ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ?

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಅದ್ದೂರಿ ರಾಜ ವೈಭವದ ವಿವಾಹ ಉದಯಪುರದಲ್ಲಿ ನೆರವೇರಿದೆ. ಇಬ್ಬರೂ ರಾಜ-ಯುವರಾಣಿಯಂತೆ ಮಿಂಚಿದ್ದು, ಅವರು ಧರಿಸಿದ್ದ ಚಿನ್ನಾಭರಣಗಳು ಎಲ್ಲರ ಗಮನ ಸೆಳೆದಿವೆ. ರಶ್ಮಿಕಾ-ವಿಜಯ್ ಧರಿಸಿದ ಆಭರಣಗಳ ಒಟ್ಟು ಮೌಲ್ಯ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ?
ರಶ್ಮಿಕಾ-ವಿಜಯ್

Updated on: Feb 28, 2026 | 7:38 AM

ನಟಿ ರಶ್ಮಿಕಾ ಮಂದಣ್ಣ (Rashmika) ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿದೆ. ಈ ವಿವಾಹದ ಥೀಮ್ ರಾಜರ ಶೈಲಿಯಲ್ಲಿ ಇತ್ತು. ಈ ಕಾರಣದಿಂದಲೇ ವಿಜಯ್ ದೇವರಕೊಂಡ ಅವರು ರಾಜನ ಲುಕ್​​ನಲ್ಲಿ ಗಮನ ಸೆಳೆದಿದ್ದಾರೆ. ಇನ್ನು, ರಶ್ಮಿಕಾ ಮಂದಣ್ಣ ಅವರು ಥೇಟ್ ಯುವರಾಣಿಯಂತೆ ಗಮನ ಸೆಳೆದಿದ್ದಾರೆ. ಈ ಮಧ್ಯೆ ಇವರು ಧರಿಸಿದ ಚಿನ್ನದ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ.

ಸಾಮಾನ್ಯವಾಗಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುವಾಗ ಅದ್ದೂರಿಯಾಗಿಯೇ ಮದುವೆ ಆಗುತ್ತಾರೆ. ಇದಕ್ಕೆ ರಶ್ಮಿಕಾ-ವಿಜಯ್ ಕೂಡ ಹೊರತಾಗಿಲ್ಲ. ತಮ್ಮ ಮದುವೆಗೆ ಅವರು ಉದಯಪುರವನ್ನು ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳಿಗೆ ಕುತೂಹಲ ಮೂಡಿತ್ತು. ಈ ಕುತೂಹಲ ದಿನ ಕಳೆದಂತೆ ಹೆಚ್ಚುತ್ತಲೇ ಬಂತು. ಮದುವೆ ಅದ್ದೂರಿಯಾಗಿ ನಡೆದಿದೆ ಎಂಬ ಸೂಚನೆ ಅಭಿಮಾನಿಗಳಿಗೆ ಇತ್ತು. ಆದರೆ, ಎಷ್ಟು ಅದ್ದೂರಿಯಾಗಿ ನಡೆದಿದೆ ಎಂಬ ಕಲ್ಪನೆ ಇರಲಿಲ್ಲ. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಫೋಟೋ ಹಂಚಿಕೊಳ್ಳುವ ಮೂಲಕ ಮದುವೆಯ ಅದ್ದೂರಿತನ ಹೇಗಿತ್ತು ಎಂಬುದನ್ನು ಅಭಿಮಾನಿಗಳಿಗೂ ತೋರಿಸಿದ್ದರು. ಈ ವೇಳೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಧರಿಸಿದ ಚಿನ್ನದ ಸರ, ಚಿನ್ನದ ಬಳೆಗಳು ಗಮನ ಸೆಳೆದವು. ರಶ್ಮಿಕಾ ಒಬ್ಬರೇ 1.5-2 ಕೆಜಿ ಚಿನ್ನ ಧರಿಸಿದ್ದರು ಎನ್ನಲಾಗಿದೆ. ವಿಜಯ್ ಕೂಡ ಸಾಕಷ್ಟು ಚಿನ್ನ ಧರಿಸಿದ್ದರು.

ಸದ್ಯ ಒಂದು ಕೆಜಿ ಚಿನ್ನ ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ರಶ್ಮಿಕಾ ಹಾಗೂ ವಿಜಯ್ ಧರಿಸಿದ ಆಭರಣಗಳಿಗೆ ಕೇವಲ ಚಿನ್ನದ ಬೆಲೆ ಮಾತ್ರ ಅನ್ವಯ ಆಗೋದಿಲ್ಲ. ಇವನ್ನು ಮಾಡಲು ಸಾಕಷ್ಟು ಶ್ರಮ ಬೇಕು. ಅಲ್ಲದೆ, ಇದರಲ್ಲಿ ಸಾಕಷ್ಟು ಡೈಮಂಡ್​​​ಗಳ ಬಳಕೆ ಮಾಡಲಾಗಿದೆ. ಈ ಎಲ್ಲಾ ಕಾರಣದಿಂದ ಇಬ್ಬರೂ ಧರಿಸಿದ ಆಭರಣಗಳ ಬೆಲೆ 7 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಮದುವೆ ಮುಗಿಸಿ ಕೈ-ಕೈ ಹಿಡಿದುಕೊಂಡು ಹೊರಟ ವಿಜಯ್-ರಶ್ಮಿಕಾ: ವಿಡಿಯೋ

ರಶ್ಮಿಕಾ ಧರಿಸಿದ ಆಭರಗಣ ಬೆಲೆ ಸುಮಾರು ಐದು ಕೋಟಿ ರೂಪಾಯಿ ಹಾಗೂ ವಿಜಯ್ ದೇವರಕೊಂಡ ಧರಿಸಿದ ಆಭರಣಗಳ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us