
ನಟ ಸಲ್ಮಾನ್ ಖಾನ್ ಹೆಸರು ಹೇಳಿ ಅನೇಕರು ಮೋಸ ಮಾಡಿದ್ದು ಇದೆ. ಈ ವಿಚಾರದಲ್ಲಿ ಸಲ್ಮಾನ್ ಖಾನ್ಗೆ ಬೇಸರ ಇದೆ. ಅವರು ಅನೇಕ ಬಾರಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈಗ ಮತ್ತೆ ಅದೇ ರೀತಿ ಆಗಿದೆ. ಅವರು ಅಮೆರಿಕದಲ್ಲಿ ಪರ್ಫಾರ್ಮ್ ಮಾಡುತ್ತಾರೆ ಎಂದು ಹೇಳಿ ಕೆಲವರು ದುಡ್ಡು ಮಾಡುವ ಕುತಂತ್ರಕ್ಕೆ ಮುಂದಾಗಿದ್ದರು. ಈ ವಿಚಾರವಾಗಿ ಸಲ್ಮಾನ್ ಖಾನ್ ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಅವರು ಎಚ್ಚರಿಕೆ ಕೂಡ ನೀಡಿದ್ದಾರೆ.
ಅಕ್ಟೋಬರ್ 5ರಂದು ಅಮೆರಿಕದಲ್ಲಿ ಸಲ್ಮಾನ್ ಖಾನ್ ಅವರು ಪರ್ಫಾರ್ಮೆನ್ಸ್ ಮಾಡುತ್ತಾರೆ ಎನ್ನುವ ಪೋಸ್ಟರ್ ವೈರಲ್ ಆಗಿದೆ. ಅಲ್ಲದೆ, ಟಿಕೆಟ್ ಬುಕಿಂಗ್ಗೂ ಅವಕಾಶ ನೀಡಲಾಗಿದೆ. ಈ ವಿಚಾರವಾಗಿ ಸಲ್ಮಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ. ‘ಸಲ್ಮಾನ್ ಖಾನ್ ಆಗಲಿ ಅವರ ಯಾವುದೇ ಕಂಪನಿ ಆಗಲಿ ಪ್ರೋಗ್ರಾಂಗಳನ್ನು ಆಯೋಜನೆ ಮಾಡುತ್ತಿಲ್ಲ. ಅವರು ಪರ್ಫಾರ್ಮೆನ್ಸ್ ನೀಡುತ್ತಾರೆ ಎಂದು ವರದಿ ಆಗಿದ್ದರೆ ಅದು ಸಂಪೂರ್ಣವಾಗಿ ಸುಳ್ಳು’ ಎಂದಿದ್ದಾರೆ ಸಲ್ಲು.
‘ನನ್ನ ಕಾರ್ಯಕ್ರಮ ಎಂದು ಹೇಳಿ ಮಾಡಲಾಗುತ್ತಿರುವ ಯಾವುದೇ ಇಮೇಲ್, ಮೆಸೇಜ್ ಹಾಗೂ ಜಾಹೀರಾತುಗಳನ್ನು ನಂಬಬೇಡಿ. ಸಲ್ಮಾನ್ ಖಾನ್ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಲ್ಮಾನ್ ಖಾನ್ ಅವರ ಮ್ಯಾನೇಜರ್ ಜಾರ್ಡಿ ಪಟೇಲ್ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಕ್ ಬುಕಿಂಗ್ ಸೈಟ್ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ಸದ್ಯ ಸಲ್ಮಾನ್ ಅವರು ಈ ವಿಚಾರವಾಗಿ ಸಿಟ್ಟಾಗಿದ್ದಾರೆ. ತಮ್ಮ ಹೆಸರಲ್ಲಿ ಮೋಸ ನಡೆಯುತ್ತಿರುವುದನ್ನು ಅವರು ಸಹಿಸುತ್ತಿಲ್ಲ.
ಇದನ್ನೂ ಓದಿ: ಸಲ್ಮಾನ್ ಖಾನ್ ಧರಿಸಿದ ವಾಚಿನಲ್ಲಿ 714 ವಜ್ರಗಳು; ವಾಚ್ ಮಾರಿದ್ರೆ ಬರುತ್ತೆ 5 ರೋಲ್ಸ್ ರಾಯ್ಸ್ ಕಾರು
ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 18’ಗೆ ಆ್ಯಂಕರ್ ಆಗಿ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಸೀಸನ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ಇದರ ಜೊತೆಗೆ ಅವರು ‘ಸಿಖಂದರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.