Prabhas: ಪ್ರಭಾಸ್​ ಮನೆಗೆ ಬಂತು ದುಬಾರಿ ಲ್ಯಾಂಬೋರ್ಗಿನಿ! ಬೆಲೆ ಕೇಳಿ ಸುಸ್ತಾದ ಫ್ಯಾನ್ಸ್​

ಪ್ರಭಾಸ್​ ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳು ಇವೆ. ಅವುಗಳ ಜೊತೆಗೆ ಈಗ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿದೆ. ಅದರ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗುತ್ತಿವೆ.

Prabhas: ಪ್ರಭಾಸ್​ ಮನೆಗೆ ಬಂತು ದುಬಾರಿ ಲ್ಯಾಂಬೋರ್ಗಿನಿ! ಬೆಲೆ ಕೇಳಿ ಸುಸ್ತಾದ ಫ್ಯಾನ್ಸ್​
ಪ್ರಭಾಸ್​ - ಲ್ಯಾಂಬೋರ್ಗಿನಿ

Updated on: Mar 29, 2021 | 8:13 AM

ಬಾಹುಬಲಿ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್​ ಪ್ಯಾನ್​ ಇಂಡಿಯಾ ಹೀರೋ ಆಗಿ ಮಿಂಚಲು ಆರಂಭಿಸಿದರು. ಅವರ ಕಾಲ್​ಶೀಟ್​ಗಾಗಿ ನೂರಾರು ನಿರ್ಮಾಪಕರು ಕಾಯುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಸಂಭಾವನೆ ಹೆಚ್ಚಿದೆ. ಈಗ ಒಂದು ದುಬಾರಿ ಕಾರು ಖರೀದಿಸುವ ಮೂಲಕ ಪ್ರಭಾಸ್​ ಸುದ್ದಿ ಆಗುತ್ತಿದ್ದಾರೆ. ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳು ಇವೆ. ಅವುಗಳ ಜೊತೆಗೆ ಈಗ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿದೆ. ಅದರ ಬೆಲೆ ಕೇಳಿ ಫ್ಯಾನ್ಸ್​ ಅಚ್ಚರಿಪಟ್ಟಿದ್ದಾರೆ.

ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ಕೂಡ ಲ್ಯಾಂಬೋರ್ಗಿನಿ ಕೊಂಡುಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಅಂಥ ದುಬಾರಿ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಸದ್ಯ ಪ್ರಭಾಸ್​ ಅವರ ಮನೆಗೆ ಹೊಸ ಅತಿಥಿಯ ರೂಪದಲ್ಲಿ ಲ್ಯಾಂಬೋರ್ಗಿನಿ ಬಂದಿದೆ. ಆರೆಂಜ್​ ಬಣ್ಣದ ಈ ಕಾರಿನ ಅಂದಕ್ಕೆ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ.

ಪ್ರಭಾಸ್​ ಮನೆಯಲ್ಲಿ ಈಗಾಗಲೇ ಬಿಎಂಡಬ್ಲ್ಯೂ, ಮರ್ಸೆಡಿಸ್​, ಆಡಿ ಕ್ಯೂ5 ಮುಂತಾದ ಕಾರುಗಳಿವೆ. ಅವೆಲ್ಲಕ್ಕಿಂತಲೂ ಈಗ ಬಂದಿರುವ ಲ್ಯಾಂಬೋರ್ಗಿನಿ ಬಗ್ಗೆ ಪ್ರಭಾಸ್​ಗೆ ವಿಶೇಷ ಪ್ರೀತಿ. ಯಾಕೆಂದರೆ, ಲ್ಯಾಂಬೋರ್ಗಿನಿ ಕಾರು ಖರೀದಿಸಬೇಕು ಎಂಬುದು ತಮ್ಮ ಕನಸು ಎಂದು ಈ ಹಿಂದಿನ ಒಂದು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು. ಈಗ ಅದು ನನಸಾಗಿದೆ. ಅದಕ್ಕಾಗಿ ಎಲ್ಲರೂ ಪ್ರಭಾಸ್​ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಪ್ರಭಾಸ್​ ಮನೆಮುಂದೆ ಬಂದು ನಿಂತಿರುವ ಲ್ಯಾಂಬೋರ್ಗಿನಿಯ ಫೋಟೋ ಮತ್ತು ವಿಡಿಯೋಗಳು ಎಲ್ಲೆಡೆ ವೈರಲ್​ ಆಗುತ್ತಿವೆ. ಹಾಗಾದರೆ ಈ ಕಾರ್​ನ ಬೆಲೆ ಎಷ್ಟು ಎಂದು ಅನೇಕರು ಕೇಳುತ್ತಿದ್ದಾರೆ. ಎಲ್ಲ ಹೈ ಅಡ್ವಾನ್ಸ್​ ಫೀಚರ್​ಗಳು ಈ ಕಾರಿನಲ್ಲಿ ಇದ್ದು, ಇದರ ಬೆಲೆ ಬರೋಬ್ಬರಿ 6 ಕೋಟಿ ರೂ. ಎನ್ನಲಾಗಿದೆ. ದಿನದಿಂದ ದಿನಕ್ಕೆ ಪ್ರಭಾಸ್ ಅವರ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಪ್ರಭಾಸ್​ ಲವರ್​ ಬಾಯ್​ ಆಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಅದರ ಜೊತೆಗೆ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿ ಪ್ರಭಾಸ್​ ಅಭಿನಯಿಸುತ್ತಿದ್ದಾರೆ. ಈ ಚಿತ್ರ ದೊಡ್ಡಮಟ್ಟದಲ್ಲಿ ಹೈಪ್​ ಸೃಷ್ಟಿ ಮಾಡಿದೆ. ಓಂ ರಾವುತ್ ನಿರ್ದೇಶನ ಮಾಡುತ್ತಿರುವ ‘ಆದಿಪುರುಷ್​’ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿವೆ.

ಇದನ್ನೂ ಓದಿ: ಪ್ರಭಾಸ್​ ಜತೆ 75 ದಿನ ಕಳೆಯಲಿದ್ದಾರೆ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ರಾಧೆ ಶ್ಯಾಮ್​ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಕಂಪ್ಲೆಂಟ್​ ನೀಡಿದ ಪ್ರಭಾಸ್​ ಫ್ಯಾನ್ಸ್ !

Published On - 8:06 am, Mon, 29 March 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us