ಒಂದು ಹಾಡು ನಾಲ್ಕು ಧ್ವನಿ: ಎಸ್ ಜಾನಕಿ ಹಾಡಿರುವ ಈ ಹಾಡು ಕೇಳಿದ್ದೀರಾ?

S Janaki: ಎಸ್ ಜಾನಕಿ ಅವರಿಗೆ ಪ್ರತಿ ಭಾಷೆಯಲ್ಲಿಯೂ ಹಲವಾರು ಸೂಪರ್ ಹಿಟ್ ಹಾಡುಗಳಿವೆ. ಸುಮಧುರ ಗಾಯಕಿ ಆಗಿದ್ದ ಜೊತೆಗೆ ಜಾನಕಿ ಅವರು ಪ್ರಯೋಗಗಳಿಗೂ ಒಗ್ಗಿಕೊಳ್ಳುವ ಮನಸ್ಥಿತಿ ಉಳ್ಳವರಾಗಿದ್ದರು. ಅವರು ಒಮ್ಮೆ ಒಂದೇ ಹಾಡನ್ನು ನಾಲ್ಕು ಭಿನ್ನ ಧ್ವನಿಗಳಿಂದ ಹಾಡಿದ್ದರು ಎಂಬುದು ನಿಮಗೆ ಗೊತ್ತೆ? ಮಾಹಿತಿ ಇಲ್ಲಿದೆ ನೋಡಿ...

ಒಂದು ಹಾಡು ನಾಲ್ಕು ಧ್ವನಿ: ಎಸ್ ಜಾನಕಿ ಹಾಡಿರುವ ಈ ಹಾಡು ಕೇಳಿದ್ದೀರಾ?
S Janaki

Updated on: Jul 12, 2026 | 2:52 PM

ಗಾಯಕಿ ಎಸ್ ಜಾನಕಿ (S Janaki) ನಿಧನ ಹೊಂದಿರುವುದು ಭಾರತೀಯ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಬಹು ದೊಡ್ಡ ನಷ್ಟವಾದಂತಾಗಿದೆ. ಸಾವಿರಾರು ಹಾಡುಗಳನ್ನು ಹಲವಾರು ಭಾಷೆಗಳಲ್ಲಿ ಹಾಡಿದ್ದ ಜಾನಕಿ ಅವರು ನಿನ್ನೆ (ಜುಲೈ 11) ಮೈಸೂರಿನಲ್ಲಿ ನಿಧನ ಹೊಂದಿದರು. ಅವರ ಆಸೆಯಂತೆ ಈಗ ಮೈಸೂರಿನಲ್ಲೇ ಅವರ ಅಂತಿಮ ಸಂಸ್ಕಾರ ಮಾಡಲು ಅಣಿ ಮಾಡಲಾಗುತ್ತಿದೆ. ಹಲವಾರು ಭಾಷೆಗಳಲ್ಲಿ ಅಸಂಖ್ಯ ಹಾಡುಗಳನ್ನು ಹಾಡಿದ್ದ ಜಾನಕಿ ಅವರಿಗೆ ಪ್ರತಿ ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಪ್ರತಿ ಭಾಷೆಯಲ್ಲಿಯೂ ಹಲವಾರು ಸೂಪರ್ ಹಿಟ್ ಹಾಡುಗಳಿವೆ. ಸುಮಧುರ ಗಾಯಕಿ ಆಗಿದ್ದ ಜೊತೆಗೆ ಜಾನಕಿ ಅವರು ಪ್ರಯೋಗಗಳಿಗೂ ಒಗ್ಗಿಕೊಳ್ಳುವ ಮನಸ್ಥಿತಿ ಉಳ್ಳವರಾಗಿದ್ದರು. ಅವರು ಒಮ್ಮೆ ಒಂದೇ ಹಾಡನ್ನು ನಾಲ್ಕು ಭಿನ್ನ ಧ್ವನಿಗಳಿಂದ ಹಾಡಿದ್ದರು ಎಂಬುದು ನಿಮಗೆ ಗೊತ್ತೆ? ಮಾಹಿತಿ ಇಲ್ಲಿದೆ ನೋಡಿ…

ಈಗೆಲ್ಲ ಆಟೋಟ್ಯೂನ್ ಸೇರಿದಂತೆ ಹಲವಾರು ಉಪಕರಣಗಳು ಮಾರುಕಟ್ಟೆಯಲ್ಲಿದ್ದು ಕೆಟ್ಟ ಧ್ವನಿಯ ನಟರುಗಳು ಸಹ ಗಾಯಕರಾಗಿದ್ದಾರೆ. ಒಬ್ಬರ ಧ್ವನಿಯನ್ನು ಇನ್ನೊಬ್ಬರ ಧ್ವನಿಯನ್ನಾಗಿ ಸಹ ಮಾಡಬಹುದಾದಷ್ಟು ತಂತ್ರಜ್ಞಾನ ಈಗ ಮುಂದುವರೆದಿದೆ. ಆದರೆ ಎಸ್ ಜಾನಕಿ ಅವರು ಯಾವುದೇ ಹೊಸ ತಂತ್ರಜ್ಞಾನ ಇಲ್ಲದೆ ಇದ್ದಾಗಲೂ ಸಹ ಒಂದೇ ಹಾಡನ್ನು ಭಿನ್ನ-ಭಿನ್ನ ಧ್ವನಿಗಳಲ್ಲಿ ಖುದ್ದು ಅವರೇ ಹಾಡಿದ್ದರು.

ಜಾನಕಿ ಅವರು ಈ ಭಿನ್ನ ಪ್ರಯೋಗ ಅಥವಾ ಸಾಹಸ ಮಾಡಿರುವುದು ತೆಲುಗಿನ ಒಂದು ಭಕ್ತಿಗೀತೆಗಾಗಿ. ತೆಲುಗಿನಲ್ಲಿ ಜಾನಕಿ ಅವರು ‘ರಾವಮ್ಮ ದುರ್ಗಮ್ಮ’ ಎಂಬ ಭಕ್ತಿಗೀತೆ ಹಾಡಿದ್ದಾರೆ. ಆ ಹಾಡಿನಲ್ಲಿ ಜಾನಕಿ ಅವರು ಬರೋಬ್ಬರಿ ನಾಲ್ಕು ವಿಭಿನ್ನ ಧ್ವನಿಗಳಲ್ಲಿ ಹಾಡನ್ನು ಹಾಡಿ ಶ್ರೋತೃಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಆ ವಿಡಿಯೋ ಯೂಟ್ಯೂಬ್​​ನಲ್ಲಿ ಲಭ್ಯವಿದ್ದು, ಈಗ ಜಾನಕಿ ಅವರು ನಿಧನ ಹೊಂದಿದ ಬಳಿಕ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

Ravamma Durgamma | S Janaki in 4 Voices (Child, Male, Female and Old Lady) | Recorded on Aug 27 2020

ಎಸ್ ಜಾನಕಿ ಅವರು ಚಿಕ್ಕ ಮಗು, ಒಬ್ಬ ಪುರುಷ, ಒಬ್ಬ ಸಾಮಾನ್ಯ ಮಹಿಳೆ, ಮತ್ತು ಒಬ್ಬ ವೃದ್ಧೆಯ ಧ್ವನಿಗಳಲ್ಲಿ ‘ರಾವಮ್ಮ ದುರ್ಗಮ್ಮ’ ಹಾಡನ್ನು ಅತೀ ಸುಂದರವಾಗಿ ಹಾಡಿದ್ದಾರೆ. ಈ ನಾಲ್ಕೂ ಧ್ವನಿಗಳು ಒಬ್ಬರದ್ದೇ ಎಂದು ಹೇಳಲು ಸಾಧ್ಯವಾಗದ ರೀತಿಯಲ್ಲಿ ಅವರು ಧ್ವನಿಗಳನ್ನು ಬದಲಾಯಿಸಿದ್ದಾರೆ. ಮಹಿಳೆ ‘ರಾವಮ್ಮ ದುರ್ಗಮ್ಮ’ ಹಾಡು ಹಾಡುವಾಗ ಮಗು ಬಂದು ತಾನೂ ಹಾಡು ಕಲಿಯಬೇಕು ಎನ್ನುವುದು, ಬಳಿಕ ವೃದ್ಧೆ ಬಂದು ಮಗುವಿಗೆ ಹಾಡು ಕಲಿಸು ಎನ್ನುವುದು ಬಳಿಕ ಕುಟುಂಬದ ಯಜಮಾನ ಬಂದು ಮಾತನಾಡುವುದು, ಹೀಗೆ ಒಂದು ಪ್ರಸಂಗವನ್ನೇ ಜಾನಕಿ ಅವರು ಸೃಷ್ಟಿಸಿದ್ದಾರೆ. ಎಲ್ಲರಿಗೂ ಖುದ್ದು ತಾವೊಬ್ಬರೇ ಧ್ವನಿ ನೀಡಿದ್ದಾರೆ.

ಎಸ್ ಜಾನಕಿ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿಕ್ಕ ಮಕ್ಕಳ ಹಾಡುಗಳಿಗೆ ಧ್ವನಿ ಆಗಿದ್ದಾರೆ, ಮಕ್ಕಳಂತೆ ಖುದ್ದು ಜಾನಕಿ ಅವರೇ ಹಾಡಿದ್ದಾರೆ. ಆದರೆ ನಾಲ್ಕು ಭಿನ್ನ ವ್ಯಕ್ತಿಗಳ, ವಯಸ್ಸಿನವರ ಧ್ವನಿಯನ್ನು ಜಾನಕಿ ಒಬ್ಬರೇ ಅನುಕರಣೆ ಮಾಡಿರುವುದು ಅದ್ಭುತ. ಹಾಡು ಯೂಟ್ಯೂಬ್​​ನಲ್ಲಿದೆ. ಆಸಕ್ತರು ವೀಕ್ಷಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us