
ಸಮಂತಾ (Samantha) ವಿಚ್ಛೇದನ ಪಡೆದು ವರ್ಷ ಆಗುತ್ತಾ ಬಂದಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ (Naga Chaitanya) ವಿಚ್ಛೇದನ ಪಡೆದು ದೂರವಾದರು. ಈಗ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ಕೆಲವರು ಸುಮ್ಮನೆ ಕೂತಿಲ್ಲ. ಈ ಮಾಜಿ ದಂಪತಿ ಬಗ್ಗೆ ಒಂದಲ್ಲಾ ಒಂದು ವದಂತಿ ಹಬ್ಬಿಸುತ್ತಲೇ ಬಂದಿದ್ದಾರೆ. ಇವರೆಲ್ಲರಿಗೂ ಸಮಂತಾ ಈಗ ತಿರುಗೇಟು ನೀಡಿದ್ದಾರೆ. ಕಟು ಮಾತುಗಳಿಂದ ಎಲ್ಲರಿಗೂ ತಿವಿದಿದ್ದಾರೆ. ಅವರು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ.
ಟಾಲಿವುಡ್ ನಟಿ ಶೋಭಿತಾ ಧುಲಿಪಾಲ ಜತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ಎಳೆದು ತಂದಿದ್ದೆ ನಾಗ ಚೈತನ್ಯ ಫ್ಯಾನ್ಸ್. ಸಮಂತಾ ಕಡೆಯವರು ಈ ರೀತಿ ವದಂತಿ ಹಬ್ಬಿಸಿದ್ದು ಎಂದು ನಾಗ ಚೈತನ್ಯ ಫ್ಯಾನ್ಸ್ ಆರೋಪಿಸಿದ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಮಂತಾ ಸಿಟ್ಟಾಗಿದ್ದಾರೆ. ನೇರ ಮಾತುಗಳಿಂದ ಇದಕ್ಕೆ ಉತ್ತರ ನೀಡಿದ್ದಾರೆ.
‘ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ, ಸ್ವಲ್ಪ ಪ್ರಬುದ್ಧರಾಗಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನೂ ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ. ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ’ ಎಂದು ಸಮಂತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ನಾಗ ಚೈತನ್ಯ ಅವರು ಟಾಲಿವುಡ್ನ ಖ್ಯಾತ ನಟರಲ್ಲಿ ಒಬ್ಬರು. ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹುಟ್ಟಿಕೊಂಡಿತ್ತು. ಆದರೆ, ಆ ಬಗ್ಗೆ ಅಕ್ಕಿನೇನಿ ಕುಟುಂಬದ ಯಾರೊಬ್ಬರೂ ಮೌನ ಮುರಿದಿಲ್ಲ. ಹೀಗಿರುವಾಗಲೇ ನಾಗ ಚೈತನ್ಯ ಬಗ್ಗೆ ಹೊಸಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿವೆ. ಮದುವೆಗೂ ಮೊದಲು ಸಮಂತಾ ಹಾಗೂ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರದಲ್ಲಿ ಇಬ್ಬರೂ ರಹಸ್ಯ ಕಾಯ್ದುಕೊಂಡಿದ್ದರು. ನಂತರ ಇವರು ಮದುವೆ ಆದರು. ನಾಲ್ಕು ವರ್ಷ ಸಂಸಾರ ನಡೆಸಿದ ಈ ದಂಪತಿ ಈಗ ಬೇರೆ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Tue, 21 June 22