಳಾಗಿವೆ. ಮದುವೆಯ ಬಳಿಕ ಅವರು ಮಹಿಳಾ ಪ್ರಧಾನ ಸಿನಿಮಾಗಳು, ‘ಹೋಮ್ಲಿ’ ಆದಂಥಹಾ ಪಾತ್ರಗಳನ್ನೇ ಹೆಚ್ಚು ಒಪ್ಪಿಕೊಳ್ಳಲು ನಿಶ್ಚಯಿಸಿದ್ದಾರೆ. ಈ ಹಿಂದೆ ಅವರ ನಟನೆಯ ಮಹಿಳಾ ಪ್ರಧಾನ ಸಿನಿಮಾ ‘ಗರ್ಲ್​ ಫ್ರೆಂಡ್’ ಹಿಟ್ ಆಗಿರುವುದು ಅವರಿಗೆ ಇನ್ನಷ್ಟು ಸ್ಪೂರ್ತಿಯನ್ನು ನೀಡಿದೆ. ಇದೀಗ ರಶ್ಮಿಕಾ, ಹೊಸದೊಂದು ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾ ಮೇಲೆ ರಶ್ಮಿಕಾ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ‘ಮೈಸಾ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಇದು ಭಿನ್ನ ಕತೆಯುಳ್ಳ ಆಕ್ಷನ್, ಹಾರರ್, ಥ್ರಿಲ್ಲರ್ ಆಗಿದೆ. ಸಿನಿಮಾನಲ್ಲಿ ರಶ್ಮಿಕಾ ಹಿಂದೆಂದೂ ಕಾಣದ ರೀತಿಯ ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ತೆಲುಗು ಚಿತ್ರರಂಗದಲ್ಲಿ ಅಬ್ಬರ ಸೃಷ್ಟಿಸಿದ್ದ ‘ಅರುಂಧತಿ’ ಸಿನಿಮಾವನ್ನು ನೆನಪಿಸುವಂಥಹಾ ಕತೆಯನ್ನು, ಪಾತ್ರಗಳನ್ನು ಈ ಸಿನಿಮಾ ಒಳಗೊಂಡಿದೆಂತೆ. ‘ಮೈಸಾ’ ಸಿನಿಮಾದ ಪೋಸ್ಟರ್ ನೋಡಿದರೆ ಇದು ನಿಜವೇ ಎನಿಸುತ್ತದೆ.

ಬಿಡುಗಡೆ ಆಗಿರುವ ‘ಮೈಸಾ’ ಸಿನಿಮಾದ ಪೋಸ್ಟರ್​​ನಲ್ಲಿ ಗಾಢ ಕೆಂಪು ಸೀರೆ ತೊಟ್ಟಿರುವ ರಶ್ಮಿಕಾ, ಕೈಯಲ್ಲಿ ಆಯುಧ ಹಿಡಿದು, ಮುಖಕ್ಕೆ ರಕ್ತ ಮೆತ್ತಿಕೊಂಡು ದುರ್ಗೆಯ ರೀತಿ ಕಾಣುತ್ತಿದ್ದಾರೆ. ಅನುಷ್ಕಾ ಶೆಟ್ಟಿ ನಟಿಸಿದ್ದ ‘ಅರುಂಧತಿ’ ಸಿನಿಮಾದ ಪೋಸ್ಟರ್ ಸಹ ತುಸು ಹೀಗೆಯೇ ಇತ್ತು. ಇದೀಗ ‘ಮೈಸಾ’ ಸಹ ‘ಅರುಂಧತಿ’ ಮಾದರಿಯ ಸಿನಿಮಾ ಎನ್ನಲಾಗುತ್ತಿದೆ. ‘ಅರುಂಧತಿ’ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ, ತೆಲುಗು ಸಿನಿಮಾ ಪ್ರೇಮಿಗಳ ಮನಗಳಲ್ಲಿ ಶಾಶ್ವತವಾಗಿ ನೆಲೆಸಿಬಿಟ್ಟರು, ಈಗ ರಶ್ಮಿಕಾ ಸಹ ಅದೇ ಗುರಿ ಹೊಂದಿದಂತಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಜೊತೆ ಸಿನಿಮಾ, ಶೂಟಿಂಗ್​ಗೆ ಹಾಜರಾದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಪ್ರಸ್ತುತ ಪತಿ ವಿಜಯ್ ದೇವಕರೊಂಡ ಜೊತೆಗೆ ‘ರಣಬಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಮೈಸಾ’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ರಾಕಾ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಸ್ಟಾರ್ ನಟ ಅಜಿತ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಎರಡು ಬಾಲಿವುಡ್ ಸಿನಿಮಾಗಳನ್ನು ಸಹ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ‘ಪುಷ್ಪ 3’ ಸಿನಿಮಾ ಸಹ ಬರಲಿದ್ದು, ಅದರಲ್ಲಿ ಸಹ ರಶ್ಮಿಕಾ ಇರುವುದು ಖಾತ್ರಿ. ಒಟ್ಟಾರೆ ರಶ್ಮಿಕಾ ಸಖತ್ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us