ರಶ್ಮಿಕಾ-ವಿಜಯ್ ವಿವಾಹದಲ್ಲಿ ಲಾಭ ಮಾಡಿಕೊಂಡ ಜಾಹೀರಾತು ಕಂಪನಿ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ವಿವಾಹವಾದ ನಂತರ ಸೆಲೆಬ್ರಿಟಿ ಜೋಡಿಯಾಗಿ ಕಂಪನಿಗಳಿಗೆ ಹಾಟ್ ಫೇವರಿಟ್ ಆಗಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಒಂದು ಬಟ್ಟೆ ಕಂಪನಿಯ ಜಾಹೀರಾತಿನಲ್ಲಿ ನಟಿಸಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಈ ಜಾಹೀರಾತು 15 ಗಂಟೆಗಳಲ್ಲಿ 5 ಮಿಲಿಯನ್ ಲೈಕ್ಸ್ ಪಡೆದಿದೆ. ಇನ್ನಷ್ಟು ಬ್ರ್ಯಾಂಡ್‌ಗಳು ಈ ಹೊಸ ದಂಪತಿಯನ್ನು ತಮ್ಮ ಜಾಹೀರಾತಿಗೆ ಕರೆತರಲು ಕಾತುರದಿಂದ ಕಾಯುತ್ತಿವೆ.

ರಶ್ಮಿಕಾ-ವಿಜಯ್ ವಿವಾಹದಲ್ಲಿ ಲಾಭ ಮಾಡಿಕೊಂಡ ಜಾಹೀರಾತು ಕಂಪನಿ
ರಶ್ಮಿಕಾ-ವಿಜಯ್

Updated on: Mar 02, 2026 | 7:31 AM

ಯಾವುದೇ ಜೋಡಿ ಹಿಟ್ ಆದರೂ ಅವರನ್ನು ಜಾಹೀರಾತಲ್ಲಿ ಬಳಸಿಕೊಳ್ಳಲು ಕಂಪನಿಗಳು ನಾಮುಂದು-ತಾಮುಂದು ಎಂದು ಬರುತ್ತವೆ. ಅದರಲ್ಲೂ ಸೆಲೆಬ್ರಿಟಿ ಜೋಡಿ ವಿವಾಹ ಆದರಂತೂ ಕೇಳೋದೇಬೇಡ. ಶತಾಯ-ಗತಾಯ ಪ್ರಯತ್ನಿಸಿ ಜಾಹೀರಾತಿಗೆ ಎಳೆತಂದು ಬಿಡುತ್ತವೆ. ಈಗಲೂ ಹಾಗೆಯೇ ಆಗಿದೆ. ರಶ್ಮಿಕಾ ಮಂದಣ್ಣ  (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಂತೆ ಅನೇಕ ಕಂಪನಿಗಳು ಇವರ ಹಿಂದೆ ಬಿದ್ದಿವೆ. ಈ ಪೈಕಿ ಒಂದು ಜಾಹೀರಾತನ್ನು ಒಪ್ಪಿ ದಂಪತಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇತ್ತೀಚೆಗೆ ಅದು ಸ್ಪಷ್ಟವಾಗುತ್ತಿತ್ತು. ಈಗ ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಇವರು ವಿವಾಹ ಆಗುತ್ತಿದ್ದಂತೆ ಬಟ್ಟೆ ಕಂಪನಿಯೊಂದು ಇವರನ್ನು ಸಂಪರ್ಕಿಸಿ ಜಾಹೀರಾತು ಶೂಟ್ ಮಾಡಿದೆ.

ಸದ್ಯ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿವಾಹ ಬಿಸಿಬಿಸಿ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ಯಾವುದೇ ವಿಷಯ ಪೋಸ್ಟ್ ಮಾಡಿದರೂ ಜನರು ನೋಡುತ್ತಾರೆ. ಹೀಗಾಗಿ, ಬಟ್ಟೆ ಕಂಪನಿಯವು ಇದರ ಲಾಭ ಪಡೆದಿದ್ದಾರೆ. ರಶ್ಮಿಕಾ-ವಿಜಯ್ ಕೊಲ್ಯಾಬರೇಷನ್​​ ಅಲ್ಲಿ ಪೋಸ್ಟ್ ಮಾಡಿರೋ ಜಾಹೀರಾತು 15 ಗಂಟೆಯಲ್ಲಿ ಬರೋಬ್ಬರಿ 5 ಮಿಲಿಯನ್ ಲೈಕ್ಸ್ ಹಾಗೂ 57 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಸರಿಯಾದ ಸಮಯದಲ್ಲಿ ಇವರು ಜೋಡಿಯನ್ನು ಸಂಪರ್ಕಿಸಿ ಜಾಹೀರಾತು ಶೂಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅವರಿಗೆ ದೊಡ್ಡ ಲಾಭವಾಗಿದೆ. ಇನ್ನು, ರಶ್ಮಿಕಾ ವಿಜಯ್ ಕೂಡ ಈ ಜಾಹೀರಾತು ಶೂಟ್ ಮಾಡಲು ದೊಡ್ಡ ಮಟ್ಟದಲ್ಲೇ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್​ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ

ಇನ್ನೂ, ಅನೇಕ ಸಂಸ್ಥೆಗಳು ರಶ್ಮಿಕಾ ಹಾಗೂ ವಿಜಯ್ ಹಿಂದೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸದ್ಯ ಅವರು ಸಿನಿಮಾ ಕೆಲಸಗಳಿಂದ ಒಂದು ಬ್ರೇಕ್ ಪಡೆದಿದ್ದಾರೆ. ಈ ಕಾರಣಕ್ಕೆ ಸ್ವಲ್ಪ ಸಮಯದ ಬಳಿಕ ಈ ಬಗ್ಗೆ ಅವರು ಚಿಂತಿಸಬಹುದು. ರಶ್ಮಿಕಾ ಹಾಗೂ ವಿಜಯ್ ಫೆಬ್ರವರಿ 26ರಂದು ಮದುವೆ ಆಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ವಿವಾಹ ಅದ್ದೂರಿಯಾಗಿ ನೆರವೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us