ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!

|

Updated on: Apr 05, 2021 | 5:28 PM

ಪ್ರಮೋಷನ್​ ವೇಳೆ ಸಾಯಿ ಪಲ್ಲವಿ ತಿಳಿ ನೀಲಿ ಬಣ್ಣದ ಸೀರೆ ತೊಟ್ಟಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಈ ಸ್ಯಾರಿ ತೊಟ್ಟಿದ್ದ ಅವರು ಕ್ಯಾಮೆರಾಗಿ ಸಖತ್​ ಆಗಿ ಪೋಸ್​ ನೀಡಿದ್ದಾರೆ.

ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!
ಸಾಯಿ ಪಲ್ಲವಿ
Follow us on

ಸ್ಟಾರ್​ ನಟ-ನಟಿಯರು ದುಬಾರಿ ಬೆಲೆಯ ಬಟ್ಟೆ, ಬ್ಯಾಗ್​, ವಾಚ್​ ಧರಿಸುತ್ತಾರೆ. ಕೆಲವೊಮ್ಮೆ ಇದು ಅಭಿಮಾನಿಗಳ ಕಣ್ಣಿಗೆ ಬೀಳುತ್ತದೆ. ಅಷ್ಟೇ ಅಲ್ಲ, ಆ ಬಟ್ಟೆಯ ಬೆಲೆ ಎಷ್ಟು, ಅದು ಯಾವ ಬ್ರ್ಯಾಂಡ್ ಎನ್ನುವ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಚ್ಚರಿವ್ಯಕ್ತಪಡಿಸುತ್ತಾರೆ. ಈಗ ದಕ್ಷಿಣ ಭಾರತದ ಸ್ಟಾರ್​ ನಟಿ ಸಾಯಿ ಪಲ್ಲವಿ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅವರು ತೊಟ್ಟಿರುವ ಬಟ್ಟೆಯ ಬೆಲೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಮುಂಬರುವ ‘ಲವ್​ ಸ್ಟೋರಿ’ ಸಿನಿಮಾ ಪ್ರಮೋಷನ್​ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಶೇಖರ್​ ಕಮ್ಮುಲಾ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇತ್ತೀಚೆಗೆ ಈ ಮೂವರು ರಾನಾ ದಗ್ಗುಬಾಟಿ ಚ್ಯಾಟ್ ಶೋಗೆ ಆಗಮಿಸಿದ್ದರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದಾದ ಬೆನ್ನಲ್ಲೇ ಬೇರೆ ಬೇರೆ ಕಡೆ ತೆರಳಿ ತಂಡ ಪ್ರಚಾರ ಕಾರ್ಯ ನಡೆಸುತ್ತಿದೆ.

ಪ್ರಮೋಷನ್​ ವೇಳೆ ಸಾಯಿ ಪಲ್ಲವಿ ತಿಳಿ ನೀಲಿ ಬಣ್ಣದ ಸೀರೆ ತೊಟ್ಟಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಈ ಸ್ಯಾರಿ ತೊಟ್ಟಿದ್ದ ಅವರು ಕ್ಯಾಮೆರಾಗಿ ಸಖತ್​ ಆಗಿ ಪೋಸ್​ ನೀಡಿದ್ದಾರೆ. ಈ ವೇಳೆ ನಾಚಿ ನೀರಾಗಿದ್ದಾರೆ. ಅವರ ಸೀರೆ ಫೋಟೋ ಹೈಲೈಟ್​ ಆಗೋ ಬದಲು ಅವರು ನಾಚಿಕೊಂಡಿದ್ದರ ಬಗ್ಗೆಯೇ ಚರ್ಚೆ ಆಗುತ್ತಿದೆ.

ಸಾಯಿ ಪಲ್ಲವಿ ಎಲ್ಲಾ ವಿಚಾರವನ್ನೂ ಸಿಂಪಲ್​ ಆಗಿಟ್ಟುಕೊಳ್ಳುತ್ತಾರೆ. ಆನ್​ ಸ್ಕ್ರೀನ್​ನಲ್ಲೂ ಅವರು ಮೇಕಪ್​ ಮಾಡಿಕೊಂಡಿದ್ದು ಕೂಡ ತುಂಬಾನೇ ಅಪರೂಪ. ಸದ್ಯ ಅವರ ನಾಚಿ ನೀರಾಗಿ ನಗುತ್ತಿರುವ ಫೋಟೋ ತುಂಬಾನೇ ಹೈಲೈಟ್​ ಆಗಿದೆ.

‘ಲವ್​ ಸ್ಟೋರಿ’ ಸಿನಿಮಾ ಏಪ್ರಿಲ್​ 16ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್​ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಸಖತ್​​ ಎಗ್ಸೈಟ್​ ಆಗಿದ್ದಾರೆ. ಸದ್ಯ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಮಂಗ್ಲಿ ಹಾಡಿದ, ನಟಿ ಸಾಯಿ ಪಲ್ಲವಿ ನಟಿಸಿದ ’ಸರಂಗಾ ದರಿಯಾ’ ಹಾಡು ಮುರಿಯುತ್ತಿದೆ ದಾಖಲೆಗಳನ್ನು…!