
ದೇಶಾದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ (Omicron Cases In India) ಹೆಚ್ಚುತ್ತಿದೆ. ಇದರ ನೇರ ಪರಿಣಾಮ ಅನೇಕ ಉದ್ಯಮಗಳ ಮೇಲೆ ಆಗುತ್ತಿದೆ. ಅದರಲ್ಲೂ ಚಿತ್ರೋದ್ಯಮ ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಅದರ ಮೊದಲ ಹಂತವಾಗಿ ‘ಆರ್ಆರ್ಆರ್’ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ (RRR movie release date postpone) ಆಗಿದೆ. ಅದನ್ನು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ಈ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಮೂರನೇ ಅಲೆಯ ಆತಂಕದಲ್ಲಿ ‘ಆರ್ಆರ್ಆರ್’ (RRR Movie) ಚಿತ್ರದ ಬಿಡುಗಡೆ ದಿನಾಂಕ ಪೋಸ್ಟ್ಪೋನ್ ಆಗಿದೆ. ಈ ಚಿತ್ರಕ್ಕೆ ರಾಜಮೌಳಿ (SS Rajamouli) ನಿರ್ದೇಶನ ಮಾಡಿದ್ದು, ರಾಮ್ ಚರಣ್ (Ram Charan) ಮತ್ತು ಜ್ಯೂ. ಎನ್ಟಿಆರ್ (Jr NTR) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ.
ರಾಜಮೌಳಿ ನಿರ್ದೇಶನದ ಸಿನಿಮಾ ಎಂಬ ಕಾರಣ ‘ಆರ್ಆರ್ಆರ್’ ಮೇಲೆ ಹೆಚ್ಚು ನಿರೀಕ್ಷೆ ಇದೆ. ನಟಿ ಆಲಿಯಾ ಭಟ್ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಬೇಕು. ಆದರೆ ಹಲವು ಕಡೆಗಳಲ್ಲಿ ಚಿತ್ರಮಂದಿಗರಳು ಕ್ಲೋಸ್ ಆಗುತ್ತಿವೆ. ಇನ್ನೂ ಕೆಲವೆಡೆ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ ಅಲ್ಲ ಎಂದು ‘ಆರ್ಆರ್ಆರ್’ ತಂಡ ನಿರ್ಧರಿಸಿದೆ.
‘ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ನಮ್ಮ ಸಿನಿಮಾದ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಅಭಿಮಾನಿಗಳ ಮತ್ತು ಪ್ರೇಕ್ಷಕರ ಅಪರಿಮಿತ ಪ್ರೀತಿಗೆ ಧನ್ಯವಾದಗಳು. ನಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ ಕೆಲವು ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಭಾರತದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಕ್ಲೋಸ್ ಆಗುತ್ತಿವೆ. ಸಿನಿಮಾ ನೋಡಲು ನೀವು ಇನ್ನಷ್ಟು ದಿನ ಕಾಯಿರಿ ಎಂದು ಹೇಳುವುದರ ಹೊರತಾಗಿ ಬೇರೆ ಆಯ್ಕೆ ಉಳಿದಿಲ್ಲ. ಭಾರತೀಯ ಸಿನಿಮಾರಂಗದ ವೈಭವ ಸರಿಯಾದ ಸಮಯದಲ್ಲಿ ಮತ್ತೆ ಮರಳುವಂತೆ ಮಾಡುತ್ತೇವೆ ಅಂತ ನಾವು ಭರವಸೆ ನೀಡುತ್ತೇವೆ’ ಎಂದು ಆರ್ಆರ್ಆರ್ ಚಿತ್ರದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಅನೌನ್ಸ್ ಮಾಡಲಾಗಿದೆ.
ಇದನ್ನೂ ಓದಿ:
‘ಆರ್ಆರ್ಆರ್’ ಚಿತ್ರದಲ್ಲಿ ಆಲಿಯಾ, ಅಜಯ್ ದೇವಗನ್ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ
Published On - 5:17 pm, Sat, 1 January 22